ಕೂಡ್ಲಿಗಿ:
ನಾಗರಿಕ ಹಿತ ರಕ್ಷಣಾ ವೇದಿಕೆಯಿಂದ ನಡೆಸುತ್ತಿರುವ 11ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಭಾನುವಾರ ಚಂದ್ರಶೇಖರ್ ಆಜಾದ್ ರಂಗಮಂದಿರದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಚಿಕ್ಕ ಚಿಕ್ಕ ಬಾಲಕಿಯರು ಸೇರಿದಂತೆ 130ಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದು, ಚಿತ್ತಾಕರ್ಷಕ ರಂಗೋಲಿಗಳನ್ನು ಹಾಕಿದರು. ಟಿ. ತ್ರಿವೇಣಿ(ಪ್ರಥಮ), ಟಿ. ಸರಸ್ಪತಿ (ದ್ವಿತೀಯ), ಗೀತಾ (ತೃತಿಯ) ಬಹುಮಾನ ಪಡೆದರು. ಇವುಗಳು ಸೇರಿದಂತೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಶ್ರೀ ಲಕ್ಷ್ಮೀ ಜ್ಯೂಯಲರ್ಸ್ ವತಿಯಿಂದ ಸಮದಾನಕರ ಬಹುಮಾನಗಳನ್ನು ನೀಡಲಾಯಿತು. ಶಿಕ್ಷಕಿ ಎಚ್.ಇಂದಿರಾ, ರೇಖಾ ಜನ್ನು, ಸುಜಾತ ಜನ್ನು, ವೈಶಾಲಿ ಜನ್ನು, ನಿವೃತ್ತ ಶಿಕ್ಷಕಿ ಬಿ. ಗೌರಮ್ಮ ನಿರ್ಣಯಕರಾಗಿ ಕಾರ್ಯನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








