ಬೆಂಗಳೂರು:
211 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಈಚೆಗೆ ಆದೇಶ ಹೊರಡಿಸಿದ್ದ ಬೆನ್ನಲ್ಲೇ ಐವತ್ತಕ್ಕೂ ಹೆಚ್ಚು ಅಧಿಕಾರಿಗಳು ನಿಯೋಜಿತ ಸ್ಥಳದಲ್ಲಿ ಅಧಿಕಾರ ವಹಿಸಿಕೊಳ್ಳದಂತೆ ಸರ್ಕಾರವೇ ತಡೆ ನೀಡಿತ್ತು. ಈಗ 40 ಇನ್‌ಸ್ಪೆಕ್ಟರ್‌ಗಳು, 6 ಡಿವೈಎಸ್‌ಪಿಗಳ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅವರಲ್ಲಿ ಹಿಂದೆ ವಿವಿಧ ಸ್ಥಳಗಳಿಗೆ ನಿಯೋಜಿಸಿದ್ದ 12 ಇನ್‌ಸ್ಪೆಕ್ಟರ್‌ಗಳು ಹಾಗೂ 3 ಡಿವೈಎಸ್‌ಪಿಗಳ ವರ್ಗಾವಣೆಯನ್ನು ರದ್ದುಪಡಿಸಲಾಗಿದೆ.
ಇನ್‌ಸ್ಪೆಕ್ಟರ್‌ಗಳಾದ ನವೀನ್‌ಚಂದ್ರ ಜೋಗಿ, ವಜ್ರಮುನಿ ಕೆ., ಭಾಗ್ಯವತಿ ಜಿ. ಬಂಟಿ, ಜೆ. ಅಶ್ವತ್ಥ್‌ಗೌಡ, ಎಚ್.ಬಿ.ಸುನಿಲ್, ಮೋಹನ್ ಎನ್. ಹೆಡ್ಡಣ್ಣವರ್, ಎಸ್.ಪಾರ್ವತಮ್ಮ, ಶ್ರೀಧರ್ ಶಾಸ್ತ್ರಿ ಟಿ. ಗುಡಗಟ್ಟಿ, ಎಂ.ಗೋವಿಂದರಾಜು. ಎಚ್.ಎ.ಮಂಜು, ಸಿ.ಪಿ.ನವೀನ್, ಎಸ್.ಎಡ್ವಿನ್ ಪ್ರದೀಪ್ ಅವರ ವರ್ಗಾವಣೆ ಆದೇಶವನ್ನು ರದ್ದುಪಡಿಸಲಾಗಿದೆ. ಈ 12 ಇನ್‌ಸ್ಪೆಕ್ಟರ್‌ಗಳನ್ನು ಬೆಂಗಳೂರು ನಗರವು ಸೇರಿದಂತೆ ವಿವಿಧೆಡೆಗೆ ವರ್ಗಾವಣೆ ಮಾಡಲಾಗಿತ್ತು.
