ಹೈದರಾಬಾದ್ ಕರ್ನಾಟಕ 27ತಾಲ್ಲೂಕು ಬರಪೀಡಿತ ಎಂದು ಘೋಷಣೆ

ಸಿರುಗುಪ್ಪ :-

             ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ಹೈದರಾಬಾದ್ ಕರ್ನಾಟಕ 27ತಾಲ್ಲೂಕು ಸೇರಿ ಕರ್ನಾಟಕ ರಾಜ್ಯದ 86ತಾಲ್ಲೂಕು ಬರಪೀಡಿತ ತಾಲ್ಲೂಕು ಎಂದು ಬೆಂಗಳೂರಿನಲ್ಲಿ ಸಚಿವ ಸಂಪುಟದ ಉಪ ಸಮಿತಿ ಪ್ರಕಟಿಸಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಎ ಅಬ್ದುಲ್ ನಬಿ ತಿಳಿಸಿದ್ದಾರೆ.
               ಬರಪೀಡಿತ ತಾಲೂಕುಗಳಾದ ಬಳ್ಳಾರಿ, ಸಿರುಗುಪ್ಪ, ಸಂಡೂರು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹಡಗಲಿ, ಕೂಡ್ಲಿಗಿ, ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ರಾಯಚೂರು, ಸಿಂಧನೂರು, ಮಾನ್ವಿ, ಲಿಂಗಸೂಗೂರು, ದೆವದುರ್ಗ, ಕಲಬುರ್ಗಿ, ಜೆವರ್ಗಿ, ಸೆಡಂ, ಚಿತ್ತಾಪುರ, ಚಿಂಚೊಳಿ, ಅಫಜಲ್ಪುರ್,ಯಾದಗಿರಿ, ಶಹಾಪುರ್, ಸುರಪುರ್, ಬೀದರ್, ಹುಮ್ನಾಬಾದ್, 86ಸೇರಿ ತಾಲ್ಲೂಕು ಬರಪೀಡಿತ ಎಂದು ಘೋಷಿಸಲಾಗಿದೆ ಬರ ಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಕೊರತೆ ಕಾಣಿಸಿಕೊಂಡಿದ್ದು ಲಕ್ಷಣವೇ ಪರಿಹಾರಕಾರ್ಯ ಚುರುಕುಗೊಳಿಸಲು ತೀರ್ಮಾನಿಸಿದೆ ಭಾರತ ಸರ್ಕಾರದ ಮಾರ್ಗ ಸೂಚಿ ಯನ್ವಯ ಬರಪೀಡಿತ ತಾಲ್ಲೂಕುಗಳೆಂದು ಕರ್ನಾಟಕ ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
               ಬರಪೀಡಿತ 86ತಾಲ್ಲೂಕುಗಳಿಗೆ ಪ್ರತಿ ತಾಲ್ಲೂಕಿಗೆ 50ಲಕ್ಷ ರೂ ನಂತೆ ಕುಡಿಯುವ ನೀರು ಒದಗಿಸಲು ಶಾಸಕರ ಅಧ್ಯಕ್ಷತೆಯಲ್ಲಿರುವ ಸಮಿತಿ ಸೂಚಿಸುವ ಪ್ರದೇಶಗಳಿಗೆ ಒದಗಿಸುವಂತೆ ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ ಇದಕ್ಕಾಗಿ ಒಟ್ಟು 43ಕೋಟಿ ರೂ ಹಣ ಸರ್ಕಾರ ಜಿಲ್ಲಾ ಆಡಳಿತಕ್ಕೆ ಬಿಡುಗಡೆ ಮಾಡಲಾಗಿದೆ ಬರಪೀಡಿತ ತಾಲ್ಲೂಕುಗಳಲ್ಲಿ ಜಾನುವಾರುಗಳಿಗೆ ಮೇವು ಒದಗಿಸಲು ಪಶು ಸಂಗೋಪನಾ ಇಲಾಖೆಗೆ 15ಕೋಟಿ ರೂ ಹಣ ಬಿಡುಗಡೆ ಮಾಡಲಾಗುವುದು ಸರಕಾರ ಪ್ರಕಟಿಸಿದೆ ಎಂದು ಅಬ್ದುಲ್ ನಬಿ ಅವರು ಹೇಳಿದರು.

Recent Articles

spot_img

Related Stories

Share via
Copy link