ಹೊಸಪೇಟೆ:
ಸ್ವಚ್ಛತೆಯ ಸಂಕಲ್ಪ ಹಾಗೂ ಸದಾ ನೆನಪಿನಲ್ಲಿಡಲುಒಂದು ಫೋಟೊಕ್ಲಿಕ್‍ನೊಂದಿಗೆ ಸ್ವಾತಂತ್ರ್ಯೋತ್ಸವಆಚರಿಸುವ ಮೂಲಕ 72ನೇ ಸ್ವಾತಂತ್ರ್ಯ ದಿನವನ್ನು ಸ್ಥಳೀಯ ವಿಕಾಸ ಯುವಕ ಮಂಡಳ ವಿಭಿನ್ನವಾಗಿ ಆಚರಿಸಿತು.
ಸ್ಥಳೀಯ ತಾಲೂಕುಕ್ರೀಡಾಂಗಣದಲ್ಲಿಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರಕಾರ್ಯಕ್ರಮ ಉದ್ಘಾಟಿಸಿದ ನಗರಸಭಾಧ್ಯಕ್ಷಗುಜ್ಜಲ್ ನಿಂಗಪ್ಪ , ಉಪವಿಭಾಗಾಧಿಕಾರಿ ಗಾರ್ಗಿಜೈನ್ ಹಾಗೂ ನಗರಸಭಾ ಸದಸ್ಯರು ಹಾಗೂ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು ಸ್ವಚ್ಛತೆಯ ಸಂಕಲ್ಪ ಹಾಗೂ ಫೋಟೊಕ್ಲಿಕ್‍ಗೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿಗಾರ್ಗಿಜೈನ್ ಮಾತನಾಡಿ ನಮ್ಮ ದಿನ ಎಲ್ಲಾ ಸಮಸ್ಯಗಳಿಗೆ ಸ್ವಚ್ಛತೆ ಸವಾಲಾಗುತ್ತೀದೆ, ಸಾರ್ವಜನಿಕರು ಜಾಗೃತವಾಗದ ಹೊರತು ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿಲ್ಲ ಈ ಹಿನ್ನೆಲೆಯಲ್ಲಿಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದು ಜಾಗೃತಿ ಮೂಡಿಸುತ್ತಿರುವುದುಆಶಾದಾಯಕ ಬೆಳವಣಿಗೆ ಎಂದರು.
ಮಂಡಳದ ಅಧ್ಯಕ್ಷ ಗೋಸಲ ಬಸವರಾಜ್, ನಗರಸಭಾ ಸದಸ್ಯರಾದ ಮಂಜುನಾಥ, ಶ್ರೀಧರ ನಾಯ್ಡು, ಚಂದ್ರಕಾಂತಕಾಮತ್, ಮಂಡಳದ ಹಿರಿಯ ಸದಸ್ಯಅನಂತ ಜೋಶಿ, ಎಂ.ಡಿ.ನಾಗರಾಜ್, ಚಂದ್ರಶೇಖರ್, ರಿಯಾಜ್, ಪ್ರವೀಣ, ಆಕಾಶ್, ಎಂ.ಶಂಕರ್ ಹಾಗೂ ಸಂಗ್ರಾಮ್ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
