ಹಾವೇರಿ :
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನಕ್ಕಾಗಿ ಅಗ್ರಹಿಸಿ ಪ್ರಸ್ತುತ ರಾಜ್ಯ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೆ ತರಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಸಾಂಕೇತಿಕ ಪ್ರತಿಭಟನೆ ಮಾಡಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಡಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವಹಿಸಿದ ಡಿಎಸ್‍ಎಸ್ ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಾಪೂರ ಮಾತನಾಡಿ ಒಳ ಮೀಸಲಾತಿಗೆ ಸಂಬಂದಿಸಿದಂತೆ ಸುಪ್ರೀಂ ಕೋರ್ಟಿನ ಪೀಠವು ಇತ್ತೀಚೆಗೆ ನೀಡಿರುವ ತೀರ್ಪನ್ನು ಡಿಎಸ್‍ಎಸ್ ಸಂಘಟನೆ ಸ್ವಾಗತಿಸಿದ್ದು,ಪರಿಶಿಷ್ಟರನ್ನು ಆರ್ಥಿಕವಾಗಿ ಸಾಮಾಜಿಕವಾಗಿ, ರಾಜಕೀಯವಾಗಿ ಮುಂದಕ್ಕೆ ತರಲು ಉದ್ದೇಶದಿಂದ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.ಬಹುತೇಕ ಮಂದಿ ಮಾದಿಗ ಸಮುದಾಯ ಪೌರಕಾರ್ಮಿಕರಾಗಿ ದೊಡ್ಡ ದೊಡ್ಡ ಮಹಾನಗರಗಳಲ್ಲೇ ಈ ಜಾತಿಯವರು ಮುಟ್ಟಿಸಿಕೊಳ್ಳದ ಸ್ಥಿತಿಯಲ್ಲಿದ್ದಾರೆ ಇವರು ಪರಿಶಿಷ್ಟರಲ್ಲಿಯೇ ಅಸ್ಪಷ್ಯರಾಗಿದ್ದಾರೆ ಪರಿಶಿಷ್ಟ ಸಮುದಾಯದ ಸ್ಪಷ್ಯ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಮೀಸಲಾತಿ ಕೋಟಾದಡಿ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡಿರುವುದಲ್ಲದೇ ಅಸ್ಪಷ್ಯರ ಮನೆಯಲ್ಲಿ ನೀರು ಕುಡಿಯುವುದಿಲ್ಲ.
ಊಟ ಮಾಡುವುದು ಇಲ್ಲ ಎಂಬ ಪರಸ್ಥಿತಿ ಕಂಡು ಬರುತ್ತಿದೆ.ಅತ್ಯಂತ ತುಳಿತಕ್ಕೆ ಒಳಗಾಗಿರುವ ಈ ಜಾತಿಗಳನ್ನು ಗುರುತಿಸಿ ಒಳ ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ ಇತ್ತೀಚೆಗೆ ನೀಡಿರುವ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ಅಸ್ಪಷ್ಯ ಜಾತಿಗಳಾದ ಮಾದಿಗ ಹಾಗೂ ಹೊಲೆಯ ಮತ್ತು ಅಸಹಾಯಕ ಅದರಲ್ಲೂ ಮೂರು ಕಾಸಿನ ನೆರವು ಸಿಗದ ಅಲೆಮಾರಿ ಬುಡಕಟ್ಟು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳಿಗೆ ಸಿಗಬೇಕಾದ ಮಿಸಲಾತಿಯನ್ನು ತಾವೇ ಕಬಳಿಸುತ್ತಿದ್ದಾರೆ. ಒಳ ಮೀಸಲಾತಿ ಜಾರಿ ಆದರೆ ಸಾಮಾಜಿಕ ನ್ಯಾಯ ಸಿಗಬಹುದೆಂಬ ಆಸೆ ಚಿಗುರೊಡೆಯುತ್ತದೆ ಎಂದು ಹೇಳಿದರು.
ಜಿಲ್ಲಾ ಮುಖಂಡರಾದ ಮೈಲಪ್ಪ ಗೊಣಿಬಸಪ್ಪನವರ ಮಾತನಾಡಿ ಇತ್ತೀಚೆಗೆ ಮಾನ್ಯ ಸುಪ್ರೀಂ ಕೋರ್ಟ ಪರಿಶಿಷ್ಟ ಜಾತಿಯಲ್ಲಿನ ಅಸ್ಪಷ್ಯ ಜಾತಿಗಳಿಗೆ ಹಾಗೂ ದುರ್ಬಲ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಮುಖಾಂತರ ಅವರನ್ನು ಗುರುತಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ತರಲು ಒಳ ಮೀಸಲಾತಿಯನ್ನು ನೀಡುವ ವ್ಯವಸ್ಥೇಯನ್ನು ರಾಜ್ಯ ಸರ್ಕಾರಗಳೇ ಮಾಡಬೇಕು ಎಂದಿರುವುದು ಆಶಾದಾಯಕವಾಗಿದೆ ಎಂದರು.
ಜಿಲ್ಲಾ ಮುಖಂಡರಾದ ದುರಗೇಶ ಗೊಣೆಮ್ಮನವರ ಮಾತನಾಡಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾತಿ ಮಾಡಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಇತ್ತೀಚೆಗೆ ಮಾನ್ಯ ಸುಪ್ರೀಂ ಕೋರ್ಟನ ಐದು ನ್ಯಾಯಾಧೀಶರು ನೀಡಿರುವ ತೀರ್ಪಿನಂತೆ ಒಳಮೀಸಲಾತಿ ಜಾರಿಗೆ ತರುವ ಅಧಿಕಾರವು ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ತೀರ್ಪು ನೀಡಿರುವುದರಿಂದ ರಾಜ್ಯ ಸರ್ಕಾರ ಎಲ್ಲಾ ಅಡೆತಡೆಗಳಿಂದ ಮುಕ್ತವಾಗಿದೆ. ಈಗ ಎ.ಜೆ. ದಾಶಿವ ಆಯೋಗದ ವರದಿಯನ್ನು ನಮ್ಮ ರಾಜ್ಯ ಸರ್ಕಾರವು ಇದೇ 2020ರ ಸೆಪ್ಟಂಬರ್‍ನಲ್ಲಿನಡೆಯುವ ವಿದಾನಸಭೆ ಅಧಿವೇಶನದಲ್ಲಿ ಮಂಡಿಸಿ ಒಳ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಪ್ರೋ ಬಿ. ಕೃಷ್ಣಪ್ಪ ಸ್ಥಾಪಿತ. ಕ.ದ.ಸಂ.ಸ ರಾಜ್ಯ ಸಮಿತಿಯ ನಿರ್ಣಯದಂತೆ ರಾಜ್ಯದ ತುಂಬೆಲ್ಲಾ ಮನವಿ ಸಲ್ಲಿಸಲಾಗುತ್ತಿದೆ.ಸರ್ಕಾರ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಸಪ್ಪ ಮಾದರ.ಸಂಜೀಯಗಾಂಧಿ ಸಂಜೀವಣ್ಣನವರ.ರವಿ ಹುಣಿಸಿಮರದ.ಮೈಲಪ್ಪ ದಾಸಪ್ಪನವರ.ಪ್ರಶಾಂತ ತಿರಕಪ್ಪನವರ.ಎನ್.ಎಫ್ ನಿಂಬಕ್ಕನವರ.ಕುಮಾರ ಹುಚ್ಚಮ್ಮನವರ.ಗುಡ್ಡಪ್ಪ ಚಿಕ್ಕಪ್ಪನವರ.ರಂಗಪ್ಪ ಮೈಲಮ್ಮನವರ.ಸಿದ್ದಪ್ಪ ಹರಿಜನ.ರಂಗಪ್ಪ ಮ್ಯಲಮ್ಮನವರ.ಮಾಲತೇಶ ಕನ್ನಮ್ಮನವರ.ಭೀಮೇಶ ಯಲ್ಲಾಪೂರ.ಕುಮಾರ ಹುಚ್ಚಣ್ಣನವರ.ಪರಶುರಾಮ ಚನ್ನಳ್ಳಿ.ಮಾಲತೇಶ ತಿರಕಪ್ಪನವರ.ಹನುಮಂತಪ್ಪ ಕಬ್ಬಾರ.ಶ್ರೀಕಾಂತ ಸಣ್ಣಮನಿ.ರುದ್ರಪ್ಪ ಶ್ಯಾಡಂಬಿ ಸೇರಿದಂತೆ ಡಿಎಸ್‍ಎಸ್ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
