ವಿಶ್ವಕರ್ಮ ಜಯಂತ್ಯುತ್ಸವ, ಸನ್ಮಾನ ಹಾಗೂ ಮನವಿ ಪತ್ರ ಸಲ್ಲಿಕೆ

ಕಂಪ್ಲಿ :

            ವಿಶ್ವಕರ್ಮ ಜಯಂತ್ಯುತ್ಸವವನ್ನು ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾ ನಗರ ಘಟಕದಿಂದ ಸೋಮವಾರ ಸೆ.17ರಂದು ಕಂಪ್ಲಿಯ ಪುರಸಭಾಂಗಣದಲ್ಲಿ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.

               ಶ್ರೀಮದ್ ದಕ್ಷಿಣ ಕಾಶಿ ಆನೆಗುಂದಿ ಮೂಲಸಂಸ್ಥಾನ ಸರಸ್ವತಿ ಪೀಠದ ವಿಶ್ವಕರ್ಮ ಜಗದ್ಗುರು ಶ್ರೀ ನಾಗೇಂದ್ರ ಮಹಾಸ್ವಾಮಿಗಳು ವಿಶ್ವಕರ್ಮ ಜಯಂತ್ಯುತ್ಸವದ ದಿವ್ಯ ಸಾನ್ನಿಧ್ಯವಹಿಸಿ ಚಾಲನೆ ನೀಡಿ ಮಾತನಾಡಿ, ರಾಜ್ಯಾದ್ಯಂತ ವಿಶ್ವಕರ್ಮ ಜಯಂತ್ಯುತ್ಸವವನ್ನು ಆಚರಿಸುವಂತಾಗಬೇಕು. ವಿಶ್ವಕರ್ಮ ಸಮುದಾಯದವರು ಸರ್ವ ಸಂಘಟಿತರಾಗಿ ಆಚರಿಸಬೇಕು ಎಂದು ಸದ್ಭಕ್ತರಿಗೆ ಸಲಹೆ ನೀಡಿದರು.

                ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಬಳ್ಳಾರಿ ಜಿಲ್ಲಾ ನಾಮ ನಿರ್ದೇಶನ ಸದಸ್ಯ ಎಂ.ಮಂಜುನಾಥ ಮಾತನಾಡಿ, ವಿಶ್ವಕರ್ಮ ನಿಗಮ ಮಂಡಳಿಯಿಂದ ಸಮುದಾಯದ ಪಂಚವೃತ್ತಿಯರಿಗೆ ನಾನಾ ಸೌಲಭ್ಯಗಳನ್ನು ನೀಡಿದ್ದು ಅರಿತು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಪಟ್ಟಣದಲ್ಲಿ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸಲು ನಿವೇಶನ ನೀಡುವಂತೆ, ವಿಶ್ವಕರ್ಮ ವೃತ್ತ ರಚಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾ ನಗರ ಘಟಕದ ಪದಾಧಿಕಾರಿಗಳು ಪುರಸಭೆ ಅಧ್ಯಕ್ಷರು, ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

              ಪುರಸಭೆ ಅಧ್ಯಕ್ಷ ಎಂ.ಸುಧೀರ್ ಹಾಗೂ ಮುಖ್ಯಾಧಿಕಾರಿ ವೆಂಕಟೇಶ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ವಿಶ್ವಕರ್ಮ ವೃತ್ತ ರಚಿಸಲು ಅನುಮತಿಸುವುದಾಗಿ, ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ನಿವೇಶನ ನೀಡುವ ಕುರಿತು ಸಭೆ ಚರ್ಚಿಸುವುದಾಗಿ ಭರವಸೆ ನೀಡಿದರು.

               ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾದ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ವೈದ್ಯಂ ಜಂಬುನಾಥ ಆಚಾರ್, ಸದಸ್ಯ ಭಟ್ಟ ಪ್ರಸಾದ್, ಸಪ್ಪರದ ರಾಘವೇಂದ್ರ, ಸಣ್ಣ ಹುಲುಗಪ್ಪ, ಎನ್.ರಾಮಾಂಜನೇಯಲು, ವಿ.ಎಲ್.ಬಾಬು ಸೇರಿ ಅನೇಕರು ಮಾತನಾಡಿದರು. ವಿಶ್ವಕರ್ಮ ಜಗದ್ಗುರು ಶ್ರೀ ನಾಗೇಂದ್ರ ಮಹಾಸ್ವಾಮಿಗಳು, ತಹಶೀಲ್ದಾರ ಎಂ.ರೇಣುಕಾ, ಪುರಸಭೆ ಅಧ್ಯಕ್ಷ ಎಂ.ಸುಧೀರ್, ಮುಖ್ಯಾಧಿಕಾರಿ ವೆಂಕಟೇಶ್, ಸಿ.ಆರ್.ಹನುಮಂತ, ಸೂಗಪ್ಪ, ವೈ.ಸೂರ್ಯನಾರಾಯಣ ಆಚಾರ್, ಮೋಹನ್ ಚಂದ್ರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿಟ್ರುವಟ್ಟಿ ಯರಿಸ್ವಾಮಿ ಪೌರೋಹಿತ್ಯ ಹಾಗೂ ವಿಶ್ವಕರ್ಮ ಕುರಿತು ಉಪನ್ಯಾಸ ನೀಡಿದರು. ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಜರುಗಿತು.

                ಯಂಕಪ್ಪಾಚಾರ್,ದೇವರಾಜ್, ನಾಗಲಿಂಗಾಚಾರ್, ಗಿರಿರಾಜಾಚಾರ್, ಶೇಖರಪ್ಪ, ವೀರಭದ್ರಿ, ಮಲ್ಲಿಕಾರ್ಜುನಾಚಾರಿ, ರಂಗನಾಥ, ವಿಜಯಲಕ್ಷ್ಮಿ, ಗಿರಿಜಾ, ಲಕ್ಷ್ಮಿ, ವನಜಾಕ್ಷಿ, ಸೇರಿ ಅನೇಕರು ಪಾಲ್ಗೊಂಡಿದ್ದರು.
  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link