ಸಿಕ್ಕಿ ಬಿದ್ದ ಕಳ್ಳರು

ಚೆನ್ನೈ:

               ಕದ್ದೊಯ್ಯುತ್ತಿದ್ದ ಕಾರು ಅಪಘಾತಕ್ಕೀಡಾದ ಪರಿಣಾಮ ಕಳ್ಳರು ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ನಗರದ ತಿರುವನ್ಮಿಯುರ್‌ನಲ್ಲಿ ನಡೆದಿದೆ.ತಿರುವನ್ಮಿಯುರ್ ನಿವಾಸಿ ತೆಂಮೋಳಿ(32) ಮಂಗಳವಾರ ಬೆಳಿಗ್ಗೆ ಎದ್ದು ನೋಡಿದಾಗ ಮನೆ ಮುಂದೆ ರಾತ್ರಿ ಪಾರ್ಕ್ ಮಾಡಿದ್ದ ಕಾರ್ ಸ್ಥಳದಲ್ಲಿರಲಿಲ್ಲ. ತಕ್ಷಣ ಆಕೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು.ನಾಪತ್ತೆಯಾಗಿದ್ದ ಕಾರು ಕೊಟ್ಟಿವಾಕಂ ಬಳಿ ಕಾಣಿಸಿಕೊಂಡಿದೆ ಎಂದು ಪೊಲೀಸರಿಗೆ ಅದೇ ದಿನ ರಾತ್ರಿ ಮಾಹಿತಿ ದೊರಕಿತ್ತು. ಸಂಚಾರಿ ಪೊಲೀಸರು ಕಾರನ್ನು ತಡೆಯಲು ಮುಂದಾದಾಗ ತಪ್ಪಿಸಿಕೊಳ್ಳುವ ಭರದಲ್ಲಿ ರಸ್ತೆ ಡಿವೈಡರ್‌ಗೆ ಬಡಿದು ಕಾರು ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಇಬ್ಬರನ್ನು ತಕ್ಷಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಸೆಂಟ್ ನಗರದ ನಿವಾಸಿಗಳಾದ ಅಯ್ಯನಾರ್ ಮತ್ತು ಸರಣ್ ತಾವು ಕಾರು ಕದ್ದಿರುವುದಾಗಿ ಒಪ್ಪಿಕೊಂಡಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

Recent Articles

spot_img

Related Stories

Share via
Copy link