ರಾಬ್ರಿಮಾಡಿ ಹಬ್ಬ ಆಚರಿಸದಂತೆ ಕಿವಿಮಾತು

ಹಗರಿಬೊಮ್ಮನಹಳ್ಳಿ:

ಗಣೇಶೋತ್ಸವದ ನೆಪದಲ್ಲಿ ರಾಬ್ರಿಮಾಡಿ ಹಬ್ಬ ಆಚರಿಸದಿರಿ ಎಂದು ಡಿವೈಎಸ್‍ಪಿ ದಶರಥಮೂರ್ತಿ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಣೇಶ ಚತುರ್ಥಿ ಹಾಗೂ ಮೊಹರಾಂ ಹಬ್ಬಗಳ ಆಚರಣೆಯ ಶಾಂತಿ ಸಭೆಯಲ್ಲಿ ಬಹುತೇಕ ಪೊಲೀಸ್ ಭಾಷೆಯಲ್ಲಿಯೇ ಮಾತನಾಡಿದಂತಿತ್ತು.

ಗ್ರಾಮೀಣ ಭಾಗಗಳಲ್ಲಿಯೂ ಗಣೇಶ ಪ್ರತಿಷ್ಠಾಪನೆಗೆಂದು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ಹಣ ನೀಡುವಂತೆ ಒತ್ತಾಯಿಸುವುದು, ಕೊಡದಿದ್ದರೆ ಪೀಡಿಸುವುದು ಸರಿಯಲ್ಲ. ನಿಮ್ಮಲ್ಲಿ ಇದ್ದರೆ ಕ್ರೂಢಿಕರಿಸಿಕೊಂಡು ಹಬ್ಬ ಆಚರಿಸಬೇಕೆಂದು ಕರೆ ನೀಡಿದರು.

ಸಾರ್ವಜನಿಕರೂ ಸಮಾಜಿಕ ಹೊಣೆಗಾರಿಯನ್ನು ಬೆಳೆಸಿಕೊಳ್ಳಬೇಕು. ನಡೆಯುವಂತ ಆಚರಣೆ ಸೌಹಾರ್ಧತೆಗಾಗಿ ಕಟ್ಟುನಿಟ್ಟಿನ ಪೊಲೀಸ್ ನಿಯಮಗಳನ್ನು ಪಾಲನೆಮಾಡಬೇಕು. ಗಣೇಶ ವಿಸರ್ಜನೆಯ ವೇಳೆ ಸಮಯ ಮತ್ತು ಮಾರ್ಗಸೂಚಿಸಿದಂತೆ ಮೆರವಣಿಗೆ ಸಾಗಲಿ, ಇನ್ನು ಡಿಜಿಯೊಂದು ಕರ್ಕಶ ಶಬ್ಧವನ್ನುಂಟುಮಾಡುವ ಸಾಧನವಾಗಿದೆ. ಇದರಿಂದ ಪ್ರತಿಯೊಬ್ಬರ ನೆಮ್ಮದಿ ಕೆಡುತ್ತೆ. ಆಗುವಂತ ಅನಾಹುತಗಳಿಗೆ ನೀವೆ ಹೊಣೆಗಾರರಾಗುತ್ತೀರ, ಆದ್ದರಿಂದ ಸರಳ ಮತ್ತು ಸಂಭ್ರಮದಿಂದ ಹಬ್ಬವನ್ನು ಆಚರಿಸಿ ಹಾಗೂ ಮೊಹರಾಂ ಎರಡೂ ಹಬ್ಬಗಳಲ್ಲಿ ಭಾವೈಕ್ಯತೆ ಮೆರೆಯಲಿ ಎಂದು ಆಶಿಸಿದರು.

ಇದಕ್ಕೂ ಮೊದಲು ಮಾನವ ಹಕ್ಕುಗಳ ಸಂರಕ್ಷಣಾ ಹೋರಾಟ ಸಮಿತಿಯ ಸಂಚಾಲಕ ಚನ್ನವೀರ ಮಾತನಾಡಿ. ಪಟ್ಟಣದಲ್ಲಿ ಶಾಂತಿಯುತವಾಗಿ ಎಲ್ಲಾ ಹಬ್ಬಹರಿದಿನಗಳು ಆಚರಣೆಗೊಂಡಿವೆ. ಆದರೂ ಕೆಲವೇಳೆ ಗುಂಪುಘರ್ಷಣೆ(107) ಕೇಸುದಾಖಲಿಸಿ ಅಮಾಯಕರನ್ನು ಸಿಲುಕಿಸುವ ಪರಿಪಾಠವಾಗುತ್ತಿದೆ. ಈ ಹಿಂದೆ ದಾಖಲಾಗಿರುವ ಆರೋಪಿಗಳ ಮೇಲೆ ಪದೇಪದೇ ಕೇಸು ದಾಖಲಿಸಿದರೆ ಅನ್ಯಾಯವಾಗುತ್ತೆ. ಆದ್ದರಿಂದ ಸಮಾಜ ರಕ್ಷಣೆಮಾಡುವ ಅಧಿಕಾರಿಗಳು ಕೇಸುದಾಖಲಿಸುವ ಮುನ್ನ ಒಮ್ಮೆ ಪರಿಶೀಲಿಸಿ ಎಂದು ಮನವಿಮಾಡಿಕೊಂಡರು.

ಹಿರಿಯ ಪತ್ರಕರ್ತ ಹುಳ್ಳಿ ಪ್ರಕಾಶ್ ಮಾತನಾಡಿ, ಗಣೇಶೋತ್ಸವ ಆಚರಣೆಯಲ್ಲಿ ಪೊಲೀಸ್ ನಿಬಂಧನೆಗಳನ್ನು ಪಾಲಿಸುತ್ತೇವೆ. ಆದರೆ, ಪ್ರತಿಷ್ಠಾಪನೆಮಾಡುವಂತ ಎಲ್ಲಾ ಸಂಘಸಂಸ್ಥೆಗಳಿಗೂ ಒಂದೇ ರೀತಿಯ ನಿಯಮ ಅನುಸರಿಸುವಂತೆ ಆದೇಶಮಾಡಿ, ಒಬ್ಬರಿಗೊಂದು ಮತ್ತೊಬ್ಬರಿಗೊಂದಾದರೆ ಬೇಸರ ಮೂಡಿಸುತ್ತೆ ಎಂದು ಅಧಿಕಾರಿಗಳ ಗಮನ ಸೆಳೆದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐ ರಾಮಪ್ಪ ಸಾವಳಿಗಿ, ವಿಭಿನ್ನ ಧರ್ಮಾಚರಣೆಗಳು ಒಟ್ಟಿಗೆ ಬಂದಿರುವುದರಿಂದ ಬಂಧುಗಳು ಹಬ್ಬಗಳ ಆಚರಣೆ ವೇಳೆ ಕಾನೂನು ಸುವೆವಸ್ಥೆಯನ್ನು ಕಾಪಾಡಿ ಎಂದರಲ್ಲದೆ 20ಕ್ಕೂ ಹೆಚ್ಚು ನಿಬಂಧನೆಗಳಿರುವ ಮಾಹಿತಿ ಸಭೆಗೆ ನೀಡಿದರು.

ಮುಖಂಡ ಮೈಲಾರಪ್ಪ, ನಿವೃತ್ತ ಶಿಕ್ಷಕ ಎಚ್.ಬಸಪ್ಪ, ಬಿಜೆಪಿ ಯುವ ಮುಖಂಡ ಮಹೇಂದ್ರ ಇತರರು ಮಾತನಾಡಿದರು. ತಹಸೀಲ್ದಾರ್ ವಿಜಯಕುಮಾರ್, ಪ್ರಭಾರಿ ಪಿಎಸ್‍ಐ ಕೃಷ್ಣಮೂರ್ತಿ, ಪುರಸಭೆಯ ಚಂದ್ರಶೇಖರ್, ಆರೋಗ್ಯ ಇಲಾಖೆಯ ಜಯಪ್ರಕಾಶ್, ಅಗ್ನಿಶಾಮಕ ದಳದ ರಾಮಂಜನೇಯ, ಪುರಸಭೆಯ ಮಾಜಿ ಅಧ್ಯಕ್ಷ ಜೋಗಿ ಹನುಮಂತು, ಸದಸ್ಯರಾದ ಬಾಬುವಲಿ, ಹುಳ್ಳಿ ಮಂಜುನಾಥ, ಮುಖಂಡರಾದ ನೆಲ್ಲು ಇಸ್ಮಾಯಿಲ್, ಸೈಯದ್ ಇರ್ಫಾನ್, ಕನ್ನಿಹಳ್ಳಿ ಚಂದ್ರಶೇಖರ್, ನವೀನ್, ಸೆರೆಗಾರ್ ಹುಚ್ಚಪ್ಪ, ಶಾಮಿಯಾನ ರೇಣುಕೇಶ, ಮಲ್ಲಯ್ಯ ಇತರ ಸಂಘಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link