ಬೆಂಗಳೂರು.
ರೈತಪರ, ಜನಪರ ಬಜೆಟ್ ನೀಡಿದ ಪ್ರಧಾನಿ ನರೇಂದ್ರಮೋದಿ ಅವರಿಗೆ ಬಿಜೆಪಿಯ ಮುಖಂಡರು ಕಾರ್ಯಕರ್ತರು ನಗರದ ಪುರಭವನದ ಮುಂಭಾಗ ಶನಿವಾರ ಅಭಿನಂದನಾ ಕಾರ್ಯಕ್ರಮ ನಡೆಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಹಸಿರು ಶಾಲು ತೊಟ್ಟ ಸಾವಿರಾರು ಬಿಜೆಪಿ ಮುಖಂಡರು ಕಾರ್ಯಕರ್ತರು ಪಾಲ್ಗೊಂಡು ರೈತ ಪರ ಬಜೆಟ್ ನೀಡಿರುವ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಹೇಳಿ, ಘೋಷಣೆಗಳನ್ನು ಕೂಗಿ ರೈತರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.ಮತ್ತೆ ಮೋದಿ `ಫಿರ್ ಏಕ್ ಬಾರ್’ ಘೋಷಣೆಗಳನ್ನು ಹಾಕಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ ಕೇಂದ್ರ ಸರ್ಕಾರದ ಬಜೆಟ್ ಭಾರತದಲ್ಲಷ್ಟೇ ಅಲ್ಲ. ಇಡೀ ಜಗತ್ತಿನಲ್ಲೇ ಸಂಚಲನವುಂಟು ಮಾಡಿದೆ ಎಂದು ಬಣ್ಣಿಸಿದರು.
ಕೇಂದ್ರದ ಬಿಜೆಪಿ ಸರ್ಕಾರದ ಬಜೆಟ್ ಕಾಂಗ್ರೆಸ್‍ನವರಿಗೆ ಉರಿ ತರಿಸಿದೆ ರೈತರಿಗೆ ಸಾಲಮನ್ನಾ ಮಾಡಿ ಅದನ್ನೇ ದೊಡ್ಡದೆಂದು ಬಿಂಬಿಸಿಕೊಳ್ಳುತ್ತಿದ್ದ ಕಾಂಗ್ರೆಸ್ಸಿನವರಿಗೆ ಈ ಬಜೆಟ್‍ನಲ್ಲಿ ಬಡ ರೈತರಿಗೆ ಪ್ರತಿ ವರ್ಷ 6 ಸಾವಿರ ರೂ.ಗಳನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರಮೋದಿ ಅವರು ತಮ್ಮ ಸರ್ಕಾರ ರೈತರ ಪರ ಎಂಬುದನ್ನು ತೋರಿಸಿದ್ದಾರೆ ಎಂದರು.
ಸಾಲಮನ್ನಾ ಒಂದು ಬಾರಿ ಮಾತ್ರ ರೈತರಿಗೆ ನೆರವಾಗುತ್ತದೆ. ಆದರೆ, ಪ್ರತಿ ವರ್ಷ ರೈತರಿಗೆ 6 ಸಾವಿರ ರೂ. ನೀಡುತ್ತಿರುವುದು ಆ ರೈತ ಇರುವವರೆಗೂ ಸಿಗುತ್ತದೆ. ಹಾಗಾಗಿ, ನಿಜವಾದ ರೈತಪರ ಸರ್ಕಾರ ನರೇಂದ್ರಮೋದಿ ಸರ್ಕಾರ ಎಂದು ಹೊಗಳಿದರು ಕೇಂದ್ರದ ಬಜೆಟ್ ವಿರೋಧಿ ಪಕ್ಷಗಳಿಗೆ ಟಿಕೆಟ್ ನೀಡಿದೆ. ಬಜೆಟ್ ಮಂಡನೆ ನಂತರ ವಿರೋಧಿ ಪಕ್ಷಗಳು ರಾಹು ಬಡಿದಂತಾಗಿದ್ದಾರೆಂದು ವ್ಯಂಗ್ಯವಾಡಿದರು. 60 ವರ್ಷಗಳಲ್ಲಿ ಯಾವ ಸರ್ಕಾರವೂ ನೀಡದಂತಹ ಬಜೆಟ್‍ನ್ನು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ನೀಡಿದೆ ಎಂದರು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಜೆಟ್ ಸೂಪರ್ ಕ್ಯಾಂಡಿಯಾಗಿದೆ ಎಂದು ಬಣ್ಣಿಸಿದ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಈ ಬಜೆಟ್‍ನಿಂದ ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ದಿಕ್ಕಾಪಾಲಾಗಿವೆ ಎಂದರು.
ವಿರೋಧಿಗಳು ದಿಕ್ಕಾಪಾಲು
ಈ ಬಜೆಟ್‍ನಲ್ಲಿ ರೈತರು, ಕಾರ್ಮಿಕರು, ಮಧ್ಯಮ ವರ್ಗದವರು ಹೀಗೆ ಎಲ್ಲರ ಹಿತ ಕಾಯುವ ಕಾರ್ಯಕ್ರಮಗಳನ್ನು ಪ್ರಧಾನಿ ನರೇಂದ್ರಮೋದಿ ನೀಡಿದ್ದಾರೆ. ಅವರ ಬಜೆಟ್ ಸೂಪರ್ ಬಜೆಟ್ ಆಗಿದೆ ಎಂದರು.ಕೇಂದ್ರದ ಬಜೆಟ್ ನಂತರ ಎಲ್ಲ ವಿಪಕ್ಷಗಳು ದಿಕ್ಕು ತೋಚದ ಪರಿಸ್ಥಿತಿಯಲ್ಲಿದೆ. ಇಷ್ಟು ದಿನ ಮೋದಿ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದ ವಿರೋಧಿಗಳ ಬಾಯಿಗೆ ಬೀಗ ಬಿದ್ದಿದೆ ಎಂದರು.ಕೇಂದ್ರ ಸರ್ಕಾರ ರೈತ ವಿರೋಧಿ ಎಂದು ಹೇಳುತ್ತಿದ್ದವರಿಗೂ ಬಜೆಟ್ ಮೂಲಕ ಪ್ರಧಾನಿ ನರೇಂದ್ರಮೋದಿ ಉತ್ತರ ನೀಡಿದ್ದಾರೆ ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ