ಹಾನಗಲ್ಲ :
ಹಾನಗಲ್ಲ ಪಟ್ಟಣದ ತಡಸ ಗೊಂದಿ ರಸ್ತೆಗೆ ಹೊಂದಿಕೊಂಡಿರುವ ಶ್ರೀ ಉಡಚಮ್ಮದೇವಿ ದೇವಸ್ಥಾನಕ್ಕೆ ನೂತನ ಶಿಖರ ಸ್ಥಿರ ಸ್ಥಾಪನಾ ಕಾರ್ಯಕ್ರಮ ಆಗಸ್ಟ 6 ಮತ್ತು 7 ರಂದು ನಡೆಯಲಿದೆ.
ಕಳೆದ ಎಂಟು ವರ್ಷಗಳ ಹಿಂದೆ ನಿರ್ಮಿಸಲಾದ ಈ ದೇವಸ್ಥಾನಕ್ಕೆ ಪ್ರಸಕ್ತ ವರ್ಷ ಶಿಖರ ಸ್ಥಾಪನಾ ಕಾರ್ಯ ನಡೆಯಲಿದೆ. ಆ. 6 ರಂದು ಗುರುವಾರ ಬೆಳಿಗ್ಗೆ ಹೊಸ ಬಸ್‍ನಿಲ್ದಾಣದ ಹತ್ತಿರವಿರುವ ವರಸಿದ್ಧಿ ವಿನಾಯಕ ದೇವಸ್ಥಾನದಿಂದ ನೂತನ ಶಿಖರದ ಮೆರವಣಿಗೆ ಸಕಲ ವಾದ್ಯ ವೈಭವದೊಂದಿಗೆ ಪೂರ್ಣಕುಂಬದೊಂದಿಗೆ ಹೊರಟು ದೇವಸ್ಥಾನ ತಲುಪುವುದು. ನಂತರ ದೇವಸ್ಥಾನದಲ್ಲಿ ಶ್ರೀಸ್ವಸ್ತಿ ಪುಣ್ಯಾಹವಾಚನ, ಸಂಕಲ್ಪ, ಋತ್ವಿಕಾವರುಣ, ದೇವತಾಸ್ಥಾಪನಾ, ಶಿಖರ ಪ್ರತಿಷ್ಠಾಂಗ ಹೋಮ, ಜಲಾಧಿವಾಸ, ಶಯ್ಯಾಧಿವಾಸ, ಧಾನ್ಯಾಧಿವಾಸ, ನಂತರ ಮಂಗಳಾರತಿ ನೆರವೇರುವುದು. ಸಂಜೆ 7 ಘಂಟೆಗೆ ಸುವಾಸಿನಿ ಸ್ತ್ರೀಯರಿಂದ ಕುಂಕುಮಾರ್ಚನೆ ನೆರವೇರುವುದು.
ಶುಕ್ರವಾರ ಆ,7 ರಂದು ಬೆಳಿಗ್ಗೆ 8-00 ಘಂಟೆಗೆ ಸ್ಥಾಪಿತ ದೇವತಾ ಪೂಜಾ, ಶ್ರೀ ದುರ್ಗಾ ಸಪ್ತಶತೀ ಮಹಾಹೋಮ (ಶ್ರೀಚಂಡಿ), ಬೆಳಿಗ್ಗೆ 11-00 ಘಂಟೆಗೆ ಶ್ರೀ ವೃಶ್ಚಿಕ ಮಹಾ ಅಮೃತಸಿದ್ಧಿ ಯೋಗದಲ್ಲಿ ಶ್ರೀ ದೇವಿ ದೇವಸ್ಥಾನದ ಶಿಖರ ಸ್ಥಿರ ಪ್ರತಿಷ್ಠಾಪನಾ, ಮಹಾಪೂಜಾ, ಮಂಗಳಾರತಿ, ಮಧ್ಯಾಹ್ನ 12-00 ಘಂಟೆಗೆ ಭಗವತೀ ಸ್ವರೂಪಿಕಾ ಶ್ರೀ ಕುಮಾರಿಕಾ ಪೂಜಾ, ಮಧ್ಯಾಹ್ನ 1-30ಕ್ಕೆ ಮಹಾಪ್ರಸಾದ ವಿತರಣೆ ಕಾರ್ಯಕ್ರಮಗಳು ನೆರವೇರುವವು. ಈ ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ಪಂಡಿತ ಶ್ರೀ ಗಂಗಾಧರಶಾಸ್ತ್ರೀ ಕಾಶೀಕರ ಅವರು ನೆರವೇರಿಸುವರು. ಪಟ್ಟಣದ ಸದ್ಭಕ್ತರು ಈ ಎಲ್ಲ ಪಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀದೇವಿ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಉಡಚಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.