
ಶಿರಾ: ಪ್ರತಿಯೊಂದು ಮನೆಗೂ ನೀರು ಒದಗಿಸುವ ಮಹತ್ವದ ಜಲ ಜೀವನ ಮಿಷನ್ ಭಾರತ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸದರಿ ಯೋಜನೆಯ ಯಶಸ್ಸಿನ ನಡುವೆಯೂ ಅಸಮರ್ಪಕ ಕಾಮಗಾರಿಗಳ ನಡೆದಿದ್ದು, ಈ ಸಂಬAಧ ಕೂಡಲೇ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಡಾ.ಸಿಎಂ ರಾಜೇಶ್ಗೌಡ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆಯಿಂದ ಗ್ರಾಮೀಣ ಜನಜೀವನದಲ್ಲಿ ಆರೋಗ್ಯ ಮತ್ತು ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಪಾತ್ರವಹಿಸಿದೆ. ಶಿರಾ ಪಟ್ಟಣ ಮತ್ತು ತಾಲೂಕು ವ್ಯಾಪ್ತಿಯಲ್ಲಿಯೂ ಯೋಜನೆ ಜಾರಿಯಾಗುತ್ತಿದ್ದು ಅನೇಕ ಮನೆಗಳಿಗೆ ಪೈಪ್ಲೈನ್ ಮೂಲಕ ನೀರು ತಲುಪಿಸುವ ಕೆಲಸ ನಡೆಯುತ್ತಿದೆ. ಇದು ಒಂದು ಉತ್ತಮ ಬೆಳವಣಿಗೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಪೈಪ್ಲೈನ್ ಅಳವಡಿಸಲು ಈಗಾಗಲೇ ಸುಂದರವಾಗಿ ನಿರ್ಮಿಸಲಾದ ಸಿಮೆಂಟ್ ಕಾಂಕ್ರೀಟ್ ರಸ್ತೆಗಳನ್ನು ಕಡಿದು ಹಾನಿಗೊಳಿಸಲಾಗುತ್ತಿದೆ. ರಸ್ತೆಗಳಲ್ಲಿ ಉಂಟಾಗಿರುವ ಅಸಮತೋಲನ, ಗುಂಡಿಗಳು ಹಾಗೂ ತಾತ್ಕಾಲಿಕವಾಗಿ ತುಂಬಿದ ಭಾಗಗಳು ಮಳೆ ಬಂದಾಗ ಇನ್ನಷ್ಟು ಹದಗೆಟ್ಟು, ಅಪಘಾತಗಳ ಸಾಧ್ಯತೆಯನ್ನು ಹೆಚ್ಚಿಸುತ್ತಿವೆ. ವಿಶೇಷವಾಗಿ ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಸಂಚರಿಸುವಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಉತ್ತಮ ಸ್ಥಿತಿಯಲ್ಲಿ ನಿರ್ಮಿಸಲಾದ ರಸ್ತೆಗಳನ್ನು ಹಾನಿಗೊಳಿಸಿ, ನಂತರ ಅವುಗಳನ್ನು ಸರಿಯಾಗಿ ಮರುಸ್ಥಾಪಿಸದಿರುವುದು ಸಾರ್ವಜನಿಕ ಹಣದ ನಷ್ಟಕ್ಕೂ ಕಾರಣವಾಗುತ್ತಿದೆ. ಈ ರೀತಿ ಮುಂದಿನ ದಿನಗಳಲ್ಲಿ ಈ ರಸ್ತೆಗಳನ್ನು ಪುನಃ ನಿರ್ಮಿಸುವ ಹೊಣೆ ಪಬ್ಲಿಕ್ ವರ್ಕ್್ಸ ಡಿಪಾರ್ಟ್ಮೆಂಟ್, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಥವಾ ನಗರಸಭೆಗಳ ಮೇಲೆ ಬೀಳುತ್ತದೆ.
ಇದು ಅನಗತ್ಯವಾದ ದ್ವಿಗುಣ ವೆಚ್ಚಕ್ಕೆ ಕಾರಣವಾಗುತ್ತದೆ. ಜಲ ಜೀವನ ಮಿಷನ್ ಯೋಜನೆಯ ಉದ್ದೇಶ ಅತ್ಯುತ್ತಮವಾದುದಾಗಿದ್ದರೂ, ಅದರ ಅನುಷ್ಠಾನದಲ್ಲಿ ಶಿಸ್ತಿನ ಕೊರತೆ ಕಂಡುಬAದರೆ ಜನರಿಗೆ ಲಾಭಕ್ಕಿಂತ ಹೆಚ್ಚು ತೊಂದರೆ ಉಂಟಾಗುತ್ತದೆ. ಈ ಸಂಬAಧ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಡಾ.ರಾಜೇಶ್ಗೌಡ ಒತ್ತಾಯಿಸಿದ್ದಾರೆ.
ಕೋಟ್:
ಶಿರಾ ಪಟ್ಟಣದ ನಗರಸಭೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ಗಳ ಅಭಿವೃದ್ಧಿ ಅಧಿಕಾರಿಗಳು ಜಲ ಜೀವನ ಮಿಷನ್ ಗುತ್ತಿಗೆದಾರರ ಮೇಲೆ ಕಟ್ಟುನಿಟ್ಟಿನ ನಿಯತ್ರಣ ವಹಿಸಬೇಕು. ಕಾಮಗಾರಿ ಪೂರ್ಣಗೊಂಡ ತಕ್ಷಣವೇ ರಸ್ತೆಯನ್ನು ಮೂಲ ಸ್ಥಿತಿಗೆ ತಂದು, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡುವುದು ಗುತ್ತಿಗೆದಾರರ ಕಡ್ಡಾಯ ಜವಾಬ್ದಾರಿಯಾಗಬೇಕು. ಇದನ್ನು ಪಾಲಿಸದ ಗುತ್ತಿಗೆದಾರರ ಮೇಲೆ ದಂಡನಾತ್ಮಕ ಕ್ರಮ ಕೈಗೊಳ್ಳಬೇಕು ಹಾಗೂ ಕೆಲಸದ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಬೇಕು.
-ರಾಜೇಶ್ ಗೌಡ, ಮಾಜಿ ಶಾಸಕರು.








