ಬಳ್ಳಾರಿ:
ನಗರದ ಶ್ರೀಸತ್ಯನಾರಾಯಣ ಪೇಟೆ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಶ್ರೀಮಠ, ಸತ್ಯನಾರಾಯಣ ಪೇಟೆ ಶ್ರೀಲಕ್ಷ್ಮೀ ಸಹಿತ ಸತ್ಯನಾರಾಯಣ ದೇವಾಲಯ, ಲಕ್ಷ್ಮೀನಾರಾಯಣ ದೇವಾಲಯ, ಕೌಲ್ ಬಜಾರ್ ರೇಡಿಯೋ ಪಾರ್ಕ್ ಬಳಿಯ ಶ್ರೀ ವ್ಯಾಸರಾಜ ಶ್ರೀಮಠ ಸೇರಿದಂತೆ ಜಿಲ್ಲೆಯ ನಾನಾ ಪ್ರಸಿದ್ಧ ದೇವಾಲಯಗಳಲ್ಲಿ ಬುಧವಾರ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 347ನೇ ಉತ್ತರಾಧನಾ ಮಹೋತ್ಸವ ನಿಮಿತ್ತ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.
ನಂಜನಗೂಡು ಶ್ರೀಮಠ: ನಗರದ ಶ್ರೀಸತ್ಯನಾರಾಯಣ ಪೇಟೆ ನಂಜನಗೂಡು ಶ್ರೀರಾಘವೇಂದ್ರ ಸ್ವಾಮೀ ಮಠದಲ್ಲಿ ಬುಧವಾರ ಶ್ರೀ ಗುರುಸಾರ್ವಭೌಮರ ಉತ್ತರಾಧನಾ ಮಹೋತ್ಸವ ನಿಮಿತ್ತ ವಿಜೃಂಭಣೆಯಿಂದ ರಥೋತ್ಸವ ನಡೆಯಿತು. ನಗರ ಸೇರಿದಂತೆ ಜಿಲ್ಲೆಯ ನಾನಾ ಭಜನಾ ಮಂಡಳಿಗಳ ಸದಸ್ಯರಿಂದ ಸಾಮೋಹಿಕ ಭಜನೆ, ಕೋಲಾಟ ರಥೋತ್ಸವದಲ್ಲಿ ಗಮನಸೆಳೆದವು. ಶ್ರೀಮಠದ ವ್ಯವಸ್ಥಾಪಕ ಹಾಗೂ ಧರ್ಮಕರ್ತರಾದ ರಾಜಾ ಎಂ.ಎಚ್.ಬ್ರಹ್ಮಣ್ಯಾಚಾರ್ಯ ಅವರು ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶ್ರೀಮಠದಲ್ಲಿ ಬೆ. ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ, ಪಂಚಾಮೃತಾಭಿಷೇಕ, ಕನಕಾಭಿಷೇಕ, ಅರ್ಚನೆ, ನೈವಿದ್ಯೆ, ವಿಶೇಷ ಅಲಂಕಾರ, ಹಸ್ತೋದಕ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಸಂಜೆ ದಿವಟಿಗೆ ಮಂಗಳಾರತಿ, ಉತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನಡೆದವು. ನಂತರ ಚಿ.ಅಭಯ ಕಾಶ್ಯಪ ಅವರಿಂದ ದಾಸಲಹರಿ ಕಾರ್ಯಕ್ರಮ ಎಲ್ಲರ ಗಮನಸೆಳೆಯಿತು. ಎಲ್ಲ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.
ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವಾಲಯ: ನಗರದ ಸತ್ಯನಾರಾಯಣ ಪೇಟೆ ಶ್ರೀಲಕ್ಷ್ಮೀ ಸಹಿತ ಸತ್ಯನಾರಾಯಣ ದೇವಾಲಯದಲ್ಲಿ ಬುಧವಾರ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 347ನೇ ಉತ್ತರಾಧನಾ ಮಹೋತ್ಸವ ನಿಮಿತ್ತ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು. ಆರಾಧನಾ ನಿಮಿತ್ತ ಗುರುರಾಯರಿಗೆ ವಿಶೇಷ ಪೂಜೆ, ಅಲಂಕಾರ, ನೈವಿದ್ಯೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ದೇವಾಲಯದ ಸಮೀತಿ ವಿವಿಧ ಮುಖಂಢರು ಇತರರು ಇದ್ದರು. ಎಲ್ಲ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.
ಶ್ರೀವ್ಯಾಸರಾಜರ ಮಠ: ನಗರದ ಕೌಲ್ ಬಜಾರ್ ರೇಡಿಯೋ ಪಾರ್ಕ್ ಬಳಿಯ ಶ್ರೀ ವ್ಯಾಸರಾಜ ಶ್ರೀಮಠದಲ್ಲಿ ಬುಧವಾರ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 347ನೇ ಉತ್ತರಾಧನಾ ಮಹೋತ್ಸವ ನಿಮಿತ್ತ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು. ಬೆಳಿಗ್ಗೆ ಅಷ್ಟೋತ್ತರ ಪಾರಾಯಣ, ಶ್ರೀಹರಿವಾಯುಸ್ತುತಿ ಪಠಣೆ, ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೋಹಿಕ ಭಜನೆ ಸೇರಿದಂತೆ ಗುರುರಾಯರಿಗೆ ವಿಶೇಷ ಪೂಜೆ, ಅಲಂಕಾರ, ನೈವಿದ್ಯೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ದೇವಾಲಯದ ಸಮೀತಿ ಮುಖಂಡರಾದ ಭೀಮರಾವ್ ಸೇರಿದಂತೆ ಇತರರು ಇದ್ದರು.
ಲಕ್ಷ್ಮೀ ನಾರಾಯಣ ದೇವಾಲಯ: ನಗರದ ಪ್ರಸಿದ್ಧ ದೇವಾಲಯ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಬುಧವಾರ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 347ನೇ ಉತ್ತರಾಧನಾ ಮಹೋತ್ಸವ ನಿಮಿತ್ತ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು. ದೇವಾಲಯದ ಸಮೀತಿ ಎಲ್ಲ ಮುಖ್ಯಸ್ಥರು, ವಿವಿಧ ಭಜನಾ ಮಂಡಳಿ ಸದಸ್ಯರು ಸೇರಿದಂತೆ ವಿವಿಧ ಗಣ್ಯರು ಶ್ರೀಗುರುರಾಯರ ರಥೋತ್ಸವದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ ದೇವಾಲಯದಲ್ಲಿ ಅಷ್ಟೋತ್ತರ ಪಾರಾಯಣ, ಶ್ರೀ ಗುರುರಾಯರಿಗೆ ವಿಶೇಷ ಪೂಜೆ, ಅಲಂಕಾರ, ನೈವಿದ್ಯೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು. ನಗರ ಸೇರಿದಂತೆ ನಾನಾ ಕಡೆಯಿಂದ ನೂರಾರು ಭಕ್ತರು ಆಗಮಿಸಿ ಶ್ರೀಗುರುರಾಯರಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಡಾ.ಶ್ರೀನಾಥ್ ಸೇರಿದಂತೆ ವಿವಿಧ ಮುಖಂಡರು, ಸಮೀತಿ ಎಲ್ಲ ಸದಸ್ಯರು ಹಾಗೂ ದೇವಾಲಯದ ಅರ್ಚಕರು ಇದ್ದರು.