ಜಯಂತಿಗಳ ಅರ್ಥಪೂರ್ಣ ಆಚರಣೆ : ಎಸ್.ಯೋಗೇಶ್ವರ

ಹಾವೇರಿ
 
   ಸಮಾಜ ಸುಧಾರಕರಾದ ಅಂಬಿಗರ ಚೌಡಯ್ಯ, ಸೊನ್ನಲಗಿ ಸಿದ್ಧರಾಮೇಶ್ವರ ಹಾಗೂ ವೇಮನರ ಜಯಂತಿಯನ್ನು ಎಲ್ಲ ಅಧಿಕಾರಿಗಳು ಹಾಗೂ ಸಮಾಜದ ಗಣ್ಯರು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸೋಣ ಎಂದು ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ಹೇಳಿದರು.
    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ವೇಮನ, ಸಿದ್ಧರಾಮೇಶ್ವರ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕುರಿತಾಗಿ ಜರುಗಿದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಎಂದಿನಂತೆ ಈ ಮಹಾನುಭಾವರ ಜಯಂತಿಯ ದಿನ ಆಯಾ ಸಮಾಜದ ಮುಖಂಡರೊಂದಿಗೆ ಎಲ್ಲ ಅಧಿಕಾರಿಗಳು, ವಿವಿಧ ಸಮಾಜ ಗಣ್ಯರು ಸಮನ್ವಯತೆಯಿಂದ ಜಯಂತಿಯನ್ನು ನಡೆಸೋಣ. ಸವಲತ್ತುಗಳಿಲ್ಲದ ಹಿಂದಿನ ಕಾಲದಲ್ಲಿ ಸಮಾಜದ ಸುಧಾರಣೆಗಾಗಿ ದುಡಿದ ಈ ಮಹಾನುಭಾವರ ಸಂದೇಶಗಳು ಪ್ರಸ್ತುತ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಹೊಸತನದಿಂದ ಕಾರ್ಯಕ್ರಮವನ್ನು ರೂಪಿಸೋಣ ಎಂದು ಹೇಳಿದರು.
    ಸಿದ್ಧರಾಮೇಶ್ವರ ಜಯಂತಿಯನ್ನು ಜನವರಿ 14 ರಂದು ನಾಗೇಂದ್ರನಮಟ್ಟಿಯ ಸಮುದಾಯ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಣಯಿಸಲಾಯಿತು. ಬೆಳಿಗ್ಗೆ 9-30ಕ್ಕೆ ಮೆರವಣಿಗೆ ಹಾಗೂ 2-30ಕ್ಕೆ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಯಿತು.  ಸಮಾಜದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ಪ್ರತಿಭಾನ್ವಿತರನ್ನು ಸನ್ಮಾನಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
   ವೇಮನ ಅವರ ಜಯಂತಿಯನ್ನು ಜನವರಿ 19 ರಂದು ಬೆಳಿಗ್ಗೆ 11-30 ಗಂಟೆಗೆ  ನಗರದ ದಿ.ದೇವರಾಜ ಅರಸು ಭವನದಲ್ಲಿ ಆಚರಿಸಲು ನಿರ್ಧರಿಸಲಾಯಿತು. ವಿಶೇಷ ಉಪನ್ಯಾಸಕರಾಗಿ ಕಾಂತೇಶ ಗೋಡಿಹಾಳ ಅವರನ್ನು ಆಹ್ವಾನಿಸಲು ಸಮಾಜದ ಮುಖಂಡರು ಸಲಹೆ ನೀಡಿದರು. ಸಮಾರಂಭದಲ್ಲಿ ವೇಮನ ಸಮಾಜದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ಪ್ರತಿಭಾನ್ವಿತರನ್ನು ಸನ್ಮಾನಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
    ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಜಿಲ್ಲಾ ಮಟ್ಟದಲ್ಲಿ ಜನವರಿ 22 ರಂದು ಗುರುಭವನದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲು ಸಮಾಜದ ಮುಖಂಡರ ಸಹಮತದೊಂದಿಗೆ ತೀರ್ಮಾನಿಸಲಾಯಿತು. ವಿಶೇಷ ಉಪನ್ಯಾಸಕರಾಗಿ ಎಂ.ಬಿ.ಅಂಬಿಗೇರ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ಪ್ರತಿಭಾನ್ವಿತರನ್ನು ಹಾಗೂ ಸಮಾಜದ ಮುಖಂಡರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು. ಬೆಳಿಗ್ಗೆ 11 ಗಂಟೆಗೆ ಮೆರವಣಿಗೆ ಕಾರ್ಯಕ್ರಮ, ಮಧ್ಯಾಹ್ನ 1-30ಕ್ಕೆ ವೇದಿಕೆ ಕಾರ್ಯಕ್ರಮ ನಡೆಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
    ಮೂವರು ಮಹಾನುಭಾವರ ಜಯಂತಿ ಆಚರಣೆಯ ದಿನದಂದು ಕಾರ್ಯಕ್ರಮಕ್ಕೆ ಯಾವುದೇ ಅಡಚಣೆಯಾಗದಂತೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆ ಮಾಡಬೇಕು. ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಮೆರವಣಿಗೆ ಮಾರ್ಗದ ಸ್ವಚ್ಛತೆ, ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಕುರಿತಂತೆ ಪೌರಾಯುಕ್ತರು ಕ್ರಮವಹಿಸಬೇಕು.
    ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಣ ಶಿಷ್ಟಾಚಾರದಂತೆ ಗಣ್ಯರ ಆಹ್ವಾನ, ವೇದಿಕೆಯ ವ್ಯವಸ್ಥೆ ಒಳಗೊಂಡಂತೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಣೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಲಾಯಿತು.
ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲು ಪೊಲೀಸ್ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಜಯಂತಿಯ ದಿನಗಳಂದು ಪೂರೈಕೆಯಾಗುವ ಆಹಾರ ಕುರಿತಂತೆ ಪೂರ್ವ ಪರೀಕ್ಷೆ ಕೈಗೊಂಡು ಸುರಕ್ಷತೆ ಬಗ್ಗೆ ವರದಿ ನೀಡಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. 
   ಮೂರು ಜಯಂತಿ ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಕ್ರಮವಹಿಸಬೇಕು. ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಶಶಿಕಲಾ ಹುಡೇದ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜನೀಯರ್ ಭಾವನಾಮೂರ್ತಿ, ಜಿಲ್ಲಾ ಪಂಚಾಯತ್ ಯೋಜನೆ ಮತ್ತು ಸಾಂಖಿಕ ವಿಭಾಗದ ಅಧಿಕಾರಿ ಮಣ್ಣವಡ್ಡರ, ತಹಶೀಲ್ದಾರ ಎಸ್.ಶಂಕರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಪೌರಾಯುಕ್ತ ಬಸವರಾಜ ಜಿದ್ದಿ, ವಿವಿಧ ಸಮಾಜದ ಸಂಘನೆಗಳ ಮುಖಂಡರುಗಳಾದ ಆಂಜನೇಯ ಗುಂಜಾಳ, ನಿರ್ಮಲಾ ಪ್ರಕಾಶ ಶೇಷಗಿರಿ, ಮಂಜುನಾಥ ಬೋವಿ, ದರಾರಾಮ ಸೊನ್ನದ, ಶಂಕರಣ್ಣ ಅಂಬಿಗೇರ, ರಾಜು ಕಲ್ಲೂರ, ಮಲ್ಲೇಶ ಬಾರ್ಕಿ, ಫಕ್ಕೀರಪ್ಪ, ದೇವರಾಜು, ಸುರೇಶ ವರದಹಳ್ಳಿ, ಲಕ್ಷ್ಮಣ ದೇವಗಿರಿ, ಎಸ್,ಎಚ್.ಗುಂಜಾಳ, ಹುಲಿಗೆಪ್ಪ, ನಾಗಪ್ಪ, ಬಸವರಾಜ, ದ್ಯಾಮಪ್ಪ, ಎಸ್.ಎಸ್.ಶಂಕ್ರಣ್ಣನವರ, ಮೈಲಾರೆಪ್ಪ, ಆನಂದಕುಮಾರ, ರವಿ ಪೂಜಾರ, ವಿ.ಜಿ.ದೊಡ್ಡಗೌಡರ, ಎಂ.ಎಂ.ಮೈದೂರ, ಆರ್.ಎ.ಪಾಟೀಲ, ಸಂತೋಷ್ ಮರ್ಚರೆಡ್ಡಿ, ಶಂಕರ ರಡ್ಡಿ, ಮಂಜುನಾಥ ಎಂ., ಕೃಷ್ಣ ರೆಡ್ಡಿ, ಎಸ್.ಪಿ.ತಾರಿಕೊಪ್ಪ ಸೇರಿದಂತೆ ವಿವಿಧ ಮುಖಂಡರು ,ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link