ತುಮಕೂರು:
ರಾಜ್ಯದ ವಿವಿಧ ಜಿಲ್ಲೆಗಳು ಮಳೆರಾಯನ ಆರ್ಭಟಕ್ಕೆ ತತ್ತರಿಸಿದ್ದು , ಕಂದಿಕೆರೆ ಹೋಬಳಿಯ ಹನುಮಂತನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಸಿಡಿಲು ಬಡಿದು 20 ಕುರಿಗಳು ಮೃತಪಟ್ಟಿವೆ . ಗ್ರಾಮದ ಜಯಣ್ಣ ಎಂಬುವವರಿಗೆ ಈ ಕುರಿಗಳು ಸೇರಿದ್ದು, ಘಟನೆಯಿಂದ ಅವರು ಕಂಗಾಲಾಗಿದ್ದಾರೆ.
ಕುರಿ ಮೇಯಿಸಲು ಮಧ್ಯಾಹ್ನ ಹೋಗಿದ್ದಾಗ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ ಆರಂಭಿಸಿದೆ. ಹುಣಸೆ ಮರದಡಿ ಕುರಿಗಳು ನಿಂತಾಗ ಆಗ ಬಡಿದ ಸಿಡಿಲಿಗೆ ಬಲಿಯಾಗಿವೆ. ಮಳೆ ಸುರಿಯುವ ವೇಳೆಯಲ್ಲಿ ಇನ್ನೊಂದು ಮರದ ಕೆಳಗಿ ಆಶ್ರಯ ಪಡೆದಿದ್ದ ಜಯಣ್ಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತ್ತ ಚಿಕ್ಕಮಗಳೂರಿನಲ್ಲೂ ಸುರಿದ ಭಾರೀ ಮಳೆಗೆ ಇಂದು 48 ವರ್ಷದ ಓರ್ವ ಮಹಿಳೆ ಮೃತಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ