ಶಿಗ್ಗಾವಿ :
ಶಿಗ್ಗಾವಿ ಪಟ್ಟಣದ ಶಿಕ್ಷಕ ಮತ್ತು ಲೇಖಕರಾಧ ನಾಗಪ್ಪ ಬೆಂತೂರರವರ ಸಾಹಿತ್ಯ ಸೇವೆ ಅವರ ಸಾಮಾಜಿಕ ಕಳಕಳಿಯುಳ್ಳ ಬರಹಗಳು ಲೇಖನಗಳು ನೌಕರರ ಬಗೆಗಿನ ಕಾಳಜಿ ಸಾಮಾಜಿಕ ಸೇವೆ ಮಕ್ಕಳಿಗೆ ಕಲಿಸುವುದರ ಬಗೆಗಿನ ಅತ್ಯುತ್ಸಾಹ ಹಾಗೂ ಅವರು ಬರೆದ ಹಲವಾರು ಕೃತಿಗಳು ಸಾಹಿತ್ಯ ಸೇವೆ ಪರಿಗಣಿಸಿ ಬೆಂಗಳೂರಿನ ಶಾರದಾಂಬನಗರದ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಕಾಲೇಜನಲ್ಲಿ ಬೆಳಕು ಶೈಕ್ಷಣಿಕ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಟ್ರಸ್ಟ ವತಿಯಿಂದ ಪ್ರಥಮ ಬಾರಿಗೆ ಒಂದೇ ದಿನದ ಕಾರ್ಯಕ್ರಮದ ಹಲವು ವೇದಿಕೆಯಲ್ಲಿ 500 ಕವಿಗಳ ದಾಖಲಾರ್ಹ ಕವಿಗೊಷ್ಠಿ ಪುಸ್ತಕ ಬಿಡುಗಡೆ, ಬೆಳಕು ಸಂಸ್ಥೆಯ ಪದಾಧಿಕಾರಿಗಳಿಗೆ ಪದಗ್ರಹಣ, ಉಪನ್ಯಾಸ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಅಖಿಲ ಕರ್ನಾಟಕ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ “ಯುವ ಕವಿರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇವರ ಈ ಸಾಧನೆಗೆ ತಾಲೂಕಿನ ಸಾಹಿತ್ಯಾಸಕ್ತರು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ