ಚೆನ್ನೈ:

ಸಂಪೂರ್ಣ ಒಂದು ರೂಪಾಯಿ ನಾಣ್ಯಗಳನ್ನೇ ನೀಡಿ ತಮಿಳುನಾಡಿನ ಸೇಲಂ ಮೂಲದ ಯುವಕನೊಬ್ಬ 2.6 ಲಕ್ಷ ಮೌಲ್ಯದ ತನ್ನ ಕನಸಿನ ಬೈಕ್ ಖರೀದಿ ಮಾಡಿದ್ದಾನೆ. ಅಚ್ಚರಿಯೆಂದರೆ, ಇಡೀ ನಾಣ್ಯವನ್ನು ಎಣಿಸಲು ಬರೋಬ್ಬರಿ 10 ಗಂಟೆ ಸಮಯ ಹಿಡಿದಿದೆ.
ಬೈಕ್ ಖರೀದಿ ಮಾಡಿದ ಯುವಕನ ಹೆಸರು ವಿ ಭೂಪತಿ. ಕಳೆದ ಮೂರು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಭೂಪತಿ 1 ರೂ. ನಾಣ್ಯವನ್ನು ಸಂಗ್ರಹಿಸಿಕೊಂಡು ಬರುತ್ತಿದ್ದರು. ತನ್ನ ಉಳಿತಾಯ ಹಣವನ್ನೆಲ್ಲ ಒಮ್ಮೆಲೆ ಸಂಗ್ರಹಿಸಿ ಬೈಕ್ ಶೋರೋಮ್ಗೆ ತೆರಳಿ ತನ್ನ ಕನಸಿನ ಬೈಕ್ ನ್ಯೂ ಬಜಾಜ್ ಡಾಮಿನರ್ ಖರೀದಿ ಮಾಡಿದ್ದಾರೆ.
ಭಾರತದಲ್ಲಿ ಬೀದಿ ಬದಿ ಮಕ್ಕಳ ಸಂಖ್ಯೆ ಎಷ್ಟು? ಎನ್ಪಿಸಿಆರ್ ವರದಿ ಹೇಳುವುದೇನು?
ಭೂಪತಿ ತಂದಿದ್ದ ನಾಣ್ಯಗಳನ್ನು ಎಣಿಸಲು ಶೋರೂಮ್ ಸಿಬ್ಬಂದಿ ಬರೋಬ್ಬರಿ 10 ಗಂಟೆ ಸಮಯ ತೆಗೆದುಕೊಂಡಿದ್ದಾಗಿ ಭಾರತ್ ಏಜೆನ್ಸಿ ಕಂಪನಿಯ ಮ್ಯಾನೇಜರ್ ಮಹಾವಿಕ್ರಾಂತ್ ತಿಳಿಸಿದ್ದಾರೆ.
ಭೂಪತಿ ಬಿಸಿಎ ಪದವೀಧರರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಯೂಟ್ಯೂಬ್ ಚಾನೆಲ್ ಆರಂಭಿಸುವ ಮುನ್ನ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿದ್ದರು. ಬೈಕ್ ಖರೀದಿಸುವ ಕನಸನ್ನು ಮೂರು ವರ್ಷಗಳ ಹಿಂದೆಯೇ ಹೊಂದಿದ್ದರು. ಆದರೆ, ಎರಡು ಲಕ್ಷ ಮೌಲ್ಯದ ಬೈಕ್ ಖರೀದಿ ಮಾಡಲು ಅವರ ಬಳಿ ಅಷ್ಟೊಂದು ಮೊತ್ತ ಇರಲಿಲ್ಲ.
ಇದಾದ ಬಳಿಕ ಬೈಕ್ ಖರೀದಿಸುವ ಕನಸಿನೊಂದಿಗೆ ಹಣ ಸಂಗ್ರಹಿಸಲು ಮುಂದಾದ ಭೂಪತಿ ಪ್ರತಿದಿನ ಸಿಕ್ಕಷ್ಟು ಒಂದೊಂದು ರೂಪಾಯಿ ನಾಣ್ಯವನ್ನು ಸಂಗ್ರಹಿಸಿದರು. ಅಂತಿಮವಾಗಿ ಬೈಕ್ಗೆ ಬೇಕಾದಷ್ಟು ಹಣ ಸಂಗ್ರಹ ಮಾಡಿರುವ ಭೂಪತಿ ತನ್ನ ಇಚ್ಛೆಯ ಬೈಕ್ ಖರೀದಿ ಮಾಡಿ ಕನಸನ್ನು ನನಸು ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)

ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭ; ವಾರಕ್ಕೆ 3,250 ಟ್ರಿಪ್ ಪ್ರಯಾಣ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








