ರಾಜ್ಯಾಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ರನ್ನು ಬದಲಿಸಲು ಬಿಜೆಪಿ ಕಾರ್ಯಾಕರ್ತನಿಂದಲೇ ಮನವಿ..?!

ಬೆಂಗಳೂರು:ಪಕ್ಷದ ಹಿತದೃಷ್ಠಿಯಿಂದ ಬದಲಾವಣೆ

      ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿದೆ. 

      ಬೀದರ್ ಮೂಲದ ಭರತ್ ಖಂಡ್ರೆ ಎನ್ನುವ ಕಾರ್ಯಕರ್ತ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ರಾಜ್ಯಾಧ್ಯಕ್ಷ ಸ್ಥಾನದಿಂದ ಅವರನ್ನು ಬದಲಾವಣೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ. ಈ ಪತ್ರ ಈಗ ಮಾಧ್ಯಮಗಳಿಗೆ ಸಿಕ್ಕಿದೆ.

      ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರು, ವಿಧಾನಸಭೆ ವಿಪಕ್ಷ ನಾಯಕರು. ಅವರು ಎರಡು ಪ್ರಮುಖ ಹುದ್ದೆಯಲ್ಲಿದ್ದಾರೆ. ಕರ್ನಾಟಕದ ಪಕ್ಷದ ಹಿತದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ತಕ್ಷಣ ಬದಲಾವಣೆ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

      2018ರ ಚುನಾವಣೆಯಲ್ಲಿ 104 ಜನ ಶಾಸಕರು ಆಯ್ಕೆಯಾದರು. ಯಡಿಯೂರಪ್ಪ ಅವರ ಪ್ರಭಾವಕ್ಕಾಗಲಿ ಅಥವ ಯಡಿಯೂರಪ್ಪ ಅವರ ಲಿಂಗಾಯತ ಸಮುದಾಯದವರಿಂದಾಗಲಿ 104 ಸೀಟು ಬಂದಿಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ರಾಜ್ಯದ ಜನರ ಮೇಲೆ ಅಪಾರವಾದ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ಇದರಿಂದಾಗಿ 150 ಸ್ಥಾನಗಳನ್ನು ಪಡೆಯಬಹುದಿತ್ತು. ಆದರೆ, ಯಡಿಯೂರಪ್ಪ ಅವರು ಬಿಜೆಪಿ ಪಕ್ಷಕ್ಕೆ ಹಾನಿ ಉಂಟು ಮಾಡಿದ್ದರಿಂದ 104 ಸೀಟು ಬಂದಿದೆ. ಎಂದು ಆರೋಪಿಸಿ ಮನವಿ ಪತ್ರ ಬರೆದಿದ್ದಾರೆ. 

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link