ಜಕಾರ್ತ:
ಭಾರತೀಯ ಕ್ರೀಡಾ ಪಟುಗಳು ಏಷ್ಯನ್ ಗೇಮ್ಸ್ನ 3ನೇ ದಿನವೂ ಪದಕ ಬೇಟೆಯನ್ನು ಮುಂದುವರೆಸಿದ್ದು, 10 ಮೀ.ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಚಿನ್ನ ಗೆದ್ದರೆ, ಭಾರತದವರೇ ಆದ ಅಭಿಷೇಕ್ ವರ್ಮಾ ಕಂಚಿನ ಪದಕ ಗೆದ್ದಿದ್ದಾರೆ.
10 ಮೀ ಏರ್ ಪಿಸ್ಟಲ್ ಸ್ಪರ್ಧೆಯಲ್ಲಿ 240.7 ಅಂಕಗಳೊಂದಿಗೆ ಚಿನ್ನ ಗೆದ್ದಿರುವ ಭಾರತದ 16 ವರ್ಷದ ಬಾಲಕ ಸೌರಭ್ ಚೌಧರಿ ದಾಖಲೆ ನಿರ್ಮಿಸಿದ್ದಾರೆ. ಇದೇ ಸ್ಪರ್ಧೆಯಲ್ಲಿ 29 ವರ್ಷದ ಭಾರತದ ಶೂಟಿಂಗ್ ಪಟು ಅಭಿಷೇಕ್ ವರ್ಮಾ ಅವರು 219.3 ಅಂಕ ಗಳಿಸಿ, 3ನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ