ಹಳ್ಳಿಯ ಸಿರಿ

ಹಾವೇರಿ :

   ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹಳ್ಳಿಯ ಸಿರಿ ಎಂಬ ಮನೋಜ್ಞ ಮಕ್ಕಳ ನಾಟಕ ನಗರದ ಜ್ಞಾನಗಂಗಾ ಶಿಕ್ಷಣ ಸಮಿತಿ ಪ್ರಾಥಮಿಕ ಶಾಲೆಯ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಪ್ರದರ್ಶನವಾಯಿತು.

     ಕನ್ನಡ ಮತ್ತು ಸಂಸ್ಕತಿ ಇಲಾಖೆ ಬೆಂಗಳೂರು, ಜ್ಞಾನಗಂಗಾ ಶಿಕ್ಷಣ ಸಮಿತಿ ಹಾಗೂ ಶೇಷಗಿರಿಯ ಗಜಾನನ ಯುವಕ ಮಂಡಳಿ ಸಂಯುಕ್ತವಾಗಿ ಆಯೋಜಿಸಿದ್ದ ನಾಟಕ ಪ್ರದರ್ಶನವನ್ನು ಸಮಿತಿಯ ಚೇರಮನ್ನರಾದ ಡಾ. ಜೆ ಆರ್ ಗುಡಿ ವಾದ್ಯ ನುಡಿಸುವ ಮೂಲಕ ಉದ್ಘಾಟಿಸಿದರು.

     ನಂತರ ಮಾತನಾಡಿದ ಅವರು ಡಾ. ಜೆ ಆರ್ ಗುಡಿ ಪಾಲಕರು ತಾವು ಕಾಣುವ ಕನಸುಗಳನ್ನು ಮಕ್ಕಳ ಮನಸ್ಸಿನ ಮೇಲೆ ಹೇರಬಾರದು. ಮಕ್ಕಳ ಆಸಕ್ತಿಯಂತೆ ಅವತನ್ನು ಬೆಳೆಸಬೇಕು. ಇಂದಿನ ಅನೇಕ ಸಮಸ್ಯೆಗಳಿಗೆ ರಂಗಭೂಮಿ ಮಾತ್ರ ಅರ್ಥೈಸಿ ಉತ್ತರಿಸ ಬಲ್ಲದು. ನಾಟಕಗಳು ಯಾಗಲೂ ಸಮಾಜದ ಕನ್ನಡಿ ಇದ್ದಂತೆ ಎಂದು ಹೇಳಿದರು.

      ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಸ್‍ಆರ್ ಹಿರೇಮಠ ಅವರು ಅತಿಥಿಯಾಗಿ ಸದಾ ಕ್ರಿಯಾ ಶೀಲವಾಗಿರುವ ಶೇಷಗಿರಿ ಕಲಾ ತಂಡ, ತಮ್ಮ ಹಳ್ಳಿಯ ಮಕ್ಕಳನ್ನೇ ಕಟ್ಟಿಕೊಂಡು ಮಕ್ಕಳ ರಂಭೂಮಿಯನ್ನು ಬೆಳೆಸುತ್ತಿರುವುದು ಶ್ಲಾಘನೀಯವೆಂದರು.

      ಶೇಷಗಿರಿ ಪ್ರಾಥಮಿಕ ಶಾಲೆಯ 21 ಮಕ್ಕಳು ಅಭಿನಯಿಸಿದ ಹಳ್ಳಿಯ ಸಿರಿ ನಾಟಕ ಮಕ್ಕಳ ಮನಸ್ಸನ್ನು ಗೆದ್ದಿತು. ವೇದಿಕೆಯಲ್ಲಿ ಹಿರಿಯ ಲೇಖಕ ಸತೀಶ ಕುಲಕರ್ಣಿ. ಮುಖ್ಯೋಪಾಧ್ಯಾರಾದ ಮಹಾಂತಿಮಠ, ಯುವ ಲೇಖಕಿ ರಾಜೇಶ್ವರಿ ಸಾರಂಗಮಠ, ಶೇಷಗಿರಿಕಲಾ ತಂಡದ ನಿರ್ದೇಶಕ ದೇವಿ ಪ್ರಸಾದ ಯರತೋಟಿ, ಸಿದ್ದಪ್ಪ ರೊಟ್ಟಿ, ಜಮೀರ ಪಠಾಣ ಶಿವಮೂರ್ತಿ ಇದ್ದರು.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link