ಮಕ್ಕಳ ಸಹಾಯವಾಣಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು : ಎಂ.ಗಂಗಪ್ಪ

0
14

ಹಾನಗಲ್ಲ :

        ಮಕ್ಕಳ ಹಕ್ಕುಗಳನ್ನು ರಕ್ಷಿಸಿ ಭಾರತದ ಭವಿಷ್ಯಕ್ಕೆ ದೇಶಭಕ್ತಿಯೊಂದಿಗೆ ಶಕ್ತಿ ಪ್ರಜೆಯಾಗಿ ಬೆಳೆಸಲು ಇಡೀ ಸಮಾಜ ಒಂದಾಗಿ ಮುಂದಾಗಬೇಕಾಗಿದೆ ಎಂದು ತಾಲೂಕು ತಹಶೀಲ್ದಾರ ಎಂ.ಗಂಗಪ್ಪ ಕರೆ ನೀಡಿದರು.

       ಹಾನಗಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಭಾಂಗಣದಲ್ಲಿ ಸಭೆಯಲ್ಲಿ ಮಕ್ಕಳಲ್ಲಿನ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ಮತ್ತು ಸಮಸ್ಯೆಗಳನ್ನು ಮುಕ್ತವಾಗಿ ಬಗೆಹರಿಸಿಕೊಳ್ಳಲು ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಲು ಇಲಾಖೆಯು ವ್ಯವಸ್ಥಿತ ಕಾರ್ಯಕೈಗೊಳ್ಳಬೇಕು.

        ಬಾಲ್ಯವಿವಾಹ ಪ್ರಕರಣ ಬಂದಾಗ ಇಲಾಖೆಯವರ ಸಹಯೋಗದೊಂದಿಗೆ ಬಾಲ್ಯವಿವಾಹನ್ನು ತಡೆಗಟ್ಟಿ, ತೆರೆದಮನೆ ಕಾರ್ಯಕ್ರಮಗಳಲ್ಲಿ ಮಕ್ಕಳು ಮುಕ್ತವಾಗಿ ವ್ಯಕ್ತ ಪಡಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಹಾನಗಲ್ಲ ತಾಲೂಕಿನ ಎಲ್ಲ ಇಲಾಖೆಯ ಕಛೇರಿಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ, ಹಾನಗಲ್ಲ ಪಟ್ಟಣದ ಅಂಗನವಾಡಿಕೇಂದ್ರ, ಶಾಲೆಗಳಲ್ಲಿ ಮತ್ತು ಪುರಸಭೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಬರಹದ ಮೂಲಕ ಮಕ್ಕಳ ಸಹಾಯವಾಣಿ 1098 ಸಂಖ್ಯೆಯನ್ನು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದಾಗಿ ಮತ್ತು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮ ಸಭೆಗಳು ಕಡ್ಡಾಯವಾಗಿ ನಡೆಯಬೇಕು.

        ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡುವುದು, 18 ವರ್ಷದ ಒಳಗಿರುವ ವಿಕಲಚೇತನ ಮಕ್ಕಳಿಗೆ ಗ್ರಾಮ ಪಂಚಾಯತಿಯಲ್ಲಿರುವ 5% ಅನುದಾನವನ್ನು ಬಳಕೆ ಮಾಡಿ ಸಾಧನ-ಸಲಕರಣೆ ಒದಗಿಸುವಂತೆ ನೋಡಿಕೊಳ್ಳುವುದು. ಮಕ್ಕಳ ಸಹಾಯವಾಣಿ ಹಮ್ಮಿಕೊಂಡ ತೆರೆದ ಮನೆ ಕಾರ್ಯಕ್ರಮಗಳಲ್ಲಿ ಮಕ್ಕಳು ವ್ಯಕ್ತಪಡಿಸಿದ ಸಮಸ್ಯೆಗಳಿಗೆ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಪರಿಹಾರ ಒದಗಿಸಬೇಕು ಎಂದರು.

       ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ತಾಲೂಕಾ ಮಕ್ಕಳ ಸಹಾಯವಾಣಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಸಿಸ್ಟರ್ ಡಿಂಪಲ್ ಡಿ’ಸೋಜಾ ಹಾನಗಲ್ಲ ಬಸ್ ನಿಲ್ದಾಣದಲ್ಲಿರುವ ಧ್ವನಿವರ್ಧಕದ ಮೂಲಕ ಮಕ್ಕಳ ಸಹಾಯವಾಣಿ 1098 ನಿರಂತರವಾಗಿ ಪ್ರಚಾರ ಮಾಡುವುದು. ಬಾಲ್ಯ ವಿವಾಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು. ಹಾನಗಲ್ಲ ತಾಲೂಕಿನ ಆಸ್ಪತ್ರೆಗಳಲ್ಲಿ ವಿಕಲಚೇತನ ಮಕ್ಕಳಿಗೆ ವೈದ್ಯಕೀಯ ಪ್ರಮಾಣ ಪತ್ರಗಳು ಸಿಗುವಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಡಾ.ರವೀಂದ್ರಗೌಡ ಪಾಟೀಲ್, ಮಾಲತೇಶ್ ಸಿ.ಬಿ. ಸಹನಿರ್ದೇಶಕರು, ವಿದ್ಯಾ ಬಡಿಗೇರ, ಎಸ್.ಆನಂದ, ಮೋಹನಕುಮಾರ.ಡಿ. ದೀಪಾ ಮೇಸ್ತಾ, ರಾಮಣ್ಣ ಹಡಪದ. ಡಿ. ಬಿ.ಶೇಷಗಿರಿ, ಸಿ.ಆಯ್. ಕುನ್ನೂರು. ಶಿವರಾಜ್ ವಿ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here