ಹಾವೇರಿ :
ಲೋಕಸಭಾ ಚುನಾವಣೆಗೆ ಬಿಎಸ್ಪಿ ಪಕ್ಷವನ್ನು ಬೂತ್ ಮಟ್ಟದಿಂದ ಸಧೃಡಗೊಳಿಸುವ ಮೂಲಕ ಸಿದ್ದರಾಗಿ ಎಂದು ಬಿಎಸ್ಪಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಡಾ|| ರಮೇಶ್ ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ದಾನಮ್ಮದೇವಿ ದೇವಸ್ಥಾನದ ಹತ್ತಿರವಿರುವ ಬಹುಜನ ಸಮಾಜ ಪಕ್ಷದ ಕಛೇರಿಯಲ್ಲಿ ಜಿಲ್ಲಾ ಮಟ್ಟದ ಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರತಿ ತಾಲೂಕ ಹಾಗೂ ಗ್ರಾಮ ಮಟ್ಟದಿಂದ ಸಂಘಟನೆ ಮಾಡುವ ಜವಾಬ್ದಾರಿ ಪದಾಧಿಕಾರಿಗಳ ಮೇಲೆವಿದ್ದು, ಬೂತ್ ಮಟ್ಟದ ಸಮಿತಿಗಳಿಗೆ ಹೆಚ್ಚಿನ ಇದೆ. ಪಕ್ಷ ಸಂಘಟಿಸುವ ಕ್ರಿಯಾಶೀಲ ಕಾರ್ಯಕರ್ತರನ್ನು ಗುರುತಿಸಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿ ಅವರ ಪಟ್ಟಿಯನ್ನು ರಾಜ್ಯ ಸಮಿತಿಗೆ ಕಳುಹಿಸಿ. ಲೋಕಸಭೆ ಚುನಾವಣೆ ಬಿಎಸ್ಪಿ ಪಕ್ಷಕ್ಕೆ ಮಹತ್ವಪೂರ್ಣವಾಗಿದೆ. ಅಕ್ಕ ಮಾಯಾವತಿಯವರು ರಾಷ್ಟ ರಾಜಕಾರಣದಲ್ಲಿ ಉನ್ನತವಾಗಿ ಬೆಳೆಯಲು ಎಲ್ಲ ರಾಜ್ಯಗಳ ಫಲಿತಾಂಶ ಮುಖ್ಯ.
ಕಾರ್ಯಕರ್ತರೆ ಪಕ್ಷದ ಬೂನಾದಿ ಪಕ್ಷದ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳಿ ಎಂದು ಡಾ|| ರಮೇಶ್ ಹೇಳಿದರು. ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಪಕ್ಷ ಸಂಘಟನೆ ಹಾಗೂ ಬಲವರ್ದನೆಗಾಗಿ ಜಿಲ್ಲೆಯ ಎಲ್ಲ ಘಟಕಗಳ ಪದಾಧಿಕಾರಿಗಳ ಪಟ್ಟಿಯನ್ನು ಪಕ್ಷದ ಕೆಲಸ ಮಾಡುವವರನ್ನು ಗುರುತಿಸಿ ಶೀಘ್ರ ಕೊಡಲಾಗುವುದು. ಬಿಎಸ್ಪಿ ಪಕ್ಷದ ಎಲ್ಲ ವರ್ಗದ ಜನರ ಆಶೋತ್ತರ ಇಡೇರಿಸುವ ಉದ್ದೇಶಿತ ಪಕ್ಷವಾಗಿದೆ.
ಎಲ್ಲ ಕಾರ್ಯಕರ್ತರು ಜವಾಬ್ದಾರಿಯಿಂದ ಪಕ್ಷ ಸಂಘಟನೆ ಮಾಡಲು ಮುಂದಾಗುವಂತಾಗಬೇಕು ಎಂದರು. ಸಭೆಯಲ್ಲಿ ಬಿಎಸ್ಪಿ ಪಕ್ಷ ಮುಖಂಡರಾದ ಎನ್ ಟಿ ಮಂಜುನಾಥ.ಲಕ್ಷ್ಮಣ ಗಾಣಗೇರ,ರುದ್ರಯ್ಯ ಸಾಲಿಮಠ. ಶಂಭುಲಿಂಗಯ್ಯ ಹನಗೋಡಿಮಠ.ಅಬ್ದುಲ್‍ಖಾದರ ಧಾರವಾಡ, ವಿಜಯಕುಮಾರ ವಿರಕ್ತಮಠ,ಸುರೇಶ ಕಬ್ಬೂರ.ಶಿವಕುಮಾರ ತಳವಾರ.ಲೋಕೇಶ.ರಮೇಶ ಗಾಳೆಪ್ಪನವರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು