ರಾಂಚಿ:
ದೇಶದ ಜನ ಬಿಹಾರ ಎಂದಾ ಕ್ಷಣ ನೆನಪಿಗೆ ಬರುವುದು ಮೇವು ಹಗರಣ ಅದರ ಅಪರಾಧಿಯಾಗಿ ಜೈಲುವಾಸ ಅನುಭವಿಸುತ್ತಿರುವ ಲಾಲೂ ಪ್ರಸಾದ್ ಯಾದವ್ ಗೆ ನೀಡಿದ್ದ ತಾತ್ಕಾಲಿಕ ಜಾಮೀನಿನ ಅವಧಿ ಅಂತ್ಯಗೊಂಡಿದ್ದು, ಇಂದು ಸಿಬಿಐ ವಿಶೇಷ ಕೋರ್ಟ್ ಗೆ ಶರಣಾಗಿದ್ದಾರೆ.ಆಗಸ್ಟ್ 30ರೊಳಗೆ ಕೋರ್ಟ್ ಗೆ ಶರಣಾಗಬೇಕು ಎಂದು ನ್ಯಾಯಾಲಯ ಸೂಚಿಸಿದ್ದ ಹಿನ್ನೆಲೆಯಲ್ಲಿ, ಅವರು ನಿನ್ನೆ ಪಾಟ್ನಾದಿಂದ ರಾಂಚಿಗೆ ಆಗಮಿಸಿದ್ದ ಅವರು ಸಿಬಿಐ ಗೆ ಶರಣಾದರು.
ಲಾಲೂ ಅವರು ಹ0ಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಲಾಲು ಪರ ವಕೀಲ ಪ್ರಬಾತ್ ಕುಮಾರ್ ನ್ಯಾಯಾಧೀಶರಿಗೆ ತಿಳಿಸಿದರು, ಹೀಗಾಗಿ ಲಾಲೂ ಅವರಿಗೆ ಬಿಸ್ರಾ ಮುಂಡಾ ಜೈಲಿನಲ್ಲೇ ಚಿಕಿತ್ಸೆಗೆ ಅವಕಾಶ ಮಾಡುವಂತೆ ನ್ಯಾಯಾದೀಶ ಎಸ್.ಎಸ್ ಪ್ರಸಾದ್ ಸೂಚಿಸಿದ್ದಾರೆ.ಮತ್ತು ಅವರು ಬಿಹಾರದ ರಿಮ್ಸ್ ನ ವೈದ್ಯರಿಂದ ಚಿಕಿತ್ಸೆ ಪಡೆಯಲು ಅನುಮತಿ ನೀಡಿದ್ದಾರೆ. ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







