ಹಾವೇರಿ :
ನಗರಸಭೆ ಚುನಾವಣೆಯಲ್ಲಿ ಇಜಾರಿಲಕಮಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ನೇ ವಾರ್ಡಿ ಬೂತ್‍ನಲ್ಲಿ ಸದರಿ ಸಾಲಿನಲ್ಲಿ ನಿಂತು ಮಾಜಿ ಸಚಿವ ರುದ್ರಪ್ಪ ಲಮಾಣಿ ತಮ್ಮ ಮತ ಚಲಾವಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿಸಚಿವ ರುದ್ರಪ್ಪ ಲಮಾಣಿ ಕಳೆದ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಆಡಳಿತ ಇರುವಾಗ ನಮ್ಮವರೆ ನಗರಸಭೆಯ ಅಧಿಕಾರದ ಚುಕ್ಕಾಣೆ ಹಿಡಿದು. ನಗರದ ಅಭಿವೃದ್ಧಿಗೆ ಹೆಚ್ಚಿನ ಒಲವು ನೀಡಲಾಗಿತ್ತು. ಹಿಂದಿನ ಆಡಳಿತಾವಧಿ ಕೆಲಸಗಳೇ ಕಾಂಗ್ರೇಸ್ ಅಭ್ಯರ್ಥಿಗಳು ಗೆಲುವಿಗೆ ಶ್ರೀರಕ್ಷೆವಾಗಿವೆ. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಶ್ರಮವಹಿಸಿ ದುಡಿದಿದ್ದಾರೆ. ಮತ್ತೆ ನಗರಸಭೆಯ ಆಡಳಿತ ಚುಕ್ಕಾಣೆಯನ್ನು ಕಾಂಗ್ರೇಸ್ ಪಡೆದುಕೊಳ್ಳಲಿದೆ. ಮತದಾರರ ಹೆಚ್ಚಿನ ಒಲವು ನಮ್ಮ ಪಕ್ಷದ ಕಡೆ ಇದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ನಗರವನ್ನು ಅಭಿವೃದ್ದಿ ಮಾಡಲು ಜನತೆ ಸಹಕಾರಕ್ಕೆ ಮುಂದಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಚುನಾವಣೆಯಲ್ಲಿ ಹಗಲಿರುಳು ಪಕ್ಷದ ಅಭ್ಯರ್ಥಿಗಳ ಪರ ಕೆಲಸ ನಿರ್ವಹಿಸಿದ ಎಲ್ಲ ಮುಖಂಡರಿಗೂ ಹಾಗೂ ಪಕ್ಷದ ಕಾರ್ಯಕರ್ತರಿಗೂ ಮಾಜಿಸಚಿವರು ಅಭಿನಂದನೆ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ