ಹಗರಿಬೊಮ್ಮನಹಳ್ಳಿ:
ಹಂಪಿ ಉತ್ಸವ ಆಚರಣೆ ನಡೆಸುವಂತೆ ಆಗ್ರಹಿಸಿ ಮತ್ತು ಶೀಘ್ರ ಆಚರಣೆಯ ನಿರ್ಧಾರ ಪ್ರಕಟಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜೇಸಿಐ ಸಂಸ್ಥೆಯ ತಾಲೂಕು ಪದಾಧಿಕಾರಿಗಳು ತಹಸೀಲ್ದಾರ ಕೆ.ವಿಜಯಕುಮಾರರಿಗೆ ಸೋಮವಾರ ಮನವಿ ಸಲ್ಲಿದರು.
ಮನವಿ ಸಲ್ಲಿಸಿದ ಬಳಿಕ ಜೇಸಿಐ ಅಧ್ಯಕ್ಷ ಅಶೋಕ ಉಪ್ಪಾರ ಮಾತನಾಡಿ, ಮದ್ಯಂತರ ಚುನಾವಣೆ ನಿಮಿತ್ತ ಸ್ಥಗಿತಗೊಂಡಿದ್ದ ಹಂಪಿ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ಶೀಘ್ರವೇ ನಿರ್ಧಾರ ಪ್ರಕಟಿಸಲಿ, ಬರದ ನೆಪವೊಡ್ಡಿ ಆಚರಣೆ ಕೈಬಿಡವುದು ಸರಿಯಲ್ಲ. ಇಂತಹ ಹೇಳಿಕೆಯಿಂದ ಜಿಲ್ಲೆಯ ಜನತೆಗೆ ಬೇಸರ ಮೂಡಿಸಿದೆ. ರಾಜ್ಯದಲ್ಲಿ ಮೈಸೂರು ದಸರಾವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಅಡ್ಡಿಯಾಗದ ಬರದ ಛಾಯೆ ಹಂಪಿ ಉತ್ಸವಕ್ಕೆ ಏಕೆ? ಎಂದು ಪ್ರಶ್ನಿಸಿದರು. ಈಚೇಗೆ ಕೊಡುಗು ಜಿಲ್ಲೆಗೆ ನೈಸರ್ಗಿಕ ವಿಕೋಪ ಉಂಟದಾಗ ಬಳ್ಳಾರಿ ಜಿಲ್ಲೆಯ ಜನತೆ ಲಕ್ಷಲಕ್ಷ ರೂ.ಗಳು ಮತ್ತು ಗೃಹಪಯೋಗಿ ವಸ್ತುಗಳನ್ನು ನೀಡಿ ಮಾನವೀಯತೇ ಮೆರೆದಿದ್ದಾರೆ. ಬಳ್ಳಾರಿ ಜನತೆ ಹಣವನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡುವ ಮೂಲಕ ಆಚರಣೆಗೆ ಸಹಕರಿಸಲಿದ್ದಾರೆ ಎಂದರು. ರಾಜ್ಯ ಸರ್ಕಾರ ಚುನಾವಣೆಗಾಗಿ ಹಣ ಪೋಲು ಮಾಡಿದಾಗ ಬರದ ಬಗ್ಗೆ ಕಾಳಜಿ ಇರಲಿಲ್ಲ. ಐತಿಹಾಸಿಕ ಹಂಪಿ ಉತ್ಸವ ನಡೆಸಿ ಸಾಂಸ್ಕøತಿಕ ವೈಭವವನ್ನು ಮೆರೆದು ಕಲಾವಿದರಿಗೆ ಪ್ರೋತ್ಸಾಹ ನೀಡುವಲ್ಲಿ ನಿರಾಸಕ್ತಿ ತೋರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜೇಸಿಐ ಸಂಸ್ಥೆಯ ಪೂರ್ವ ವಲಯಾಧ್ಯಕ್ಷ ಚಂದ್ರಾಮಪ್ಪ, ಘಟಕದ ಅಧ್ಯಕ್ಷ ಬ್ರಹ್ಮಾನಂದ ಗುತ್ತಲ್, ಕಾರ್ಯದರ್ಶಿ ವಿ.ಎಂ.ವಿಶಾಲ್, ಹಿರಿಯರಾದ ಅನಿಲ್ ಚಿದ್ರಿ, ಎಸ್.ವೀರಭದ್ರಪ್ಪ, ವೆಂಕಟೇಶ್ ಮರಡಿ, ಗೌತಮ್ ಧಾರಿವಾಲ್, ನರಪತ್ ಮೆಹತಾ, ಆರ್.ಕೇಶವರೆಡ್ಡಿ, ನಾಗರಾಜ ಸೋಡಾದ್, ಬಾರಿಕರ ಮಂಜುನಾಥ, ನಟರಾಜ ಬಾದಾಮಿ, ಸದಸ್ಯರಾದ ಟಿ.ಜಿ.ನಾಗರಾಜ್, ಸಿದ್ದಲಿಂಗೇಶಯ್ಯ ಹಿರೇಮಠ, ಕೆ.ರುದ್ರೇಶ್, ರಾಹುಲ್ ವರ್ಣೇಕರ್, ಗುರುಬಸವರಾಜ್, ಶಿವಪುತ್ರ, ಕಲಾವಿದರ ಕ್ಷೇಮಾಭಿವೃದ್ದಿ ಸಂಘದ ಬೆಳ್ಳಕ್ಕಿ ರಾಮಣ್ಣ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
