ಹಬ್ಬದ ನಿಮಿತ್ತ 1 ಕೆ ಜಿ ಚಿಲ್ಲಿ ಚಿಕನ್ ತಿನ್ನುವ ಸ್ಪರ್ಧೆ: 40 ಸ್ಪರ್ಧಿಗಳ ವಿರುದ್ಧ ಪ್ರಕರಣ

ಈ ಸ್ಪರ್ಧೆಗೆ ಉತ್ಸವ ತಂಡದ ವತಿಯಿಂದ 15 ಕೆ.ಜಿ ಚಿಕನ್ ಫ್ರೈ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 15 ಯುವಕರಿಗೆ ಬಡಿಸಲಾಯಿತು. ಹಾಗೆಯೇ ಇದೇ ವೇಳೆ ಬಿರಿಯಾನಿ ತಿನ್ನುವ ಸ್ಪರ್ಧೆ ಕೂಡ ಏರ್ಪಡಿಸಲಾಗಿದ್ದು, ಇದರಲ್ಲಿ 21 ಯುವಕರು ಭಾಗಿಯಾಗಿದ್ದರು.

ಧರ್ಮಪುರಿ : ಮುಕ್ಕಲನಾಯಕನಪಟ್ಟಿ ಗ್ರಾಮದಲ್ಲಿ ಪೊಂಗಲ್ ಹಬ್ಬದ ನಿಮಿತ್ತ ಗ್ರಾಮಸ್ಥರು ಪ್ರತಿ ವರ್ಷ ಒಂದು ಕಿಲೋ ಚಿಲ್ಲಿ ಚಿಕನ್ ತಿನ್ನುವ ಸ್ಪರ್ಧೆ ನಡೆಸುವುದು ವಾಡಿಕೆ.

ಅದರಂತೆ ಈ ವರ್ಷವೂ ಯುವಕರಿಗಾಗಿ ಚಿಕನ್ ತಿನ್ನುವ ಸ್ಪರ್ಧೆಯನ್ನು ನಡೆಸಿದ್ದಾರೆ.

ಈ ಸ್ಪರ್ಧೆಗೆ ಉತ್ಸವ ತಂಡದ ವತಿಯಿಂದ 15 ಕೆ.ಜಿ ಚಿಕನ್ ಫ್ರೈ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 15 ಯುವಕರಿಗೆ ಬಡಿಸಲಾಯಿತು. ಹಾಗೆಯೇ ಇದೇ ವೇಳೆ ಬಿರಿಯಾನಿ ತಿನ್ನುವ ಸ್ಪರ್ಧೆ ಕೂಡ ಏರ್ಪಡಿಸಲಾಗಿದ್ದು, ಇದರಲ್ಲಿ 21 ಯುವಕರು ಭಾಗಿಯಾಗಿದ್ದರು.

ಯಾರು ಮೊದಲು ಬಿರಿಯಾನಿ ತಿನ್ನುತ್ತಾರೋ ಅವರನ್ನು ಜಯಶಾಲಿ ಎಂದು ಘೋಷಣೆ ಮಾಡಲಾಯಿತು. ಪೊಂಗಲ್​ನ ಈ ವಿಭಿನ್ನ ಸ್ಪರ್ಧೆಗೆ ಸಾಕಷ್ಟು ಮಂದಿ ಭಾಗಿಯಾಗಿ ಖುಷಿಪಟ್ಟರು.

ಹಬ್ಬದ ನಿಮಿತ್ತ 1 ಕೆ ಜಿ ಚಿಲ್ಲಿ ಚಿಕನ್ ತಿನ್ನುವ ಸ್ಪರ್ಧೆ

ಚಿಲ್ಲಿ ಚಿಕನ್​, ಬಿರಿಯಾನಿ ತಿಂದವರ ಮೇಲೆ ಪ್ರಕರಣ:

ಇನ್ನು ಕೊರೊನಾ ಹರಡುವುದನ್ನು ನಿಯಂತ್ರಿಸಲು ಭಾನುವಾರ ಸಂಪೂರ್ಣ ಲಾಕ್​ಡೌನ್​ ಜಾರಿ ಮಾಡಿದ್ದರಿಂದ ಕೊರೊನಾ ನಿಯಮ ಉಲ್ಲಂಘಿಸಿ ಪಂದ್ಯ ನಡೆಸಲಾಗಿದೆ. ಈ ಸಂಬಂಧ ಪೊಲೀಸರು ಮುಕ್ಕಲನಾಯಕನಪಟ್ಟಿ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಸ್ಪರ್ಧೆಗೆ ಬಂದಿದ್ದ ಯುವಕರು ಸೇರಿದಂತೆ ಒಟ್ಟು 40 ಮಂದಿಯ ವಿರುದ್ಧ ಆದಿಯಮನಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿಲ್ಲಿ ಚಿಕನ್, ಚಿಕನ್ ಬಿರಿಯಾನಿ ತಿಂದ ಸ್ಪರ್ಧಿಗಳ ಮೇಲೆ ಪೊಲೀಸರು ಕೇಸು ದಾಖಲಿಸಿರುವ ಘಟನೆ ಗ್ರಾಮಸ್ಥರಲ್ಲಿ ಭಾರೀ ಆಘಾತವನ್ನುಂಟು ಮಾಡಿದೆ.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link