ತಿಪಟೂರು:
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಗಣನೀಯ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತ್ತರಿಸಿ ಹೋಗಿದ್ದಾರೆ. ತೆರಿಗೆ ದರ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ದಿನಾಂಕ 10-08-2018ರ ಸೋಮವಾರ ಭಾರತ್ ಬಂದ್ ಆಚರಿಸಲು ರಾಷ್ಟ್ರೀಯ ಕಾಂಗ್ರೇಸ್ ಕರೆಕೊಟ್ಟಿದ್ದು ತಿಪಟೂರಿನಲ್ಲಿ ಬಂದ್ ಆಚರಿಸಲು ತೀರ್ಮಾನಿಸಲಾಗಿದ್ದು. ತಾವುಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು, ಹೋಟೆಲ್, ಚಿತ್ರಮಂದಿರ, ಪೆಟ್ರೋಲ್‍ಬಂಕ್, ಎ.ಪಿ.ಎಂ.ಸಿ ಮಾರುಕಟ್ಟೆ ಸೇರಿದಂತೆ ಎಲ್ಲಾ ಅಂಗಡಿಗಳ ಮಾಲೀಕರುಗಳು ತಮ್ಮ ಅಂಗಡಿಯನ್ನು ಬಂದ್‍ಮಾಡುವ ಮೂಲಕ ಭಾರತ್ ಬಂದ್‍ಗೆ ಸಹಕರಿಸಿ ಯಶಸ್ವಿಗೊಳಿಸಲು ಕೋರಿದೆ ಎಂದು ತಿಪಟೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಎಂ.ಎನ್.ಕಾಂತರಾಜು ಹಾಗೂ ತಾಲ್ಲೂಕು ಕಾಂಗ್ರೇಸ್ ಪತ್ರಿಕಾ ವಕ್ತಾರರಾದ ಕೆ.ಎಸ್.ಸದಾಶಿವಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಂಗ್ರೇಸ್ ಪಕ್ಷದ ಎಲ್ಲಾ ಕಾರ್ಯಕರ್ತರು, ಬ್ಲಾಕ್ ಕಾಂಗ್ರೇಸ್, ನಗರ ಕಾಂಗ್ರೇಸ್ ಹಾಗೂ ಪಕ್ಷದ ವಿವಿಧ ಘಟಕಗಳ ಪದಾದಿಕಾರಿಗಳು ಹಾಗೂ ಕಾಂಗ್ರೇಸ್ ಪಕ್ಷದ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು, ರಾಜ್ಯ ಸಮ್ಮಿಶ್ರ ಸರ್ಕಾರದ ಜೆ.ಡಿ.ಎಸ್ ಪಕ್ಷದವರು, ಮತ್ತು ಎಲ್ಲಾ ಬಿ.ಜೆ.ಪಿ ವಿರೋದಪಕ್ಷದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದ್ ಕಾರ್ಯಕ್ರಮದಲ್ಲಿ ಭಾಗಹಿಸುವಂತೆ ಕೆ.ಎಸ್.ಸದಾಶಿವಯ್ಯ ಕರೆನೀಡಿದ್ದಾರೆ.