ಹಕ್ಕೊತ್ತಾಯಗಳಿಗೆ ಪಕ್ಷಗಳು 20 ರ ಒಳಗೆ ನಿರ್ಧಾರ ಪ್ರಕಟಿಸಲಿ : ದರೂರು ಪುರುಷೋತ್ತಮ ಗೌಡ

ಬಳ್ಳಾರಿ

       ಲೋಕಸಭಾ ಚುನಾವಣೆ ಯಲ್ಲಿ ಸ್ಪರ್ಧೆ ಮಾಡಿರುವ ಎಲ್ಲಾ ರಾಜಕೀಯ ಪಕ್ಷಗಳು ರೈತರ ಹಕ್ಕೊತ್ತಾಯ ಗಳ ಪರವಾಗಿ ನಾವುವಿದ್ದೇವೆ ಎನ್ನುವುದನ್ನು ಏಪ್ರಿಲ್ 20 ರ ಒಳಗೆ ಯಾರು ನಿರ್ಧಾರ ತೆಗೆದುಕೊಂಡು ಭರವಸೆಗಳು ಈಡೇರಿಸಲು ಬದ್ದ ಎಂಬುದು ತಿಳಿಸಿದವರಿಗೆ ನಮ್ಮ ಮತ ನೀಡುತ್ತವೆ ಎಂದು ತುಂಗಭದ್ರಾ ರೈತ ಸಂಘದ ಅದ್ಯಕ್ಷ ದರೂರು ಪುರುಷೋತ್ತಮ ಗೌಡ ಸುದ್ದಿಗೋಷ್ಟಿ ಯಲ್ಲಿ ಹೇಳಿದರು.

         ನಗರದ ಮಯೂರ ಹೋಟೆಲ್ ನಲ್ಲಿ ಅಪಾರ ರೈತ ಸಂಘದ ಮುಖಂಡರನ್ನೊಳಗೊಂಡು ಸುದ್ದಿಗೋಷ್ಟಿ ನಡೆಸಿದರು. ನಂತರ ಮಾತನಾಡಿದ ಅವರು ಅಂದಿನಿಂದ ಇಂದಿನವರೆಗೂ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭಗಳಲ್ಲಿ ರೈತರಿಗೆ ಕೆವಲ ಭರವಸೆಗಳು ಮಾತ್ರವೇ ನೀಡಿ ಗೆದ್ದ ಮೇಲೆ ರೈತರ ಕಡೆಗೆ ಗಮನ ಹರಿಸದೆ ತಮ್ಮ ಹಿಚ್ಚಾಶಕ್ತಿಯ ಅನುಗುಣವಾಗಿ ಆಡಳಿತ ಮಾಡಿದ್ದಾರೆ,ವಿನಹ್ಹ ನೀರಾವರಿ ಮತ್ತು ಬೆಂಬಲ ಬೆಲೆ ನಿಗದಿ ಹಾಗೂ ಇನ್ನಿತರ ಪ್ರಮುಖವಾದ ಗಂಭೀರ ಸಮಸ್ಯೆಗಳಿಗೆ ಸ್ಪಂದಿಸದೆ ಡೊಂಗಿ ರಾಜಕಾರಣ ಮಾಡಿ ಕಾಲಹರಣ ಮಾಡಿದ್ದಾರೆ, ಎಂದು ತಾರಟೆಗೆ ತೆಗೆದುಕೊಂಡರು.

         ಆದರೆ ಈ ಸಲ ಅಂತಹ ಟೊಳ್ಳು ಭರವಸೆಗಳ ರಾಜಕಾರಣ ನಡೆಯದು ಏಪ್ರಿಲ್ 20 ಒಳಗೆ ನಿಲುವು ಪ್ರಕಟಿಸಿದ ನಂತರ ಮುಂದೆ ಸಾಗಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆಯ ಸಂದೇಶ ರಾಜಕೀಯ ಪಕ್ಷಗಳಿಗೆ ನೀಡಿದರು. ಇಲ್ಲವಾದಲ್ಲಿ ರೈತ ಕುಟುಂಬಗಳಿಗೆ ಪೋನ್ ಕರೆ ಮೂಲಕ ನಮ್ಮ ಹಿತ ಕಾಯುವ ಹಾಗೂ ರೈತರ ಬೇಕು ಬೇಡಿಕೆಗಳಿಗೆ ಕೆಲಸ ಮಾಡುವ ವ್ಯಕ್ತಿಗೆ ಮತ ನೀಡುವಂತೆ ಕರೆ ಮತ್ತು ಮನವಿಗೆ ಮುಂದಾಗುತ್ತೇವೆ ಎಂದರು.

        ಕೆವಲ ಹತ್ತು ವರ್ಷಗಳ ಹಿಂದೆಯಷ್ಟೆ ಕೊಪ್ಪಳ ಜಿಲ್ಲೆಯಾಗಿ ಘೋಷಣೆ ಮಾಡಿತು, ಆದರೆ ಮಿನಿ ವಿಧಾನಸೌದ ನಿರ್ಮಿಸಿ ಒಂದೆಡೆಯಲ್ಲಿ ಕಛೇರಿಗಳನ್ನು ಇರಿಸಿದ್ದಾರೆ, ವಿಪರ್ಯಾಸವೆಂದರೆ ಬಳ್ಳಾರಿ ಜಿಲ್ಲೆ ಸ್ವಾತಂತ್ರ್ಯ ಪೂರ್ವದಿಂದ ಜಿಲ್ಲೆಯಾಗಿದೆ, ಆಡಳಿತ ಮಾಡಿದ ಎಲ್ಲಾ ರಾಜಕೀಯ ಪಕ್ಷಗಳಿಗೆ ನಾಚಿಕೆಗೆಡಿನ ಸಂಗತಿ ಎಂದರೆ ಇಲ್ಲಿಯವರೆಗೆ ಒಂದು ಮಿನಿ ವಿಧಾನಸೌದ ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.

       ನಮ್ಮ ಗಡಿಭಾಗದ ರಾಜ್ಯದ ಆಂದ್ರ ಪ್ರದೇಶದಲ್ಲಿ ಉಚಿತವಾಗಿ ಮರಳು ಹೇರಳವಾಗಿ ಬಡವರಿಗೆ ಮತ್ತು ರೈತರಿಗೆ ಅನುಕೂಲ ಮಾಡಿಕೊಟ್ಟಿದೆ, ಆದರೆ ನಮ್ಮ ರಾಜ್ಯದಲ್ಲಿ ದುಡ್ಡಿನ ಮರಳು ಸಿಕ್ಕರು ಕೂಡ ಪೊಲಿಸರ ಕಾಟಕ್ಕೆ ಬೇಸತ್ತು ಬಡ ಕೂಲಿ ಕಾರ್ಮಿಕರು ರೈತ ಕುಟುಂಬಗಳು ಮನೆಗಳು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.ಅದರಂತೆ ರೈತರ ಭೂಮಿಯನ್ನು ರಾಜ್ಯ ಸರ್ಕಾರ ಕಾರ್ಖಾನೆಗೆಂದೇ ಉದ್ಯೋಗದ ಭರವಸೆ ನೀಡಿ ವಶಪಡಿಸಿಕೊಂಡಿದೆ ಆದರೆ ರೈತರಿಗೆ ಭೂಮಿಯು ಇಲ್ಲ ಉದ್ಯೋಗನೂ
ಇಲ್ಲ ಎಂದು ಆಪಾದನೆ ಮಾಡಿದರು, ಇದು ಅಲ್ಲದೇ ಕೃಷ್ಣ ಮತ್ತು ತುಂಗಭದ್ರ ಮೇಲ್ಬಾಗದಲ್ಲಿ ನದಿಗಳ ಜೋಡಣೆ ಮಾಡಿ ಕೆಎಮ್‍ಆರ್ ಸಿ ಅನುದಾನವನ್ನು ನೀರಾವರಿ ಸೌಲಭ್ಯಕ್ಕೆ ಬಳಕೆ ಮಾಡಬೇಕೆಂದು ಒತ್ತಾಯಿಸಿದರು.

      ತುಂಗಭದ್ರಾ ನದಿಯಲ್ಲಿ ಹೂಳು 33 ಖಿಒಅ ತುಂಬಿದೆ ಅದನ್ನು ಹೂಳೆತ್ತುವ ಕಾರ್ಯಕ್ಕೆ ಮುಂದಾಗಬೇಕು ಎಂದರು. ಸಿರುಗುಪ್ಪ ತಾಲೂಕಿನ ಗೂಂಡಿಗನೂರು ಕೆರೆಯಲ್ಲಿ ಹೂಳೆತ್ತುವ ಕಾರ್ಯ ಖಾತ್ರಿ ಯೋಜನೆಯ ಅಡಿಯಲ್ಲಿ ಮುಂದಾಗಿದೆ ಅದಕ್ಕೆ ನಮಗೆ ಸಂತಸವಾಗಿದೆ, ಆದರೆ ಖಾತ್ರಿ ಯೋಜನೆಯ ಹಣ ದುರುಪಯೋಗ ಮಾಡಿಕೊಂಡು ಹಣವನ್ನು ವಿನಹ್ಹ ಕಾರಣ ಪೋಲ್ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನು ಉಂಟುಮಾಡುತ್ತದೆ, ಅದಕ್ಕೆ ಜಿಲ್ಲಾಡಳಿತ ಗಮನಹರಿಸಿ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯದ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಶ್ರೀಧರ್ ಜಾಲಿಹಾಳ್ ಶರಣಪ್ಪ ಗೌಡ, ಗಂಗಾವತಿ ವೀರೇಶ್, ರಾಮನ ಗೌಡ, ಶಿವಯ್ಯ ಕೊಂಚಗೇರಿ ಮಲ್ಲಪ್ಪ, ಪಂಪಾಪತಿ ರಾಜಶೇಖರ ಮತ್ತಿತರ ರೈತ ಮುಖಂಡರು ಉಪಸ್ಥಿತರಿದ್ದರು.

 

ರೈತರ ಹಕ್ಕೊತ್ತಾಯ ಗಳು

*ಕೃಷ್ಣ ಮತ್ತು ತುಂಗಭದ್ರಾ ಮೇಲ್ಬಾಗದಲ್ಲಿ ನದಿಗಳ ಜೋಡಣೆ ಯಾಗಬೇಕು
* ತುಂಗಭದ್ರಾ ನದಿಯ ಹೂಳು ತೆಗೆಯಬೇಕು
* ರೈತರ ಭೂಮಿಯನ್ನು ಖರೀದಿಸಿದೆ ಅದನ್ನು ವಾಪಸು ಮಾಡಬೇಕು, ಇಲ್ಲವೇ ಕಾರ್ಖಾನೆ ನಿರ್ಮಿಸಿ
ಉದ್ಯೋಗ ನೀಡಬೇಕು
* ಬಳ್ಳಾರಿಯಲ್ಲಿ ಒಂದು ಮಿನಿ ವಿಧಾನಸೌದ ನಿರ್ಮಾಣ ಶೀಘ್ರದಲ್ಲೇ ಆಗಬೇಕು
* ಉಚಿತವಾಗಿ ಮರಳು ಸಿಗುವಂತಾಗಬೇಕು
* ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಬೇಕು ಭದ್ರ * * * ಮೇಲ್ದಂಡೆ ಯೋಜನೆ ಶಿಘ್ರ ಜಾರಿಯಾಗಬೇಕು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap