ಬೇಟಿ ಬಚಾವ್, ಬೇಟಿ ಪಡಾವ್

0
41

ಹಾವೇರಿ :

      ಇಲ್ಲಿಯ ಶಿವಾಜಿ ನಗರದಲ್ಲಿರುವ ಇಡಾರಿ ಸೇವಾ ಸಂಸ್ಥೆಯ ಸ್ವಧಾರಾ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಹೆಣ್ಣು ಸಂತಾನದ ಪೋಷಣೆ ಮತ್ತು ಪ್ರೇರಣೆ ನೀಡುವ ಉದ್ದೇಶದ ಹೆಣ್ಣು ಸಂರಕ್ಷಣಾ ದಿನ ಎಂಬ ಕಾರ್ಯಕ್ರಮ ಜರುಗಿತು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ ಹಾಗೂ ಇಡಾರಿ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಅಂತರ್‍ರಾಷ್ಟ್ರೀಯ ಹೆಣ್ಣುಮಕ್ಕಳ ಸಂರಕ್ಷಣಾ ಮತ್ತು ಹುಟ್ಟು ಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿತ್ತು.

        ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ 5 ಪುಟಾಣಿಗಳೊಂದಿಗೆ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪಿ. ಎಸ್ ಶೆಟ್ಟಪ್ಪನವರು ಕೇಕ್ ದೀಪಗಳನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು.

       ಬೇಟಿ ಬಚಾವ್, ಬೇಟಿ ಪಡಾವ್ ಉದ್ಘೋಷ ಕೇವಲ ಘೋಷಣೆಯಲ್ಲ, ಅದು ಹೆಣ್ಣು ಹತ್ಯೆಯನ್ನು ಖಂಡಿಸುವ ವುದರ ಜೊತೆಗೆ ಹೆನ್ಣನ್ನು ರಕ್ಷಿಸಿ ಪೋಷಿಸುವ ಸಂದೇಶವಾಗಿದೆ. ಮುಗ್ಧ ಹೆಣ್ಣು ಬಾಲ್ಯ ಕಮರದಂತೆ ನೋಡಿಕೊಂಡು ಅರಳಿಸುವ ಸಾಮಾಜಿಕ ಹೊಣೆಗಾರಿಕೆ ನಮ್ಮದಾಗಬೇಕು. ಹೆಣ್ಣು ಸಮಾಜದ ಕಣ್ಣು ಮಾತ್ರವಲ್ಲ, ಅಂತಃಕರಣದ ಹೃದಯ ಬಡಿತವೂ ಆಗಿದೆ ಶೆಟ್ಟಪ್ಪನವರ ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಇಡಾರಿ ಸೇವಾ ಸಂಸ್ಥೆಯ ಅದ್ಯಕ್ಷೆ ಶ್ರೀಮತಿ ಪರಿಮಳಾ ಜೈನ್ ಇದೊಂದು ಅಪರೂಪದ ಕಾರ್ಯಕ್ರಮವಾಗಿದ್ದು, ಹೆಣ್ಣು ಜೀವಕ್ಕೆ ಸಾಂತ್ವನ ಮಾತ್ರವಲ್ಲ ಚೈತನ್ಯ ನೀಡುವ ಹೆಣ್ಣು ಸಂರಕ್ಷಣಾ ದಿನವಾಗಿದೆ ಎಂದರು.

        ಪುಟಾಣುಗಳಾದ ಮೋಹಿನ್ ಖಾದರ್ ಗೌಸ್ ನಾಸಿಪುಡಿ, ಹಬೀಬಾ ದಾದಾಪೀರ್ ಸೊಲ್ಲಪೂರ ( ಬಂಕಾಪೂರ ) ರೇಖಾ ಬಸವರಾಜ ಕುನ್ನೂರ ( ಕರ್ಜಗಿ ) ಸಂಗೀತಾ ಕುಂಬಾರ, ಸರಸ್ವತಿ ಮಾಳಗಿ ( ವರದಾಹಳ್ಳಿ ) ಮೆಹನಾಜ್ ಶರೀಫ್ ಮುಲ್ಲಾ ( ನೆಗಳೂರ ) 5 ರಜನ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ಸವಿ ಸವಿದರು.

         ವೇದಿಕೆಯಲ್ಲಿ ಆಶಾಕಿರಣ ಸಂಸ್ಥೆಯ ಮುತ್ತುರಾಜ ಮಾದರ, ಶಿಶು ಅಭಿವೃದಿ ಯೋಜನಾಧಿಕಾರಿ ಉಮಾ ಕೆ ಎಸ್, ಸ್ವಧಾರಾದ ಲಕ್ಷ್ಮೀ ಸಿಂಗಣ್ಣನವರ, ಜಿಲ್ಲಾ ಮಕ್ಕಳ ಬಾಲಕಿಯರ ಬಾಲ ಸಂರಕ್ಷಣಾ ಘಟಕದ ಶಶಿಕಲಾ ಶಿಡೇನೂರ, ಆರೋಗ್ಯ ಮತ್ತು ಮಹಿಳಾ ಮಕ್ಕಾಳಾಭಿವೃದ್ಧಿ ಸಂಸ್ಥೆಯ ರಾಜೇಶ್ವರಿ ಕೊಂಡಿ, ವಸಂತಕುಮಾರಿ, ಹೊನ್ನಮ್ಮ, ಬಂಕಾಪೂರ ಸಮತ್ವನ ಕೇಂದ್ರದ ಲತಾ, ಹೇಮಾ ಶೈಲಾ ಮುಂತಾದವರು ಭಾಗವಹಿಸಿದ್ದರು.ಎಡಾರಿ ಸಂಸ್ಥೆಯ ಪರಿಮಳಾ ಜೈನ್ ಒಟ್ಟು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here