ಹೂವಿನಹಡಗಲಿ :
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಾಕಷ್ಟು ಉತ್ತಮ ಯೋಜನೆಗಳಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ಅವರು ಪಟ್ಟಣದ ಪುರಸಭೆಯ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಪೋಷಣಾ ಅಭಿಯಾನ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ, ಮಾತನಾಡಿದರು. ಇತ್ತೀಚೆಗೆ ಹುಟ್ಟುವ ಮಕ್ಕಳಲ್ಲಿ ಪೋಷಕಾಂಶದ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿದ್ದು, ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಹುಟ್ಟುವ ಮಗುವು ಅಪೌಷ್ಠಿಕತೆಯಿಂದ ಬಳಲದಿರಲಿ ಎನ್ನುವ ದೃಷ್ಠಿಯಿಂದ ಸರ್ಕಾರ ನೂತನವಾಗಿ ಮಾತೃಪೂರ್ಣ ಯೋಜನೆಯನ್ನು ಜಾರಿಗೊಳಿಸಿದೆ. ಗರ್ಭಿಣಿಯರು, ಅಂಗನವಾಡಿ ಕೇಂದ್ರಗಳ ಮುಖಾಂತರವಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ಕೂಡಾ ತಮ್ಮನ್ನು ತೊಡಗಿಸಿಕೊಳ್ಳಬೇಕು, ಅಲ್ಲದೇ, ಸ್ವ ಸಹಾಯ ಸಂಘದ ಮೂಲಕ ಸರ್ಕಾರ ನೀಡುವ ಸೌಲಭ್ಯವನ್ನು ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕಬೇಕೆಂದು ಹೇಳಿದ ಅವರು, ಮೀನುಸಾಕಾಣಿಕೆಯ ಕೃಷಿಯಲ್ಲಿಯೂ ಕೂಡಾ ಮಹಿಳೆಯರು ತೊಡಗಿಕೊಳ್ಳಬೇಕು, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಕೆರೆಗಳಲ್ಲಿ ಮೀನುಸಾಕಾಣಿಕೆ ಮತ್ತು ಮಾರಾಟದ ಜವಾಬ್ದಾರಿಯನ್ನು ಮಹಿಳೆಯರಿಗೆ ವಹಿಸಬೇಕು ಎಂದು ನಿರ್ದೇಶನ ನೀಡಿದ್ದೇನೆ ಎಂದರು.
ಸಂದರ್ಭದಲ್ಲಿ ಕಾಂಗೈ ಬ್ಲಾಕ್ ಅಧ್ಯಕ್ಷರಾದ ಐಗೋಳ್ ಚಿದಾನಂದ, ಜಿಲ್ಲಾ ಉಪಾಧ್ಯಕ್ಷ ವಾರದ ಗೌಸಮೊಹಿದ್ದೀನ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಗಡಿಗಿ ಕೃಷ್ಣ, ಎಸ್.ಸಿ.ಘಟಕದ ಅಧ್ಯಕ್ಷ ಎಲ್.ಚಂದ್ರನಾಯ್ಕ, ಪುರಸಭೆ ಅಧ್ಯಕ್ಷೆ ಶಕುಂತಲಮ್ಮ ಸದಸ್ಯರಾದ ಈರಮ್ಮ, ರುದ್ರಮ್ಮ, ಕೋಡಿಹಳ್ಳಿ ಕೊಟ್ರೇಶ, ಎಂ.ಸುರೇಶ, ಹಾಗೂ ಡಾ.ರಮ್ಯ, ಪುರಸಭೆ ಇಂಜಿನೀಯರ್ ಶಿಲ್ಪಾಶ್ರೀ, ಅಂಗನವಾಡಿ ಮೇಲ್ವಿಚಾರಕಿ ಹನುಮಕ್ಕ, ಅಂಗನವಾಡಿ ಕಾರ್ಯಕರ್ತೆಯರಾದ ಬಿ.ಜಯಲಕ್ಷ್ಮಿ, ಬಿ.ಶಾಂತಮ್ಮ, ಗೌರಮ್ಮ, ಕೊಟ್ರಮ್ಮ, ಜ್ಯೋತಿ, ರಜಿಯಾ, ಸುಧಾರಾಣಿ, ರೇಣುಕಾದೇವಿ, ಸಾವಿತ್ರಿ, ಹೆಚ್.ಎಂ.ಕೊಟ್ರಮ್ಮ, ಸರಸ್ವತಿ, ಕಮಲಾ, ಸೇರಿದಂತೆ ಹಲವರು ಇದ್ದರು.
ಇದೇ ಸಂದರ್ಭದಲ್ಲಿ ಇಲಾಖೆಯವತಿಯಿಂದ ಗರ್ಭಿಣಿಯರಿಗೆ ಸೀಮಂತ ಕಾರ್ಯವನ್ನು ನೆರವೇರಿಸಲಾಯಿತು. ಹಾಗೂ ಪೌಷ್ಠಿಕ ಆಹಾರವನ್ನು ಮಹಿಳೆಯರು ಸಿದ್ದಪಡಿಸಿಕೊಂಡು ಗರ್ಭಿಣಿಯರು ಮತ್ತು ಮಕ್ಕಳಿಗೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ