ಬೆಂಗಳೂರು;
ವಿಧಾನ ಪರಿಷತ್ ಉಪಚುನಾವಣೆಯ ಒಟ್ಟು 6 ಸ್ಥಾನಗಳ ಪೈಕಿ 4 ಸ್ಥಾನಗಳು ಕಾಂಗ್ರೆಸ್ ಪಾಲಾಗುವುದು ಖಚಿತವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯೂ ಕೂಡಾ ಸಿದ್ದವಾಗಿದೆ.

ಈ ಅಭ್ಯರ್ಥಿಗಳ ಪಟ್ಟಿಯಲ್ಲಿ ನಿವೇದಿತ ಆಳ್ವಾ, ಮಲ್ಲಾಜಮ್ಮ, ವಾಸಂತಿ ಶಿವಣ್ಣ, ಎಂ.ಸಿ.ವೇಣುಗೋಪಾಲ್,ಯು.ಬಿ.ವೆಂಟೇಶ್, ಮುಖ್ಯಮಂತ್ರಿ ಚಂದ್ರು ಅವರ ಹೆಸರಿದ್ದು, ಅಂತಿಮವಾಗಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಹೆಸರನ್ನು ಸೇರಿಸಲಾಗಿದೆ. ಸಿದ್ದವಾಗಿರುವ ಪಟ್ಟಿಯನ್ನು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಸಂಜೆ ದೆಹಲಿಗೆ ಕೊಂಡೊಯ್ದು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರೊಂದಿಗೆ ಚರ್ಚಿಸಿದ ನಂತರ ಅಂತಿಮವಾಗಿ ಅಭ್ಯರ್ಥಿಗಳ ಆಯ್ಕೆ ಮಾಡಲಿರುವರು.








