ಬೆಂಗಳೂರು : 26 ಶಾಲಾ ವಾಹನ ಚಾಲಕರ ಮೇಲೆ ಬಿತ್ತು ಕೇಸ್‌ ….!

ಬೆಂಗಳೂರು

   ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು ಸೋಮವಾರ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಇದೇ ವೇಳೆ ಪಾಸಣೆ ನಡೆಸಿದ 3,676 ಶಾಲಾ ಬಸ್‌ಗಳು ಮತ್ತು ವ್ಯಾನ್‌ಗಳ ಪೈಕಿ 26 ಶಾಲಾ ಬಸ್‌ಗಳ ಚಾಲಕರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇದು ಈ ವರ್ಷ ದಿನವೊಂದರಲ್ಲಿ ಶಾಲಾ ಬಸ್​​ಗಳ ಚಾಲಕರ ವಿರುದ್ಧ ದಾಖಲಿಸಲಾದ ಅತಿಹೆಚ್ಚಿನ ಸಂಖ್ಯೆಯ ಪ್ರಕರಣಗಳಾಗಿವೆ.

   ಚಿಕ್ಕ ವ್ಯಾನ್‌ಗಳಲ್ಲಿ ಶಾಲೆಗೆ ತೆರಳುವ ಮಕ್ಕಳು ಚಾಲಕರು ಮದ್ಯದ ವಾಸನೆ ಬರುತ್ತಿದ್ದಾರೆ ಎಂದು ಕೆಲವೊಮ್ಮೆ ದೂರು ನೀಡುತ್ತಾರೆ ಎಂದು 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬನ ಪೋಷಕರಾದ ಆರ್‌ಆರ್‌ನಗರದ ರೇಷ್ಮಾ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಮಕ್ಕಳಿಗಾಗಿ ಹೆಚ್ಚುವರಿ ಸುರಕ್ಷತಾ ಕ್ರಮಗಳ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಶಾಲಾ ಬಸ್​​​ಗಳಲ್ಲಿ ಸಹಾಯಕರನ್ನು ನೇಮಿಸುವುದು ಮತ್ತು ಬಸ್‌ಗಳ ಒಳಗೆ ಕಡ್ಡಾಯವಾಗಿ ಸಿಸಿಟಿವಿಗಳನ್ನು ಅಳವಡಿಸುವುದು ಅತ್ಯಗತ್ಯ. ಚಾಲಕರು ಮದ್ಯಪಾನ ಮಾಡಿದ್ದಾರೆಯೇ ಎಂದು ಪೋಷಕರು ಪರಿಶೀಲಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿದಿನ ಬೆಳಿಗ್ಗೆ ಬಸ್‌ಗಳು ಶಾಲಾ ಆವರಣದಿಂದ ಹೊರಡುವ ಮೊದಲು ಶಾಲೆಗಳ ಸಿಬ್ಬಂದಿ ತಪಾಸಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
   ಪ್ರಕರಣ ದಾಖಲಿಸಿರುವ ಚಾಲಕರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 185 ರ ಅಡಿಯಲ್ಲಿ ಆರೋಪ ಹೊರಿಸಲಾಗಿದ್ದು, ಅವರ ಚಾಲನಾ ಪರವಾನಗಿಗಳನ್ನು ಅಮಾನತುಗೊಳಿಸಲು ಆಯಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಶಿಫಾರಸು ಮಾಡಲಾಗಿದೆ.

Recent Articles

spot_img

Related Stories

Share via
Copy link
Powered by Social Snap