ಶಬರಿಮಲೆ:
ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಾನದಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದ್ದು ನಿನ್ನೆ ತಡರಾತ್ರಿ 70ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರನ್ನು ಪೊಲೀಸರು ಬಂಧಿಸಿದ್ದು, ಇದನ್ನು ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.
ಪವಿತ್ರವಾದ 18 ಮೆಟ್ಟಿಲುಗಳ ಕಡೆಗೆ ಸಾಗುವ ಮುನ್ನ ಸಾಗಿಬರುವ ಹಾದಿಯಲ್ಲಿ (ನಡಪಂದಾಲ್) ಜಮಾಯಿಸಿದ ಭಕ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕ್ಷೇತ್ರದಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಅದನ್ನು ಉಲ್ಲಂಘಿಸಿದರು ಎಂಬ ನೆಪದಲ್ಲಿ ಭಕ್ತರನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಈ ಹಿಂದಿನ ಹಿಂಸಾತ್ಮಕ ಘಟನೆಗಳನ್ನು ಆಧರಿಸಿ ಶಬರಿಮಲೆಯಲ್ಲಿ ಪೊಲೀಸರು ನಿಷೇಧಾಜ್ಞೆ ಹೇರಿದ್ದು, ರಾತ್ರಿ ವೇಳೆ ಸನ್ನಿಧಾನದಲ್ಲಿ ಯಾರೂ ತಂಗುವಂತಿಲ್ಲ ಎಂದು ಆದೇಶಿಸಿ, ಭಕ್ತರನ್ನು ಬಂಧಿಸಿದ್ದರು. ಆದರೆ ಪೊಲೀಸರ ಈ ನಡೆಯನ್ನು ವಿರೋಧಿಸಿ ಸೋಮವಾರ ರಾಜ್ಯಾದ್ಯಂತ ಮತ್ತೆ ಪ್ರತಿಭಟನೆ ಆರಂಭವಾಗಿದೆ.
ತಿರುವನಂತಪುರದಲ್ಲಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನೆ ಮುಂದೆ ಬಹುಸಂಖ್ಯೆಯಲ್ಲಿ ನೆರೆದ ಬಲಪಂಥೀಯರು ಪ್ರತಿಭಟನೆ ನಡೆಸಿದರು. ಇನ್ನೂ ಕೊಚ್ಚಿ, ಅರಾನ್ಮುಲ, ಕೊಲ್ಲಂ, ಮಲಪುರಂ, ಇಡುಕ್ಕಿ, ಕೋಯಿಕೋಡ್ನಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
