ಹಿರಿಯೂರು:
ಮ್ಯಾಕ್ಲೂರಹಳ್ಳಿಯಲ್ಲಿ ಶ್ರೀರಂಗನಾಥಸ್ವಾಮಿ ದೇವಸ್ಥಾನ ಆವರಣದಲ್ಲಿ ಶ್ರೀಕೃಷ್ಣ ಪ್ರತಿಷ್ಟಾಪನೆಯನ್ನು ಮಾಡಿ, ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೊಸರು ಗಡಿಗೆ ಒಡೆಯುವುದು ಶ್ರೀಕೃಷ್ಣ ವೇಷದಾರಿ ಸ್ಪರ್ಧೆ ಪುಟಾಣಿಗಳಿಗೆ ಮ್ಯೂಜಿಕಲ್ ಚೇರ್ ಮತ್ತು ರಂಗೋಲಿ ಸ್ಪರ್ಧೆ ಮುದ್ದೆ ಊಟ ಮಾಡುವ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಉದ್ಘಾಟನೆಯನ್ನು ತಾಲ್ಲೂಕಿನ ಕಾಡುಗೊಲ್ಲ ಜನಾಂಗದ ಅಧ್ಯಕ್ಷರಾದ ರಂಗಯ್ಯಸ್ವಾಮಿಗೆ ಪುಷ್ಪಮಾಲೆ ಹಾಕುವುದರ ಮೂಲಕ ಚಾಲನೆ ನೀಡಿದರು.
ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಕರಾಗಿ ಅಕ್ಕಿ ರಾಜಣ್ಣ, ಮತ್ತು ಸಿ.ರಂಗಸ್ವಾಮಿ, ಸಿ.ಆರ್.ಟ್ಯೂಟೋರಿಯಲ್ ಇವರಿಂದ ಬಹುಮಾನ ವಿತರಣೆ ಶ್ರೀ ಕೃಷ್ಣಸೇವಾ ಸಮಿತಿ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.