ಬರಪೀಡಿತ ತಾಲ್ಲೂಕುಗಳಿಗೆ 324 ಕೋಟಿ ಬಿಡುಗಡೆ….!

ಬೆಂಗಳೂರು:

      ರಾಜ್ಯದ 31 ಜಿಲ್ಲೆಗಳ ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್) 324 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

     ರಾಜ್ಯದಲ್ಲಿ ಈ ಬಾರಿ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಎಂದು ಈ ಹಿಂದೆ ರಾಜ್ಯ ಸರ್ಕಾರ (ಘೋಷಣೆ ಮಾಡಿತ್ತು. ಅಲ್ಲದೆ, ಕೇಂದ್ರ ಸರ್ಕಾರದ ಬಳಿ ಬರ ಪರಿಹಾರಕ್ಕೆ 17 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆಯೂ ಮನವಿ ಮಾಡಿದೆ. ಆದರೆ, ಕೇಂದ್ರ ಸರ್ಕಾರ ಈವರೆಗೂ ಒಂದೂ ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಬರ ಪರಿಹಾರವಾಗಿ 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

     ಬೆಂಗಳೂರು ನಗರ-7.50 ಕೋಟಿ ರೂ., ಬೆಂಗಳೂರು ಗ್ರಾಮಾಂತರ-6 ಕೋಟಿ ರೂ., ರಾಮನಗರ-7.50 ಕೋಟಿ ರೂ., ಕೋಲಾರ-9 ಕೋಟಿ ರೂ., ಚಿಕ್ಕಬಳ್ಳಾಪುರ-9 ಕೋಟಿ ರೂ., ತುಮಕೂರು-15 ಕೋಟಿ ರೂ., ಚಿತ್ರದುರ್ಗ-9 ಕೋಟಿ ರೂ., ದಾವಣಗೆರೆ-9 ಕೋಟಿ ರೂ., ಚಾಮರಾಜನಗರ-7.50 ಕೋಟಿ ರೂ., ಮೈಸೂರು-13.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

    ಹಾವೇರಿ-12 ಕೋಟಿ ರೂ., ಧಾರವಾಡ-12 ಕೋಟಿ ರೂ., ಶಿವಮೊಗ್ಗ-10.50 ಕೋಟಿ ರೂ., ಹಾಸನ-12 ಕೋಟಿ ರೂ., ಚಿಕ್ಕಮಗಳೂರು-12 ಕೋಟಿ ರೂ., ಕೊಡಗು-7.50 ಕೋಟಿ ರೂ., ದಕ್ಷಿಣ ಕನ್ನಡ-3 ಕೋಟಿ ರೂ., ಉಡುಪಿ-4.50 ಕೋಟಿ ರೂ., ಉತ್ತರ ಕನ್ನಡ-16.50 ಕೋಟಿ ರೂ., ಯಾದಗಿರಿ-9 ಕೋಟಿ ರೂ. ಹಾಗೂ ವಿಜಯನಗರ ಜಿಲ್ಲೆಗೆ 9 ಕೋಟಿ ರೂ. ಸೇರಿದಂತೆ ಒಟ್ಟು 324 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
    ಈ ಅನುದಾನವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಪೇಯಿಸ್ ರಸೀದಿ ಮೂಲಕ ಡ್ರಾ ಮಾಡಿ, ತಮ್ಮ ಡಿಡಿಆರ್‍ಎಫ್ ಪಿಡಿ ಖಾತೆಗೆ ಜಮಾ ಮಾಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.ಜೂನ್‌ನಲ್ಲಿ ರಾಜ್ಯದಲ್ಲಿ ಶೇ.56ರಷ್ಟು ಮಳೆ ಕೊರತೆಯಾಗಿದ್ದು, ಜುಲೈನಲ್ಲಿ ಶೇ.29 ಹಾಗೂ ಆಗಸ್ಟ್‌ನಲ್ಲಿ ಶೇ.73ರಷ್ಟು ಕೊರತೆಯಾಗಿದೆ. ಕರ್ನಾಟಕದಲ್ಲಿ ಕಳೆದ 125 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap