ದೆಹಲಿ;
ಸಲಿಂಗಕಾಮ ಎನ್ನುವುದು ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ ಆದೇಶ ಹೊರಡಿಸಿದೆ. ಐಪಿಸಿ ಸೆಕ್ಷನ್ 377 ರ ಸಿಂಧುತ್ವ ಕುರಿತು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಿಂದ ಈ ತೀರ್ಪು ನೀಡಿರುವುದರಿಂದ ಕೊನೆಗೂ ಸಲಿಂಗ ಕಾಮಿಗಳ ಹೋರಾಟಕ್ಕೆ ದಕ್ಕಿದ ಜಯವಾಗಿದೆ.
ಸಲಿಂಗಕಾಮವೂ ಅಪರಾಧವೂ ಅಲ್ಲ, ಏಕೆಂದರೆ, ಸಲಿಂಗಕಾಮಿಗಳ ನಡುವಿನ ಸಹಮತದ ಸೆಕ್ಸ್ ಆಗಿರುವುದರಿಂದ ಇದು ಅಪರಾಧ ಎಂದು ಬಿಂಬಿಸಲಾಗದು. ಇದರಿಂದ ವೈವಿಧ್ಯತೆಯ ಶಕ್ತಿಯನ್ನು ಹೆಚ್ಚಿಸುವ ಗೌರವವಿದೆ. ಎಂದು ಸಿಜೆಐ ತಿಳಿಸಿದೆ. 156 ವರ್ಷಗಳ ಹಳೆಯ ಕಾನೂನನ್ನು ರದ್ದು ಮಾಡಲಾಗಿದ್ದು, ಇನ್ನು ಮುಂದೆ ಬಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂದು ಮಹತ್ವದ ತೀರ್ಪಿನಲ್ಲಿ ತಿಳಿಸಿದೆ.ಈ ತೀರ್ಪನ್ನು ಸಿಜೆಐ ದೀಪಕ್ಮಿಶ್ರ ಅವರು ಓದಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







