ಹಿರಿಯೂರು:
ನಗರದ ವಾಸವಿಮಹಲ್ ಎದುರಿನ ರಸ್ತೆಯಲ್ಲಿ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬದಂದು ಜೈ ಭೀಮ್ ಕ್ರೀಡಾ ಮತ್ತು ಸಾಂಕೃತಿಕ ಯುವಕ ಸಂಘದ ವತಿಯಿಂದ ಜೈ ಭೀಮ್ ಸಾರ್ವಜನಿಕ ಗ್ರಂಥಾಲಯ ಶಾಖೆಯನ್ನು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಎಲ್.ರಾಮಸ್ವಾಮಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಸಾರ್ವಜನಿಕರು ಟಿ.ವಿ. ಸಿನಿಮಾಗಳÀಂತಹ ದೃಷ್ಯ ಮಾಧ್ಯಮಗಳು ಹಾಗೂ ಇನ್‍ಟರ್‍ನೆಟ್, ಫೆಸ್‍ಬುಕ್, ವಾಟ್‍ಸಾಬ್‍ಗಳಂತಹ ಹಾಗೂ ಸಮಾಜಿಕ ಚಾಲತಾಣಗಳಿಂದ ಹೊರಬಂದು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಇದರಿಂದ ಮನೋಲ್ಲಾಸ ಹಾಗೂ ವ್ಯಕ್ತಿಯ ಕ್ರಿಯಾಶೀಲತೆ ಅಭಿವೃದ್ಧಿಗೊಳ್ಳುತ್ತಿದೆ ಅದ್ದರಿಂದ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಅವರು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈಭೀಮ್ ಕ್ರೀಡಾ ಮತ್ತು ಸಾಂಸ್ಕøತಿಕ ಯುವಕ ಸಂಘದ ಅಧ್ಯಕ್ಷರಾದ ಕೆ.ಜಿ.ಶ್ರೀಸದಾಶಿವಮೂರ್ತಿರವರು ವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪಿ.ಎಂ.ಕರಿಯಪ್ಪಪಿಟ್ಲಾಲಿ, ಲಕ್ಷ್ಮೀಕಾಂತ್‍ಸೂರಗೊಂಡನಹಳ್ಳಿ, ಆರ್.ಮೈಲುಸ್ವಾಮಿ ಶಿಕ್ಷಕರು, ಹೆಚ್.ಶ್ರೀನಿವಾಸ್, ಹನುಮಂತರಾಯ, ಬಸವರಾಜ್, ಮಹೇಶ್, ನರೇಂದ್ರಬಾಬು, ವಿರೂಪಾಕ್ಷಮ್ಮ, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಆರಂಭದಲ್ಲಿ ಮಹೇಶ್‍ರವರು ಸ್ವಾಗತಿಸಿದರು. ಕೊನೆಯಲ್ಲಿ ಬಸವರಾಜ್‍ರವರು ವಂದನಾರ್ಪಣೆಯನ್ನು ನೆರವೇರಿಸಿದರು.