ಸಿರುಗುಪ್ಪ ಈದ್-ಉಲ್-ಅಜ್ಹಾ ಬಕ್ರೀದ್ ಹಬ್ಬ ತ್ಯಾಗ ಬಲಿದಾನದ ಸಂಕೇತ

ಸಿರುಗುಪ್ಪ :-

      ಇತಿಹಾಸದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆ ಜರುಗಿದ ಅಲ್ಲಾಹನಿಗೆ ಪರಮ ಆಪ್ತರು ಸರಳತೆ ಪ್ರಾಮಾಣಿಕತೆ ಮುಖ್ಯ ಗುಣಗಳ ಪ್ರವಾದಿಗಳಾದ ಹಜರತ್ ಇಬ್ರಾಹಿಂ, ಹಜರತ್ ಹಾಜಿರಾ, ಹಜರತ್ ಇಸ್ಮಾಯಿಲ್ ಅವರನ್ನು ನೆನಪಿಸಿ ಆಚರಿಸುವ ತ್ಯಾಗ ಬಲಿದಾನದ ಸ್ಮರಣೆಯೇ ಈದ್ ಉಲ್ ಅಜ್ಹಾ ಅಥವಾ ಬಕ್ರೀದ್ ಹಬ್ಬದ ವೈಶಿಷ್ಟ್ಯ ಸಂಕೇತ ಎಂದು ಖತೀಬ್ ಅಬುಲ್ ಹಸನ್ ಬಿನ್ ಜಾಕಿರ್ ಹುಸೇನ್ ಸಾಹೇಬ್ ಅವರ ನೇತೃತ್ವದಲ್ಲಿ ಮೌಲಾನಾ ಮೊಹಮ್ಮದ್ ಅಮಿಸ್ ಅವರು ಸಂದೇಶ ನಿಡಿದರು.

      ನಗರದ ಈದ್ಗಾ ಮೈದಾನದಲ್ಲಿ ತ್ಯಾಗ ಬಲಿದಾನದ ಹಬ್ಬದ ಪ್ರಯುಕ್ತ ಎರಡು ರಾತ್ ವಿಶೇಷವಾಗಿ ಸಾಮೂಹಿಕ ವಾಜೀಬ್ ನಮಾಜ್ ನಿರ್ವಹಿಸಿ ಖುತ್ಬಾ ಖ್ವಾನಿ ಭಾಷಣದಲ್ಲಿ ಅವರು ಮಾತನಾಡಿ ಸರ್ವಶಕ್ತ ಅಲ್ಲಾಹನ ಪ್ರವಾದಿಗಳು ಮೊಹಮ್ಮದ್ ಪೈಗಂಬರ್ ಇಸ್ಲಾಮಿನ ಸೌದಿ ಅರೇಬಿಯಾದ ಮೆಕ್ಕಾದ ಕಾಬಾ ಪವಿತ್ರ ಹಜ್ ಯಾತ್ರೆ ಜಗತ್ತಿನ ಭ್ರಾತೃತ್ವದ ಮುಸ್ಲಿಮರ ಧಾರ್ಮಿಕ ಕೇಂದ್ರ ಜನರಿಗೆ ಇದರ ಸಂದರ್ಶನ ಕರೆ ಕೊಡಲಾಗುತ್ತಿದೆ ಎಂದರು. ಮಳೆ ಬೆಳೆ ಸುಖ ಸಮೃದ್ಧಿ ಶಾಂತಿ ಸರ್ವರಿಗೂ ನೆಲೆಸಲಿ ಎಂದು ದುವಾ ಮಾಡಿದರು.

      ಕೇರಳ, ಕೊಡಗು,ಹಲವಾರು ಜಿಲ್ಲೆಗಳಲ್ಲಿ ಅತಿವೃಷ್ಟಿ ಭೀಕರ ಮಳೆ ಪ್ರವಾಹ ಪ್ರಕೃತಿ ವಿಕೋಪದಿಂದ ನಲುಗಿಹೋದ ನಿರಾಶ್ರಿತರಿಗೆ ಜನತೆ ಕೈ ಜೋಡಿಸಬೇಕು ಮತ್ತು ಪರಿಹಾರ ನೀಡಿ ಮಾನವೀಯತೆ ಮೆರೆಯಿರಿ ಎಂದರು. ಸೌದಾಗರ್ ಮಸೀದ್ ಆವರಣದಲ್ಲಿ ಹಂಡಿ ಹುಸೇನ್ ಬಾಷು ಸಾಹೇಬ್ ನೇತೃತ್ವದಲ್ಲಿ ಗೌರವಿಸಿ ಮಾಲಾರ್ಪಣೆ ದೊಂದಿಗೆ ಜಿಲ್ಲಾ ವಕ್ಫ್ ಮಾಜಿ ಸದಸ್ಯ ಅಬ್ದುಲ್ ನಬಿ,ಮೌಲಾನಾ ಎಸ್ ಅಬ್ದುಲ್ ಸಮದ್, ಖತೀಬ್ ಅಬುಲ್ ಹಸನ್, ಮೊಹಮ್ಮದ್ ಅಮಿಸ್, ಅವರಿಗೆ ಸನ್ಮಾನಿಸಲಾಯಿತು.

      ಲಾಡಖಾನ್ ಮಸೀದಿಯಲ್ಲಿ ಮೌಲಾನ ಹಾಫೀಜ್ ಎಸ್ ಖಾಜಾಹುಸೇನ್ ಸಾಹೇಬ್, ಜಾಮಿಯಾ ಮಸೀದಿ ಮೌಲಾನಾ ಹಾಫೀಸ್ ಲುಕ್ಮಾನ್ ಅವರು ಹಿರಿಯ ನಾಗರಿಕರಿಗೆ ವ್ಯವಸ್ಥೆಗೊಳಿಸಿದ ಬಕ್ರೀದ್ ಹಬ್ಬದ ನಮಾಜ್ ನಿರ್ವಹಿಸಿದರು ನಿಜಾಮಿಯಾ, ಹಾಜಿ, ವಲ್ಲು?ರು, ದರ್ಗಾ, ಅಬೂಬಕರ್ ಸಿದ್ಧಿಕ್, ಬಿಲಾಲ್, ಮೊಹಮ್ಮದಿಯ, ಅಕ್ಬರಿ, ಎಲ್ಲಾ ಮಸೀದಿ ಮೊಹಲ್ಲಾಗಳಿಂದ ಸಾವಿರಾರು ಜನರು ನಗರಸಭೆ ಅಧ್ಯಕ್ಷರು ಎಂ. ಅರುಣಾ ಪ್ರತಾಪ್ ರೆಡ್ಡಿ, ಸಿಪಿಐ ಚಂದನ್ಗೋಪಾಲ್, ಪಿಎಸ್‍ಐ ಎನ್. ರಘು, ಅವರನ್ನು ಸನ್ಮಾನಿಸಲಾಯಿತು. ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ, ಹಾಜಿ ಹಂಡಿ ಹುಸೇನ್ ಸಾಬ್, ಎ ಅಬ್ದುಲ್ ನಬಿ, ಪರಸ್ಪರ ವಿನಿಮಯ ಮಾಡಿ ಈದ್ ಮುಬಾರಕ್ ಶುಭ ಹಾರೈಸಿದರು. ಖಬರಸ್ತಾನ್ ಗೆ ತೆರಳಿ ಜಿಯಾರತ್ ದರ್ಶನ ಪಡೆದರು ನಂತರ ಖುರ್ಬಾನಿಗಾಗಿ ತೆರಳಿದರು ನಗರದ ಮುಖ್ಯ ರಸ್ತೆಗಳಿಂದ ಅಲ್ಲಾಹನ ಸ್ಮರಣೆ ದೊಂದಿಗೆ ಬೃಹತ್ ಸಂಖ್ಯೆಯಲ್ಲಿ ಈದ್ಗಾಕ್ಕೆ ತೆರಳಿದರು. ಎ. ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ರಫಿ, ಮೊಹಮ್ಮದ್ ನೌಷಾದ್ ಅಲಿ,ಮೊಹಮ್ಮದ್ ನಿಜಾಮುದ್ದಿನ್, ಮೊಹಮ್ಮದ್ ಹಾಜಿ ಇತರೆ ಗಣ್ಯರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link