ಯುವರಾಜನ ಆಗಮನಕ್ಕೆ ಸಜ್ಜಾದ ವೇದಿಕೆ

ಶಿಗ್ಗಾವಿ:

      ಇಂದು ಶುಕ್ರವಾರ ಮದ್ಯಾಹ್ನ 03 ಘಂಟೆಯ ಪಟ್ಟಣದ ಹೊರವಲಯದಲ್ಲಿರುವ ಬೇನಕಹಳ್ಳಿಯವರ ಹೊಲ (ತರಳಬಾಳು ಹುಣ್ಣಿಮೆ ಮೈದಾನ) ದಲ್ಲಿ ಕಾಗ್ರೇಸ್ ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಶಿಗ್ಗಾಂವ-ಸವಣೂರ ಮತಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿ ಬಿ.ಜೆ.ಪಿಯ ವೈಪಲ್ಯತೆಗಳ ಕುರಿತು ಜನರಿಗೆ ತಿಳಿಸಲು ಆಗಮಿಸಲಿದ್ದು ಸಕಲ ಸಿದ್ದತೆಯಲ್ಲಿ ವೇಧಿಕೆ ಸಜ್ಜಾಗಿದೆ.

      ಸುದ್ದಿಗಾರರೋಂದಿಗೆ ಮಾತನಾಡಿದ ಕಾಂಗ್ರೇಸ್ ಅಭ್ಯರ್ಥಿ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ 165 ಬಡವರ ಪರವಾದ ಯೋಜನೆಗಳನ್ನು ಕಾಂಗ್ರೇಸ್ ಸರ್ಕಾರ ನೀಡಿದೆ, ಈ ಎಲ್ಲ ಯೋಜನೆಗಳೇ ಈ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ ರಾಜ್ಯದ ಜನತೆ ಮತ್ತೊಮ್ಮೆ ಕಾಂಗ್ರೇಸ್ ಪಕ್ಷಕ್ಕೆ ಆಶೀರ್ವಧಿಸಲು ನಿರ್ಣಯಿಸಿದ್ದಾರೆ. ಆದ್ದರಿಂದ ನಮ್ಮ ಕ್ಷೇತ್ರದಲ್ಲಿ ಈ ಬಾರಿ ಪ್ರಚಂಡ ಬಹುಮತದಿಂದ ಕಾಂಗ್ರೇಸ್ ಪಕ್ಷ ಗೆಲ್ಲುವ ನಿಟ್ಟಿನಲ್ಲಿ ಭಾವಿ ಪ್ರಧಾನಿ ರಾಹುಲ್ ಗಾಂಧಿ ಆಗಮಿಸುತ್ತಿರುವುದು ಯುವ ಸಮೂಹದಲ್ಲಿ ಉತ್ಸಾಹ ಇಮ್ಮಡಿಯಾಗಿದೆ.

      ಕಾರ್ಯಕ್ರಮಕ್ಕೆ ಕೆ.ಪಿ.ಸಿ.ಸಿ ರಾಜ್ಯ ಉಸ್ತುವಾರಿ ಕೆ ವೇಣುಗೋಪಾಲ, ಮುಖ್ಯಮಂತ್ರಿ ಸಿದ್ದಾರಾಮಯ್ಯ, ಕೆ.ಪಿ.ಸಿ.ಸಿ ರಾಜ್ಯಾದ್ಯಕ್ಷ ಜಿ. ಪರಮೇಶ್ವರ, ಇನ್ನು ಹಲವಾರು ರಾಜ್ಯ ಮುಖಂಡರು ಸೇರುವ ನಿರೀಕ್ಷೆಯಿದೆ ಎಂದರು. ಈ ಕಾರ್ಯಕ್ರಮದಲ್ಲಿ 30 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

      ಕೆ.ಪಿ.ಸಿ.ಸಿ ಉಸ್ತುವಾರಿ ಮುರಳಿಶೆಟ್ಟಿ, ಬ್ಲಾಕ ಕಾಂಗ್ರೇಸ್ ಕೋಶಾದ್ಯಕ್ಷ ವಿರೇಶ ಆಜೂರ, ಅಧ್ಯಕ್ಷ ಎಮ್.ಎನ್.ವೆಂಕೋಜಿ, ಜಿ.ಪಂ ಸದಸ್ಯ ಬಸವರಾಜ ದೇಸಾಯಿ, ವಕೀಲರಾದ ರಾಜೇಶ ಕಮ್ಮಾರ, ಎಸ್.ಎಸ್.ಪೂಜಾರ, ಪ್ರಧಾನ ಕಾರ್ಯಧರ್ಶಿ ಹನುಮರೆಡ್ಡಿ ನಡುವಿನಮನಿ, ಪುರಸಭೆ ಮಾಜಿ ಅಧ್ಯಕ್ಷ ಕರೀಮ ಮೊಗಲಲ್ಲಿ, ಶಬ್ಬೀರ ಮಕಾಂದಾರ, ಮಂಜುನಾಥ ತಿಮ್ಮಾಪೂರ ಸೇರಿದಂತೆ ಅನೇಕ ಮುಖಂಡರು ಇದ್ದರು.

Recent Articles

spot_img

Related Stories

Share via
Copy link