ಕಲುಷಿತ ನೀರು ಸೇವಿಸಿ 30 ಮಂದಿ ಅಸ್ವಸ್ಥ…..!

ಬೆಂಗಳೂರು:

   ಕಲುಷಿತ ನೀರು ಸೇವಿಸಿ ನಗರದಲ್ಲಿ 30 ಮಂದಿ ಅಸ್ವಸ್ಥಗೊಂಡ ಘಟನೆಯ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಡಬ್ಲ್ಯೂಎಸ್ಎಸ್’ಬಿ ಅಧಿಕಾರಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ  ಮುಖ್ಯ ಎಂಜಿನಿಯರ್ ಸುರೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

   ಪರಿಶೀಲನೆ ವೇಳೆ ಪೂರ್ವ ವಲಯದ ಪುಲಕೇಶಿ ನಗರ ವಾರ್ಡ್‌ನ ಪ್ರೊಮೆನೇಡ್ ರಸ್ತೆಯ 2ನೇ ಕ್ರಾಸ್‌ನಲ್ಲಿರುವ ಹಳೆಯ ತುಕ್ಕು ಹಿಡಿದ ನೀರಿನ ಪೈಪ್‌ನಿಂದ ನೀರು ಮಾಲಿನ್ಯ ಉಂಟಾಗಿರುವುದಾಗಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.ತುಕ್ಕು ಹಿಡಿದಿದ್ದ ಪೈಪ್ ಹೊಡೆದಿದ್ದು, ಇದರಿಂದ ನೀರು ಕಲುಷಿತಗೊಂಡಿದೆ. ಇದೀಗ ಸಮಸ್ಯೆ ಸರಿಪಡಿಸಲಾಗಿದ್ದು, ಪ್ರೊಮೆನೇಡ್ ರಸ್ತೆಯ 2 ನೇ ಕ್ರಾಸ್‌ನಲ್ಲಿರುವ ಎಲ್ಲಾ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏತನ್ಮಧ್ಯೆ ಮಾಧ್ಯಮಗಳ ವರದಿಗಳಿಗೆ ಸ್ಥಳೀಯರು ಧನ್ಯವಾದಗಳನ್ನು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link