ಹಾವೇರಿ:
ಹಾನಗಲ್ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಮಟ್ಟದ ಸಭೆ ಕೆಪಿಸಿಸಿ ರಾಜ್ಯ ಪದಾಧಿಕಾರಿಗಳ ಮುಖಂಡರ ಸಹಯೋಗದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ ಮಾತನಾಡಿ ಸಾಮಾಜಿಕ ಜಾಲತಾಣ ಸದ್ಬಳಿಕೆಯಿಂದ ಸಮಾಜದಲ್ಲಿ ಸತ್ಯ ಸಂದೇಶವು ರವಾನೆಯಾಗುತ್ತದೆ. ನಮ್ಮ ಪಕ್ಷ ಸಂಘಟನೆಯಲ್ಲಿ ಸಾಮಾಜಿಕ ಜಾಲತಾಣವು ಬಹಳ ಪ್ರಾಮಾಖ್ಯತೆಯನ್ನು ಹೊಂದಿದೆ ಎಂದರು
ಎಐಸಿಸಿ ಕಾರ್ಯದರ್ಶಿ ಕುಲದೀಪ ರೈ ಶರ್ಮಾ ಮಾತನಾಡಿ ದೇಶದ ಪ್ರತಿಯೊಂದು ಗ್ರಾಮಗಳಲ್ಲಿ ನಮ್ಮ ಸಾಮಾಜಿಕ ಜಾಲತಾಣ ಸದಸ್ಯರು ಸಹಾಯದಿಂದ ದೇಶದ ಜನರಿಗೆ ಸತ್ಯ ಸಂಗತಿಗಳ ದರ್ಶನವಾಗಲು ತಾವುಗಳು ಪ್ರಥಮ ಸ್ಥಾನದಲ್ಲಿ ಕಾರ್ಯವನ್ನು ನಿರ್ವಹಿಸಿಬೇಕು ಮತ್ತು ನಿಮ್ಮ ಸೇವೆಯಿಂದ ದೇಶದ ಜನರಿಗೆ ನ್ಯಾಯವನ್ನು ಹಾಗೂ ಸತ್ಯವನ್ನು ಜಗತ್ತಿಗೆ ಬೆಳಗಿಸುವ ಕಾರ್ಯವಾಗಲಿ ಎಂದರು.
ಕೆಪಿಸಿಸಿ ಸಾಮಾಜಿಕ ಜಾಲತಾಣ ರಾಜ್ಯಧ್ಯಕ್ಷರಾದ ಬಿ ಆರ್ ನಾಯ್ಡು ಮಾತನಾಡಿ ನಮ್ಮ ಸಾಮಾಜಿಕ ಜಾಲತಾಣ ಸದ್ಬಳಿಕೆಯನ್ನು ರಾಜ್ಯದ ಪ್ರತಿಯೊಬ್ಬ ಜನರಿಗೂ ಮನವರಿಕೆಯಾಗುವ ನಿಟ್ಟಿನಲ್ಲಿ ಕಾರ್ಯಪವೃತ್ತರಾಗಬೇಕು ಹಾಗೂ ಬೇರು ಮಟ್ಟದಲ್ಲಿ ನಮ್ಮ ಸಾಮಾಜಿಕ ಜಾಲತಾಣ ತಂಡವನ್ನು ಬೇರುಮಟ್ಟದಲ್ಲಿ ಸದೃಡ ಮಾಡಬೇಕು ಎಂದರು.
ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರಾದ ಮಹಾಂತೇಶ ಸಾಲಿ ಮಾತನಾಡಿ ಜಿಲ್ಲೆಯಲ್ಲಿ ನಮ್ಮ ಸಾಮಾಜಿಕ ಜಾಲತಾಣವು ಪ್ರತಿಯೊಂದು ಬ್ಲಾಕ್ ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿ ತಂಡಗಳನ್ನು ರಚನೆ ಮಾಡಿ ಕೆಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವುದೇ ನಮ್ಮ ಉದ್ದೇಶವಾಗಿದೆ ಹಾನಗಲ್ ಉಪಚುನಾವಣೆಯಲ್ಲಿ ನಮ್ಮ ಸಾಮಾಜಿಕ ಜಾಲತಾಣ ಸದಸ್ಯರು ಕೆಲಸದಿಂದ ಸಂಪೂರ್ಣ ಕ್ಷೇತ್ರದ ಜನರಲ್ಲಿ ವಿಶ್ವಾಸವನ್ನು ಹೊಂದಿದ್ದಾರೆ ಎಂದರು.
ಮಾಜಿ ಕೆಪಿಸಿಸಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ ಕೆಪಿಸಿಸಿ ಸಾಮಾಜಿಕ ಜಾಲತಾಣ ರಾಜ್ಯಧ್ಯಕ್ಷರಾದ ಬಿ.ಆರ್.ನಾಯ್ಡು ಜಿಲ್ಲಾಧ್ಯಕ್ಷರಾದ ಎಂ ಎಂ ಹೀರೆಮಠ ಕೆಪಿಸಿಸಿ ಕಾರ್ಯದರ್ಶಿಯಾದ ಡಿ.ಬಸವರಾಜ ಹಾಗೂ ಕೆಪಿಸಿಸಿ ಕೋ ಆರ್ಡಿನೇಟರ್ ಶ್ರೀನಿವಾಸ ಹಳ್ಳಳಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಮಾಜಿಕ ಜಾಲತಾಣ ಕೆ.ನೂರಲ್ಲಾ ಇರ್ಫಾನ ಜಾಲತಾಣದಲ್ಲಿ ಪ್ರಚಾರ ಮಾಡುವುದರ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಜಿಲ್ಲಾ ಉಪಾಧ್ಯಕ್ಷರಾದ ಸಂಜೀವ ಆನ್ವೇರಿ ಹಾಗೂ ಪ್ರಶಾಂತ ವಾಲ್ಮೀಕಿ ಬ್ಲಾಕ್ ಅಧ್ಯಕ್ಷರಾದ ವಿನಾಯಕ ಸಾತೇನಹಳ್ಳಿ, ಭೀಮರಾವ ದೇಶಪಾಂಡೆ ಸಾಮಾಜಿಕ ಜಾಲತಾಣದ ಜಿಲ್ಲೆಯ ಹಾಗೂ ಬ್ಲಾಕ್ ಪದಾಧಿಕಾರಿಗಳು ಇದ್ದರು.