4 ಮತ್ತು 5ನೇ ವಾರ್ಡಿನಲ್ಲಿ ಬಿರುಸಿನ ಪ್ರಚಾರ ನಗರಸಭೆಯ 25 ಸ್ಥಾನಗಳಲ್ಲಿ ಗೆಲುವು;ತಿಪ್ಪಾರೆಡ್ಡಿ

ಚಿತ್ರದುರ್ಗ:

             ಮುಂದಿನ ತಿಂಗಳು ನಡೆಯಲಿರುವ ಪಾರ್ಲಿಮೆಂಟ್ ಚುನಾವಣೆಗೆ ನಗರಸಭೆ ಚುನಾವಣೆ ದಿಕ್ಸೂಚಿಯಾಗಿರುವುದರಿಂದ ಇಪ್ಪತ್ತೈದಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ನಗರಸಭೆಯಲ್ಲಿ ಅಧಿಕಾರ ಹಿಡಿಯಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಭ್ಯರ್ಥಿಗಳಿಗೆ ಸೂಚಿಸಿದರು.

             ನಾಲ್ಕು ಮತ್ತು ಐದನೆ ವಾರ್ಡ್‍ಗಳಲ್ಲಿ ಬಿಜೆಪಿ.ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಹರೀಶ್ ಮತ್ತು ಅಶೋಕ (ಜಿಮ್ಮಿ) ಇವರುಗಳ ಪರ ಶನಿವಾರ ದೊಡ್ಡಪೇಟೆಯಲ್ಲಿ ಬಿರುಸಿನ ಮತಯಾಚಿಸಿ ಮಾತನಾಡಿದ ಶಾಸಕರು, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲಿಸುವ ಮೂಲಕ ನಗರದ ಅಭಿವೃದ್ದಿಗೆ ಸಹಕರಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು
ನಗರಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಗೆದ್ದವರು ಕೆಲವೊಮ್ಮೆ ಅತ್ತ ಇತ್ತ ಹೋಗಿಬಿಡುತ್ತಾರೆ. ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳಬೇಕಾಗಿರುವುದರಿಂದ 35 ವಾರ್ಡ್‍ಗಳ ಪೈಕಿ 25 ಸೀಟುಗಳನ್ನಾದರೂ ಗೆಲ್ಲಿಸಿಕೊಂಡು ಈಗಿನಿಂದಲೇ ಪಾರ್ಲಿಮೆಂಟ್ ಚುನಾವಣೆಗೆ ತಯಾರಿ ನಡೆಸಿ ನರೇಂದ್ರಮೋದಿರವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಬೇಕಾಗಿರುವುದರಿಂದ ಬಿಜೆಪಿ.ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

               ಕೇಂದ್ರ ಸರ್ಕಾರದಿಂದ ನಗರಸಭೆಗೆ ನೇರವಾಗಿ ಅನುದಾನ ಬರುತ್ತದೆ. ಆದರೂ ಕಳೆದ ಹತ್ತು ಹದಿನೈದು ವರ್ಷಗಳಿಂದ ನಗರಸಭೆಯಲ್ಲಿ ಅಧಿಕಾರ ನಡೆಸುತ್ತಿರುವ ಜೆಡಿಎಸ್.ನವರಿಂದ ಯಾವುದೇ ಅಭಿವೃದ್ದಿಯಾಗಿಲ್ಲ. ಇದುವರೆಗೂ ನಗರಸಭೆಯ ಹಣದಲ್ಲಿ ಒಂದೂ ರಸ್ತೆಯನ್ನೂ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ಬಂದಿರುವ ಅನುದಾನದಲ್ಲಿ ವಿವಿಧ ರಸ್ತೆಗಳ ಕಾಮಗಾರಿ ನಡೆಯುತ್ತಿದೆ ಎಂದರು
2007-08 ರಲ್ಲಿ ಶಾಂತಿಸಾಗರದಿಂದ ಚಿತ್ರದುರ್ಗಕ್ಕೆ ನೀರು ತಂದು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದೇನೆ.

               ನಗರಸಭೆಯವರು ನೀರು ಸರಬರಾಜು ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದಾರೆ. ಕಳೆದ ನಲವತ್ತು ವರ್ಷಗಳ ಹಿಂದೆ ಯೂನಿಯನ್ ಪಾರ್ಕ್‍ನಲ್ಲಿ ಬಣ್ಣ ಬಣ್ಣದ ಕಾರಂಜಿಗಳಿದ್ದವು. ನಗರಸಭೆಯ ನಿರ್ಲಕ್ಷೆಯಿಂದ ಈಗ ಹಂದಿ ಗೂಡಾಗಿದೆ ಎಂದು ಆಪಾದಿಸಿದರು.
ಕೇಂದ್ರ ಸರ್ಕಾರದ ಅಮೃತ್ ಸಿಟಿ ಯೋಜನೆಯಡಿ 140 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಎರಡನೇ ಹಂತದ ನೀರಿನ ಯೋಜನೆ ಅನುಷ್ಟಾನಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ನಗರದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಪ್ಪಾರೆಡ್ಡಿ ಹೇಳಿದರು
ಯಾವುದೇ ಕಾರಣಕ್ಕೂ ನಗರಸಭೆ ಅಧಿಕಾರವನ್ನು ಈ ಸಾರಿ ಬೇರೆ ಪಕ್ಷದವರಿಗೆ ಬಿಟ್ಟುಕೊಡಬಾರದು. ಅದಕ್ಕಾಗಿ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕಾರ್ಯಕರ್ತರು ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

               ಐದನೇ ವಾರ್ಡ್‍ನ ಬಿಜೆಪಿ ಅಭ್ಯರ್ಥಿ ಹರೀಶ್, ನಾಲ್ಕನೇ ವಾರ್ಡ್‍ನ ಅಭ್ಯರ್ಥಿ ಅಶೋಕ್ ಮತಯಾಚನೆಯಲ್ಲಿದ್ದರು.
ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್, ಪ್ರಧಾನ ಕಾರ್ಯದರ್ಶಿ ಮುರುಳಿ, ವಕ್ತಾರ ನಾಗರಾಜ್‍ಬೇದ್ರೆ, ಶಂಭು, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಶ್‍ಸಿದ್ದಾಪುರ, ಸತ್ಯನಾರಾಯಣ, ನಗರ ಮಂಡಲ ಅಧ್ಯಕ್ಷ ತಿಪ್ಪೇಸ್ವಾಮಿ, ನರೇಂದ್ರ, ಮೋಹನ್, ವೇದಾವತಿ, ಲೀಲಾವತಿ, ವೀಣ, ಮಂಜುಳಮ್ಮ, ಅನ್ನಪೂರ್ಣಮ್ಮ, ವಿಜಯಲಕ್ಷ್ಮೀ, ಜ್ಯೋತಿಕುಮಾರಿ, ಗಾಯಿತ್ರಿ, ಸೇರಿದಂತೆ ನೂರಾರು ಕಾರ್ಯಕರ್ತರು ಕೈಯಲ್ಲಿ ಬಿಜೆಪಿ. ಭಾವುಟಗಳನ್ನು ಹಿಡಿದು ಅಭ್ಯರ್ಥಿಗಳ ಪರ ಮತಯಾಚನೆಯಲ್ಲಿ ತೊಡಗಿದ್ದರು.

Recent Articles

spot_img

Related Stories

Share via
Copy link
Powered by Social Snap