ಹಗರಿಬೊಮ್ಮನಹಳ್ಳಿ:
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಾಡನ್ನೆ ನಾಶಮಾಡುತ್ತಾ ಹೊರಟಿದ್ದು ಮುಂದಿನ ದಿನಗಳಲ್ಲಿ ಮನುಕುಲದ ನಾಶಕ್ಕೆ ಕಾರಣವಾಗಲಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ತಂಬ್ರಹಳ್ಳಿಯ ಪೋಲೀಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಹಸಿರು ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ನಾಶವಾಗಿ ಈಗಾಗಲೇ ನಮ್ಮ ಮೇಲೆ ಅನೇಕ ರೋಗರುಜಿನಗಳು ಆಕ್ರಮಣದಾಳಿ ನಡೆಸುತ್ತಿವೆ. ಇದಕ್ಕೆಲ್ಲ, ನಮ್ಮ-ನಿಮ್ಮ ಸುತ್ತಲಿನ ಪರಿಸರ ನಾಶವೇ ಕಾರಣವಾಗಿದೆ. ಆದ್ದರಿಂದ ಈಗ ಇರುವಂತ ಪರಿಸರವನ್ನು ಉಳಿಸಿ ಮತ್ತು ಬೆಳೆಸಿಕೊಂಡು ಹೋಗುವಂತ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಮಾಜ ಸೇವಕಿ ಗೀತಾಬಾಯಿ ಭೀಮಾನಾಯ್ಕ್ ಮಾತನಾಡಿ, ಜಾಗತಿಕ ತಾಪಮಾನ ತಗ್ಗಿಸುವುದು ಸೇರಿದಂತೆ ಪರಿಸರ ರಕ್ಷಣೆಯು ಕೇವಲ ಮಾತಿನಲ್ಲಿ ಹೇಳುತಿದ್ದಾರೆ, ಹತ್ತಾರು ವರ್ಷಗಳ ಹಿಂದೆಯೇ ಸಾಲು ಸಾಲು ಮರಗಳನ್ನು ಬೆಳೆಸಿ ಪರಿಸರ ರಕ್ಷಣೆಗೆ ಮುಂದಾದ ಮಹಾತಾಯಿ ಸಾಲು ಮರದ ತಿಮ್ಮಕ್ಕನಂತೆ ಪರಿಸರ ಪ್ರೇಮ ಪ್ರತಿಯೊಬ್ಬರು ಆಗಬೇಕು. ಆವರ ಮಾರ್ಗದರ್ಶನ ನಮಗೆ ದಾರಿದೀಪವಾಗಬೇಕು ಎಂದರು.
ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೊಟೇಶ್ ಮಾತನಾಡಿ, ಇದೇ ರೀತಿ ಮನುಷ್ಯ ಗಿಡಮರಗಳನ್ನು ಕಡಿಯುತ್ತಾ ಹೋದರೆ, ಶಿಘ್ರದಲ್ಲೇ ಇಡೀ ಮನುಕುಲವೇ ಸರ್ವನಾಶವಾಗುವ ಕಾಲ ದೂರವಿಲ್ಲ. ಆದ್ದರಿಂದ ಮನೆಗೊಂದು ಮರ ಬೆಳೆಸಿ, ಪರಿಸರ ಉಳಿಸಿ ಎಂದರು.
ಮಾಳಗಿ ದುರುಗಪ್ಪ ಉಪನ್ಯಾಸ ನೀಡಿದರು, ಹುಬ್ಬಳ್ಳಿಯ ಅಸಿಸ್ಟೆಂಟ್ ಕಮಿಷನರ್ ಯಶೋಧ ಹೂಸುರು, ಉಮೇಶ್ ಮಾತನಾಡಿದರು.
ಸಾಲು ಮರದ ವೀರಾಚಾರಿ, ಎಸ್.ಗಿರೀಶ್ ದೇವರಮನಿ, ಆರ್.ಬಿ.ಹನುಮಂತಪ್ಪ, ಬಲ್ಲೂರು ಉಮೇಶ್, ತಾಪಂ.ಸದಸ್ಯ ಕೊಟ್ರೇಶ್, ಗ್ರಾಪಂ.ಸದಸ್ಯ ಗಿರೀಶ್, ಕಸಾಪ ಅಧ್ಯಕ್ಷ ಶಿವಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಮಲ್ಲಪ್ಪ ಹೊರಪೇಟೆ, ಗ್ರಾ.ಪಂ.ಅಧ್ಯಕ್ಷೆ ರಜೀಯಾಬೇಗಂ, ಗ್ರಾಪಂ.ಸದಸ್ಯೆ ಹನುಮಂತಮ್ಮ, ಎ.ಎಂ.ಪಿ ವಾಗೀಶ್, ಸಮಾಜ ಕಲ್ಯಾಣಾಧಿಕಾರಿ ದಿನೇಶ್ ಸೇರಿದಂತೆ ಶಾಲಾ ವಿಧ್ಯಾರ್ಥಿಗಳು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು ಹಾಗೂ ಕರ್ನಾಟಕ ರಕ್ಷಣಾ ಸೇನೆ ಸಾಲುಮರದ ತಿಮ್ಮಕ್ಕನವರನ್ನು ಸನ್ಮಾನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
