ಹಾವೇರಿ:
ತಾಲೂಕಿನ ಸುಕ್ಷೇತ್ರ ಹನುಮನಹಳ್ಳಿಯ ಹಾಲ ಶಿವಯೋಗಿಗಳವರ ಪುರಾಣ ಪ್ರಸಿದ್ಧ ಮುಳ್ಳು ಗದ್ದುಗೆ ಜಾತ್ರಾ ಮಹೋತ್ಸವದ ತದ್ರೂಪಿಯಾಗಿ ಮುಳ್ಳುಗದ್ದುಗೆ ಮಹಾ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ವೇ.ಮೂ.ಹಾಲ ಸಿದ್ದರಾಮ ಸ್ವಾಮಿಗಳು ಅವರು ಪ್ರತಿವರ್ಷ ಯುಗಾದಿಯ ಸಂದರ್ಭದಲ್ಲಿ ಹಾಲ ಶಿವಯೋಗಿಗಳವರ ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವ ನಡೆಯುತ್ತದೆ, ಅದರ ತದ್ರೂಪಿಯಾಗಿ ಗುರುಗಳ ಆಶೀರ್ವಚನದಂತೆ ವೀರೇಶ್ ಆಚಾರಿ ಅವರು ತಯಾರಿಸಿದ ಮುಳ್ಳುಗದ್ದುಗೆ ಜೊತೆಗೆ ಅದರ ಮಂಟಪವನ್ನು ಸಹ ತಯಾರಿಸಿದ್ದಾರೆ. ಇವರಿಗೆ ಊರಿನ ಗ್ರಾಮಸ್ಥರೆಲ್ಲರೂ ಕೈಜೋಡಿಸಿದ್ದಾರೆ.
ವಿಘ್ನ ವಿನಾಶಕನನ್ನು ಕಣ್ಣಾರೆ ಕಣ್ತುಂಬಿಕೊಳ್ಳಲು ಗ್ರಾಮದ ಸುತ್ತಮುತ್ತಲಿರುವ ಕನವಳ್ಳಿ, ಕಾಟೇನಹಳ್ಳಿ,ತಿಮ್ಮೇನಹಳ್ಳಿ, ಭರಡಿ, ಕೂರಗುಂದ, ಕಳ್ಳಿಹಾಳ ಹಾಗೂ ಕೆಂಗೊಂಡ ಗ್ರಾಮದ ಭಕ್ತಾದಿಗಳು ಬಂದು ಮುಳ್ಳುಗದ್ದುಗೆ ಮಹಾಗಣಪತಿ ನೋಡುವುದರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ದರ್ಶನ ಪಡೆಯುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲೆಂದು ವರ ನೀಡುವ ವಿಘ್ನ ವಿನಾಶಕ ನಲ್ಲಿ ಭಕ್ತಾದಿಗಳು ಸಹೃದಯದಿಂದ ತಮ್ಮ ಇಷ್ಟಾರ್ಥಗಳನ್ನು ಪೂರೈಸಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
