ಬ್ಯಾಡಗಿ:
ಸಮರ್ಥ ನಾಯಕ ಆಡಳಿದಲ್ಲಿ ಭಾರತ ಕಳೆದೈದು ವರ್ಷಗಳಲ್ಲಿ ಮುನ್ನಡೆದುಜಗತ್ತಿನ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಬಾರಿದೇಶದಲ್ಲಿ ಮೋದಿ ಅಲೆಯಲ್ಲ ಬದಲಾಗಿ ಬಿರುಗಾಳಿಯೇಎದ್ದಿದ್ದು ನರೇಂದ್ರ ಮೋದಿಯನ್ನು ಪ್ರಧಾನಿಯಾಗುವುದನ್ನು ತಡೆಯುವುದನ್ನು ಯಾರಿದಂಲೂ ಸಾಧ್ಯವಿಲ್ಲ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಣಣದ ಅಗಸನಹಳ್ಳಿಯಲ್ಲಿ ಸೇರಿದಂತೆ ವಿವಿಧೆಡೆಗಳಲ್ಲಿ ಹಾವೇರಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಮತಯಾಚನೆ ಮಾಡಿ ಮಾತನಾಡಿದಅವರು ಮೋದಿ ಪ್ರಧಾನಿಯಾದನಂತರದಲ್ಲಿ ಭಾರತದಚರಿಷ್ಮಾ ಬದಲಾಗಿದ್ದುಜಗತ್ತಿಗೆ ಭಾರತತನ್ನ ಶಕ್ತಿಯೇನುಎಂಬುದನ್ನತೋರಿಸುತ್ತಿದೆ, ಪದೆ ಪದೇ ಬಾಲ ಬಿಚ್ಚುತ್ತಿದ್ದಚೀನಾ ಮತ್ತು ಪಾಕಿಸ್ತಾನ ಸದ್ದಡಿಗಿದ್ದು ಮೋದಿ ಚಾಣಾಕ್ಷ ಆಡಳಿತಕ್ಕೆ ಸಾಕ್ಷಿಆದ್ದರಿಂದ ಮತ್ತೊಮ್ಮೆದೇಶವನ್ನುದೇಶ ಭಕ್ತನ ಕೈಗೆ ಕೊಟ್ಟು ನಿರಾಳವಾಗಿರುವ ಅವಶ್ಯಕತೆಇದೆಎಂದರು.
ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ಇಲ್ಲಿಯವರೆಗೂಅಪ್ಪ, ಮಕ್ಕಳ ಪಕ್ಷವಾಗಿದ್ದಜೆಡಿಎಸ್ ಇದೀಗ ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಪಕ್ಷವಾಗಿದೆ, ಚುನಾವಣೆ ಬಂದಾಗಕಾರ್ಯಕರ್ತರು ಕೆಲಸ ಮಾಡಬೇಕುಅಧಿಕಾರ ಸಿಕ್ಕ ಬಳಿಕ ಅವರೆಲ್ಲಾ ಮನೆ ಸೇರಬೇಕು ಹೀಗಾಗಿ ಜೆಡಿಎಸ್ಕಾರ್ಯಕರ್ತರು ಪಾರ್ಟಟೈಮ್ ಕೆಲಸಗಾರರಾಗಿದ್ದಾರೆ, ಭಾರತೀಯಜನತಾ ಪಕ್ಷಕ್ಕೆಕುಟುಂಬ ರಾಜಕಾರಣಗೊತ್ತಿಲ್ಲ, ಬೆಂಗಳೂರು ದಕ್ಷಿಣಕ್ಷೇತ್ರಕ್ಕೆ ಬಿಜೆಪಿಯ ಸಾಮಾನ್ಯಕಾರ್ಯಕರ್ತ ತೇಜಸ್ವಿ ಸೂರ್ಯಅವರಿಗೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ನಿಷ್ಟೆಯಿಂದ ಕೆಲಸ ಮಾಡುವವರ ಹಿಂದೆ ಪಕ್ಷವಿರುತ್ತದೆಎಂಬುದನ್ನು ಸಾಬೀತುಪಡಿಸಿದೆ ಆದ್ದರಿಂದಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಶಿವಕುಮಾರ ಉದಾಸಿಗೆ ಮತ ನೀಡುವಂತೆಕೋರಿದರು.
ಮಾಜಿ ಪುರಸಭೆಅಧ್ಯಕ್ಷ ಬಸವರಾಜಛತ್ರದ ಮಾತನಾಡಿ, ರಾಜ್ಯದಲ್ಲಿಜೆಡಿಎಸ್ ಮತ್ತುಕಾಂಗ್ರೆಸ್ ಮೈತ್ರಿ ಸಾಂದರ್ಭಿಕ ಮದುವೆಯಾಗಿದ್ದು, ಅವಸರದಲ್ಲಿತೆಗೆದುಕೊಂಡ ನಿರ್ಧಾರವಾಗಿದೆ, ವಿಧಾನಸಭೆಚುನಾವಣೆಯಲ್ಲಿ ಕೇವಲ 39 ಕ್ಷೇತ್ರಗಳಲ್ಲಿ ಗೆದ್ದಂತಹಜೆಡಿಎಸ್ಗೆಅಧಿಕಾರಕೊಟ್ಟುಕಾಂಗ್ರೆಸ್ ಶಕ್ತಿ ಕೈಹಿಸುಕಿಕೊಳ್ಳುತ್ತಿದೆ, ಲೋಕಸಭೆಚುನಾವಣೆ ಬಳಿಕ ರಾಜಕೀಯ ಮನ್ವಂತರ ನಡೆಯಲಿದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ, ಬಳಿಕ ಇವೆರಡೂ ಪಕ್ಷಗಳ ನಡುವೆ ವಿಚ್ಛೇಧನ ನಿಶ್ಚಿತ ಎಂದರು.
ಈ ಸಂದರ್ಭಲ್ಲಿ ಶಂಕ್ರಣ್ಣ ಮಾತನವರ ವಿರೇಂದ್ರ ಶೆಟ್ಟರ, ಮುರಿಗೆಪ್ಪ ಶೆಟ್ಟರ್, ಎಪಿಎಂಸಿ ನಿರ್ದೇಶಕ ವಿಜಯಮಳಗಿ, ಯಮನೂರಪ್ಪಉಜನಿ, ಸುರೇಶ ಆಸಾದಿ, ಜಿತೇಂದ್ರ ಸುಣಗಾರ, ಮಲ್ಲಶಪ್ಪ ಬಣಕಾರ, ರವೀಂದ್ರ ಪಟ್ಟಣಶಟ್ಟಿ, ರಾಮಣ್ಣಉಕ್ಕುಂದ, ನಾರಾಯಣಪ್ಪಕರ್ನೂಲ್ ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
