ಕುಂದು ಕೊರತೆ ನಿವಾರಣಾ ಸಭೆಯ ಪೂರ್ವ ಸಿದ್ದತಾ ಸಭೆ

ಹರಪನಹಳ್ಳಿ

         ಫೆ.3 ರಂದು ಪಟ್ಟಣದಲ್ಲಿ ಆಯೋಜಿಸಿರುವ ಸಾರ್ವಜನಿಕರ ಕುಂದು ಕೊರತೆ ಹಾಗೂ ಕಾನೂನು ಅರಿವು ಶಿಬಿರದ ಯಶಸ್ಲಿಗೆ ಸರ್ವರು ಸಹಕರಿಸಬೇಕು ಎಂದು ಬಳ್ಳಾರಿ ಜಿಲ್ಲಾ ಹಿರಿಯ ನ್ಯಾಯಾಧೀಶ ಎಸ್ .ಬಿ. ಹಂದ್ರಾಳು ವಿವಿಧ ಇಲಾಖೆ ಅಧಿಕಾರಿಗಳಿಗೆ, ಸಂಘ ಸಂಸ್ಥೆಗಳಿಗೆ ಕರೆ ನೀಡಿದ್ದಾರೆ.

         ಅವರು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ಜ ಕುಂದು ಕೊರತೆ ನಿವಾರಣಾ ಸಭೆಯ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರ ಕುಂದು ಕೊರತೆ ಏನೆಂದು ಅರ್ಜಿ ಸ್ವೀಕರಿಸಿ ಸಂಬಂಧ ಪಟ್ಟ ಇಲಾಖೆಗಳಿಗೆ ಕಳಿಸಿ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.

        ಬೆಂಗಳೂರಿನ ತಥಾಗತ್ ಹಾರ್ಟ ಹಾಸ್ಪಿಟಲ್ ನ ಹೃದಯ ತಜ್ಞ ಡಾ.ಮಹಂತೇಶ ಚರಂತಿಮಠ ಅವರು ಮಾತನಾಡಿ ಫೆ.3 ರಂದು ನಡೆಯಲಿರುವ ಸಭೆಗೆ ಕರ್ನಾಟಕ ಹೈಕೋರ್ಟನ ಹಂಗಾಮಿ ಮುಖ್ಯ ನ್ಯಾಯಾಧೀಶ ನಾರಾಯಣಸ್ವಾಮಿ ಅವರು ಆಗಮಿಸುವರು ಎಂದು ಹೇಳಿದರು.

         ಆರೋಗ್ಯ ಶಿಬಿರ ಸಹ ಹಮ್ಮಿಕೊಳ್ಳಲಾಗುವುದು, ಸಾರ್ವಜನಿಕರು ಕಾನೂನು ಅರಿವು, ಕುಂದು ಕೊರತೆ, ಹಾಗೂ ಆರೋಗ್ಯ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

         ಎಂ.ಪಿ.ಪ್ರಕಾಶ್ ಸೇವಾ ಟ್ರಸ್ಟ್ ನ ಎಂ.ಪಿ.ವೀಣಾ ಅವರು ಮಾತನಾಡಿ ಅಂದಿನ ದಿನ ಕನಿಷ್ಟ 10 ಜನರಿಗಾದರೂ 371 ಜೆ ಪ್ರಮಾಣ ಪತ್ರಗಳನ್ನು ಸಾಂಕೇತಿಕವಾಗಿ ವಿತರಿಸಿದರೆ ದಿ. ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅವರು ಕಂದಾಯ ಅಧಿಕಾರಿಗಳನ್ನು ಕೋರಿದರು.

      ಆಗ ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಅವರು ಕೆಲವರಿಗಾದರೂ 371 ಜೆ ಸರ್ಟಿಪಿಕೇಟ್ ವಿತರಣೆಗೆ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.ರೀಚ್ ಸಂಸ್ಥೆಯ ಜಿ.ಎನ್ .ಸಿಂಹ ಮಾತನಾಡಿ ಅಭಿವೃದ್ದಿ ಕುರಿತು ಸಮನ್ವಯದ ಕೊರತೆ ಇದ್ದು, ಸಮನ್ವಯ ಸಮಿತಿ ರಚಿಸಿ ಎಂದು ಸಲಹೆ ನೀಡಿದರು.

         ಬಳ್ಳಾರಿ ಜಿ.ಪಂ ಉಪ ಕಾರ್ಯದರ್ಶಿ ಭಜಂತ್ರಿ, ತಹಶೀಲ್ದಾರ ಡಾ.ನಾಗವೇಣಿ, ಇಓ ಮಮತಾಹೊಸಗೌಡರು, ವಕೀಲ ರಾಮನಗೌಡ ಪಾಟೀಲ, ಸೀಡ್ಸ ಸಂಸ್ಥೆಯ ಸಂಜೀವಯ್ಯ, ಲೀಲಾ ಲಿಂಗರಾಜು, ಗ್ರೇಡ್ -2 ತಹಶೀಲ್ದಾರ ರವಿ, ಸಮಾಜ ಕಲ್ಯಾಣ ಇಲಾಖೆಯ ಆನಂದಡೊಳ್ಳಿನ್ ಪ್ರಭಾರಿ ಬಿಇಓ ಮಹೇಶ ಪೂಜಾರ, , ಸಿಡಿಪಿಒ ಮಹಂತಸ್ವಾಮಿ, ವಕೀಲ ಆರುಂಡಿ ನಾಗರಾಜ, ಭಾಷ ಮುಜಾವರ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link