ಸತ್ತ ಕುರಿಗಳ ಪರಿಹಾರ ಧನ ಪಡೆಯಲು ಆಸ್ಪತ್ರೆಗೆ ನೀಡಬೇಕು ಹಣ!

ಜಗಳೂರು:

      ಪಶು ಔಷಧಿ ಪಡೆಯಲು ಮತ್ತು ಸತ್ತ ಕುರಿಗಳ ಪರಿಹಾರ ಧನ ನೀಡಲು ಪಶು ಆಸ್ಪತ್ರೆಯ ವೈದ್ಯರಿಗೆ ಹಣ ನೀಡಿದರೆ ಮಾತ್ರ ಸೌಲಭ್ಯ ನೀಡುತ್ತಾರೆ. ನೀಡದಿದ್ದರೆ ವರ್ಷಗಟ್ಟಲೇ ರೈತರನ್ನು ಪಶು ಇಲಾಖೆಯ ಅಧಿಕಾರಿಗಳು ಅಲೆದಾಡಿಸುತ್ತಾರೆ ಎಂದು ತಾಲೂಕಿನ ಕೆಳಗೋಟೆಯ ಇನ್ನೊಬ್ಬ ರೈತ ಅಂಚೆರ ಬಸವರಾಜಪ್ಪ, ರೈತ ಚೌಡಪ್ಪ ಅಸಮಧಾನ ವ್ಯಕ್ತಪಡಿಸಿದ್ದಾರೆ.

      ತಾಲೂಕು ಯಾವುದೇ ನದಿ ಮೂಲಗಳಿಲ್ಲದೇ ಮಳೆಯನ್ನೆ ಆಶ್ರಯಿಸಿ ಜೀವನ ನಡೆಸುವಂತ ಪರಿಸ್ಥಿತಿ ಇದೆ ಮಳೆಯನ್ನೇ ನಂಬಿರುವ ರೈತರಿಗೆ ಕಳೆದ ನಾಲ್ಕು ವರ್ಷಗಳಿಂದ ಮಳೆ ಇಲ್ಲದೇ ಬರಗಾಲದಿಂದ ತತ್ತರಿಸಿದೆ. ರೈತರು ಜೀವನ ನಡೆಸುವುದೆ ಕಷ್ಟವಾಗಿದೆ. ಇಂತ ಪರಿಸ್ಥಿತಿಯಲ್ಲಿ ಕೆಲ ರೈತರು ಹೈನುಗಾರಿಕೆ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಇಂತಹ ರೈತರಿಗೂ ಕೂಡ ಇಲಾಖೆಯ ಸೌಲಬ್ಯವನ್ನು ನೀಡದೇ ಅಧಿಕಾರಿಗಳು ಸತಾಯಿಸುತ್ತಿರುವುದು ವಿಪರ್ಯಸವಾಗಿದೆ.

      ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರೋಗ ಬಾದೇ ಸೇರಿದಂತೆ ಇತರೆ ಕಾರಣಗಳಿಂದ ಸತ್ತ ಕುರಿಗಳಿಗೆ 5 ಸಾವಿರ ಪ್ರೊತ್ಸಹ ಧನ ನೀಡುವ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆ ರೈತರಿಗೆ ಸಕಾಲಕ್ಕೆ ಪ್ರೋತ್ಸಹ ಧನ ದೊರೆಯದೇ ಪ್ರತಿನಿತ್ಯ ಕಚೇರಿಗೆ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

      ನಾನು 270 ಕುರಿಗಳನ್ನು ಸಾಕಣೆ ಮಾಡಿದ್ದು ಕೃಷಿಯ ಜೊತೆಗೆ ಕುರಿಸಾಕಣೆ ಉಪ ಕಸಬನ್ನಾಗಿ ಮಾಡಿಕೊಂಡಿದ್ದೇನೆ ನಾನಾಕಾರಣ ಗಳಿಂದ ನಾಲ್ಕು ಕುರಿಗಳು ಸತ್ತವು ಪ್ರೋತ್ಸಹ ಧನ ದೊರೆಯುತ್ತದೆ ಎಂದು ಶವ ಪರಿಕ್ಷೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ನೀಡಿ ಹಲವಾರು ತಿಂಗಳುಗಳೆ ಕಳೆದಿವೆ. ಆದರೂ ಇನ್ನು ಹಣ ನೀಡಿಲ್ಲ. ಸತ್ತ ಕುರಿಗಳ ಶವಪರಿಕ್ಷೇ ಮಾಡಲು ವೈದ್ಯರಿಗೆ ಹಣ ನೀಡಬೇಕು. ಹಣ ನೀಡ ಬೇಕು ಹಣ ನೀಡದಿದ್ದರೆ ಶವ ಪರೀಕ್ಷೆ ಮಾಡುವುದಿರಲಿ ಕಡತಗಳನ್ನು ಕಸದ ಪುಟ್ಟಿಗೆ ಹಾಕುತ್ತಾರೆ. ತಾಲೂಕಿನ ಎಲ್ಲಾ ಪಶು ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಪಡೆಯಲು ಹಣ ನೀಡಬೇಕು ಹಣ ನೀಡದಿದ್ದರೆ, ಔಷಧಿಗಳನ್ನು ನೀಡುವುದಿಲ್ಲ ಎಂದು ರೈತ ಚೌಡಪ್ಪ ವಾದವಾಗಿದೆ. ಕ್ಷೇತ್ರದ ಶಾಸಕರು ಇಂತಹ ಅಧಿಕಾರಿಗಳಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಯಾವುದೇ ಲಂಚಪಡೆಯದೇ ರೈತ ಫಲಾನುಭವಿಗಳಿಗೆ ನೀಡುವಂತೆ ಸೂಚಿಸಬೇಕೆಂದು ಅವರು ಈ ಮೂಲಕ ಮನವಿ ಮಾಡಿದ್ದಾರೆ.

      ಇಲಾಖೆ ಅಲೆದಾಡಲು ಸಾಕಗಿದೆ ಈಗ ಇನ್ನು 6 ಕುರಿಗಳು ಸತ್ತಿವೆ ಅವುಗಳನ್ನು ನಾಯಿ ನರಿಗಳಿಗೆ ಹಾಕಿದ್ದೇವೆ ಕಾರಣ ಇಲಾಖೆಯವರು ಸಹಕಾರ ನೀಡುವುದಿಲ್ಲ ಎಂದು ತಾಲೂಕಿನ ಕೆಳಗೋಟೆಯ ಇನ್ನೊಬ್ಬ ರೈತ ಅಂಚೆರ ಬಸವರಾಜಪ್ಪ ಗಂಭೀರವಾಗಿ ಆರೋಪಿಸುತ್ತಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap