ತುಮಕೂರು:
ಮಳೆಯಿಂದಾಗಿ ತುಮಕೂರು ಜಿಲ್ಲೆಯ ಗ್ರಾಮಾಂತರ ಭಾಗದ ಕಾಗ್ಗೆರೆ ಗ್ರಾಮದಿಂದ ತುಮಕೂರು ನಗರಕ್ಕೆ ಮಾರ್ಗ ಕಲ್ಪಿಸುವ ರಸ್ತೆ ವಿಪರೀತ ಹಾಳಾಗಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಳ್ಳವ ಬೆಳ್ಳಾವಿ ಹೋಬಳಿ ದೊಡ್ಡನಾರವಂಗಲ ಗ್ರಾಪಂಗೆ ಸೇರಿದ ಕಾಗ್ಗೆರೆ ಗ್ರಾಮದಿಂದ ದೊಡ್ಡನಾರವಂಗಲ, ಮುದಿಗೆರೆ, ದಿಬ್ಬೂರು ಮಾರ್ಗವಾಗಿ ತುಮಕೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ತುಂಬಾ ಹದಗೆಟ್ಟಿದ್ದು ಇದಕ್ಕೆ ಸಂಬಂಧಪಟ್ಟ ಶಾಸಕರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲೀ ಯಾರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ಕಾಗ್ಗೆರೆ ಗ್ರಾಮದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.