ನೂತನ ಪಧಾಧಿಕಾರಿಗಳಿಗೆ ಆಯ್ಕೆ

ಶಿಗ್ಗಾವಿ 

           ಟಿಪ್ಪು ಸುಲ್ತಾನ ಅಭಿಮಾನಿಗಳ ಮಹಾವೇದಿಕೆಯ ಪಧಾಧಿಕಾರಿಗಳು ಹಾಗೂ ಸದಸ್ಯರು ಸಂಘಟನೆಯ ಜೊತೆಗೆ ವಿವಿಧ ಸಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೋಳ್ಳಬೇಕು ಎಂದು ಟಿಪ್ಪು ಸುಲ್ತಾನ ಅಭಿಮಾನಿಗಳ ಮಹಾವೇದಿಕೆಯ ತಾಲೂಕಾ ಅಧ್ಯಕ್ಷ ಎಚ್.ಎಂ.ಕಳಸ ಹೇಳಿದರು.

           ಶಿಗ್ಗಾವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಪಧಾಧಿಕಾರಿಗಳಿಗೆ ಆದೇಶ ಪತ್ರವನ್ನು ನೀಡಿ ನೂತನ ಪಧಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಸಂಘಟನಾತ್ಮಕವಾಗಿ ಹಲವಾರು ಸಮಾಜಿಕ ಕಾರ್ಯಗಳನ್ನು ಮಾಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ಟಿಪ್ಪು ಸುಲ್ತಾನ ಅಭಿಮಾನಿಗಳ ಮಹಾವೇದಿಕೆಯ ಜಿಲ್ಲಾ ಅಧ್ಯಕ್ಷ ಅಬ್ದುಲ್ ಮಜೀದ್ ಎಚ್.ಮಾಳಗಿಮನಿ, ಹುಬ್ಬಳ್ಳಿಯ ಸಮೀಮ ಮುಲ್ಲಾ ಸೇರಿದಂತೆ ತಾಲೂಕಾ ಟಿಪ್ಪು ಸುಲ್ತಾನ ಅಭಿಮಾನಿಗಳ ಮಹಾವೇದಿಕೆಯ ಸದಸ್ಯರುಗಳು ಇದ್ದರು.

           ತಾಲೂಕಿನ ಕುನ್ನೂರ ಗ್ರಾಮದ ಟಿಪ್ಪು ಸುಲ್ತಾನ್ ಅಭಿಮಾನಿ ಮಹಾ ವೇದಿಕೆಯ ಗ್ರಾಮ ಘಟಕದ ನೂತನ ಅಧ್ಯಕ್ಷರಾಗಿ ಆಸ್ಕರ್‍ಅಲೀ ಮಮ್ಮದಸಾಬ ಮುಲ್ಲಾ ನೇಮಕವಾಗಿದ್ದಾರೆ.ಉಪಾಧ್ಯಕ್ಷರಾಗಿ ಹನೀಫ್. ಎಂ.ಬೋಮ್ಮನಹಳ್ಳಿ, ಕಾರ್ಯದರ್ಶಿಯಾಗಿ ದಾವಲಸಾಬ ಎ.ತಡಸ, ಸಹ ಕಾರ್ಯದರ್ಶಿಯಾಗಿ ಮಾಬೂಲಿ ಎಂ ಗುರ್ನಳ್ಳಿ, ಖಜಾಂಚಿಯಾಗಿ ಮೌಲಾಲಿ ಎಂ.ತಡಸ, ಸಂಘಟನಾ ಕಾರ್ಯದರ್ಶಿಯಾಗಿ ದಾದಾಫೀರ ಎಂ.ಸಂಶಿ, ಸಹ ಸಂಘಟನಾ ಕಾರ್ಯದರ್ಶಿಯಾಗಿ ಅಸ್ಲಾಂ ಎ.ತಡಸ, ಪ್ರಚಾರ ಸಮೀತಿಯ ಆಸೀಪ್ ಎಂ.ತಡಸ, ಸಹ ಪ್ರಚಾರ ಸಮೀತಿಯ ಮಾಬೂಲ್ಲಿ ಎಚ್.ಕಿಲ್ಲೇದಾರ ನೆಮಕಗೋಂಡರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link