ರಕ್ಷಾ ಬಂಧನ ಸೋದರಿಗೆ ನೀಡುವ, ಅಭಯ ಬಂಧನ
ದೇವ, ದಾನವರ ಸಮರಕ್ಕೆ ಸಾಕ್ಷಿಯಾಗಿತ್ತು ಆ ಬಂಧನ
ಪುರಾತನ ಗ್ರಂಥಗಳ ಕಾಲದಿಂದ ಬಂದ ಈ ಬಂಧನ
ಸಹೋದರ, ಸಹೋದರಿಯರ ಆತ್ಮಸಾಕ್ಷಿಯ ಬಂಧನ
ಕಣ್ಮನ ಸೆಳೆವ ರಂಗು, ರಂಗಿನ ರಾಖಿಗಳ
ಕೊಳ್ಳುವರು ತಿರುಗಿ, ತಿರುಗಿ ಅಂಗಡಿಗಳ
ಒಬ್ಬ ಅಣ್ಣನಿಗೆ ಕಟ್ಟುವರು ಹತ್ತಾರು ರಾಖಿಗಳ
ಪಡೆಯುವರು ಪ್ರೀತಿಯಿಂದ ನೀಡುವ ಕಾಣಿಗಳ
ಹಣೆಗೆ ತಿಲಕವಿರಿಸಿ, ಕೈಗೆ ಕಟ್ಟುವ ರಕ್ಷಾಬಂಧನ
ಅರತಿ ಮಾಡಿ, ಸಿಹಿ ತಿನಿಸುವ ಈ ಬಂಧನ
ಕಾಲಿಗೆ ನಮಿಸಿ, ಆಶೀರ್ವಾದ ಪಡೆವಾ ದಿನ
ಅಣ್ಣ, ತಂಗಿಯರ ಜನ್ಮ, ಜನ್ಮದ ಅನುಬಂಧನ
ಅರ್ಥಪೂರ್ಣ ರಕ್ಷಾಬಂಧನ ವೀರ ಸೈನಿಕರಿಗೆ
ಅನ್ನ ನೀಡುವ ನಮ್ಮ ಅನ್ನ ದಾತರಿಗೆ
ಪ್ರತಿ ನಿತ್ಯ ನಮ್ಮ ಕಾಯುವ ಪೋಲೀಸರಿಗೆ
ಸ್ವಚ್ಚ ಭಾರತದ ನಿಜವಾದ ಪೌರ ಕಾರ್ಮಿಕರಿಗೆ
ಜೈ ಜವಾನ್…….. ಜೈ ಕಿಸಾನ್…… ರಕ್ಷಾಬಂಧನ್……
– ಕೆ.ವಿ.ರಾಜಣ್ಣ, ತುಮಕೂರು
