ಎಂ.ಪಿ.ಪ್ರಕಾಶ್‍ ರಾಜಕೀಯ ಟ್ರಬಲ್ ಶೂಟರ್ …!!

ಹೂವಿನಹಡಗಲಿ :

     ಮಾಜಿ ಉಪಮುಖ್ಯಮಂತ್ರಿ ನಾಡುಕಂಡ ಧೀಮಂತ ರಾಜಕಾರಣಿ, ಆತ್ಮೀಯ ಒಡನಾಡಿ ಎಂ.ಪಿ.ಪ್ರಕಾಶ್‍ರವರು ಸಾಂಸ್ಕøತಿಕ ರಾಯಭಾರಿಯಾಗಿರದೇ ತಮ್ಮ ಅಪಾರ ಅನುಭವದಿಂದ ರಾಜಕೀಯ ಟ್ರಬಲ್ ಶೂಟರ್ ಆಗಿದ್ದರು ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅಭಿಪ್ರಾಯ ಪಟ್ಟರು.

        ಪಟ್ಟಣದ ರಂಗಭಾರತಿಯ ರಂಗಮಂದಿರದಲ್ಲಿ ರಂಗಭಾರತಿ ಎಂ.ಪಿ.ಪ್ರಕಾಶ್ ಪ್ರತಿಷ್ಠಾನ ಮತ್ತು ಎಂ.ಪಿ.ಪ್ರಕಾಶ್ ಸಮಾಜಮುಖಿಟ್ರಸ್ಟನ ಸಹಯೋಗದಲ್ಲಿ ಆಯೋಜಿಸಿದ್ದ ಒಂಬತ್ತನೇ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನುಡಿನಮನ ಸಲ್ಲಿಸಿ ಮಾತನಾಡಿದರು.

        1974ರಿಂದ ಎಂ.ಪಿ.ಪ್ರಕಾಶ್‍ರೊಂದಿಗೆ ಒಡನಾಟಹೊಂದಿ, ಅವರು ರಾಜ್ಯದ ವಿಧಾನಸಭಾ ಸದಸ್ಯರಾಗಿ 1983ರ ಪ್ರವೇಶದಿಂದ ಉಪಮುಖ್ಯಮಂತ್ರಿಯಾಗುವವರೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅವರೊಬ್ಬ ವ್ಯಕ್ತಿಯಾಗಿರದೇ ಶಕ್ತಿಯಾಗಿದ್ದರು ಎಂದ ಸಿಂಧ್ಯಾರವರು ಕೃಷಿ, ಸಾರಿಗೆ, ಗ್ರಾಮೀಣಾಭಿವೃದ್ದಿ, ಸಂಸದೀಯ ವ್ಯವಹಾರಗಳಂತಹ ಪ್ರಮುಖ 16 ಖಾತೆ ನಿರ್ವಹಣೆ ಮಾಡಿ ಸದನದಲ್ಲಿ ಯಾವುದೇ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡಬಲ್ಲವರಾಗಿದ್ದರು.

         ಲೋಹಿಯಾವಾದ ಸಮಾಜವಾದದ ಚಿಂತನೆ ಹೊಂದಿ ಜಾತ್ಯಾತೀತ ಪರಿಕಲ್ಪನೆ ಹೊಂದಿದ ಪ್ರಕಾಶರು ಈಗಿನ ಸ್ವಚ್ಚ ಭಾರತ್ ಕಾರ್ಯಕ್ರಮಕ್ಕೆ ಪೂರಕವಾಗಿ ತಾವು ಸಚಿವರಾಗಿದ್ದಾಗಲೇ, ಕರ್ನಾಟಕದಲ್ಲಿ ನಿರ್ಮಲಭಾರತ್, ಯೋಜನೆ ಜಾರಿಗೆ ಗ್ರಾಮೀಣ ಮಹಿಳೆಯರು ಬಯಲು ಬಹಿರ್ದೆಸೆಗೆ ಹೋಗದ ಹಾಗೆ ಯೋಜನೆ ರೂಪಿಸಿದ ಕೀರ್ತಿ ಹಾಗೂ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿದ ಕೀರ್ತಿ ಪ್ರಕಾಶ್‍ರವರಿಗೆ ಸಲ್ಲುತ್ತದೆ ಎಂದರು.

         ಹಂಪಿ ಉತ್ಸವದ ರೂವಾರಿಯಾಗಿ ಪ್ರತಿಯೊಂದು ಜಿಲ್ಲೆಗೆ ಉತ್ಸವದ ಪರಿಕಲ್ಪನೆಹೊಂದಿ ಜನಪರ ಚಳುವಳಿ ರೂಪಿಸುತ್ತಿದ್ದರು. ಸರಳ ಸಜ್ಜನಿಕೆಯ ಪ್ರಮಾಣಿಕತೆಯಿಂದ ಅಜಾತಶತೃವಾಗಿ ಹೊರಹೊಮ್ಮಿದ್ದರು. ಆದರೆ ಇಂದು ಕಲೆ, ಸಂಸ್ಕøತಿ, ಸಾಹಿತ್ಯ, ಸಾಹಿತ್ಯವನ್ನು ಕಲೆ ಕಲಾವಿದರನ್ನು ಗೌರವಿಸುತ್ತಿದ್ದ ಎಂ.ಪಿ.ಪ್ರಕಾಶರು ಮತ್ತು ಅವರ ಪುತ್ರ ಎಂ.ಪಿ.ರವೀಂದ್ರ ಅಗಲಿಕೆ ಬಳ್ಳಾರಿ ಜಿಲ್ಲೆಗೆ ಈ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬದ ಬಗ್ಗೆ ಬಳ್ಳಾರಿ ಜಿಲ್ಲೆಯ ಜನತೆ ಆಲೋಚಿಸಿ ಅವರ ಜೊತೆಗೆ ನಿಂತು ಶಕ್ತಿ ತುಂಬುವ ಕಾರ್ಯ ಮಾಡಬೇಕಾಗಿದೆ ಎಂದರು.

           ಎಂ.ಪಿ.ಪ್ರಕಾಶ್‍ರ ನಿಧನದ ನಂತರ ಬಳ್ಳಾರಿ ಜಿಲ್ಲೆಯ ನಾಯಕತ್ವ ಪ್ರಶ್ನೆಯಾಗಿಯೇ ಉಳಿದಿದ್ದು, ಯುವಜನತೆ ಅವರ ವ್ಯಕ್ತಿತ್ವವನ್ನು ಮಾದರಿಯಾಗಿರಿಸಿಕೊಂಡು ತತ್ವ, ಆದರ್ಶಗಳನ್ನು ಪಾಲಿಸಲು ಮುಂದಾಗಬೇಕೆಂದು ಕರೆ ನೀಡಿದರು.

         ಕಾರ್ಮಿಕ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಜಾರ್ಜ್‍ಫನಾಂಡೀಸ್‍ರವರು ಎಂ.ಪಿ.ಪ್ರಕಾಶ್‍ರವರಿಗೆ ಹತ್ತಿರದ ಒಡನಾಡಿಯಾಗಿದ್ದು, ಮಂಗಳೂರಿನಲ್ಲಿ ಹುಟ್ಟಿ, ಮುಂಬೈನಲ್ಲಿ ಆಟೋಚಾಲಕರ ಪರವಾಗಿ ಹೋರಾಟ ನಡೆಸಿ, ರೈಲಿಗಾಗಿ ಹೋರಾಟನಡೆಸಿ, ಜೈಲಿನಲ್ಲಿಯೇ ಇದ್ದು, ಗೆದ್ದುಬಂದು ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲಿ ಜನತಾ ಪಕ್ಷವನ್ನು ಹುಟ್ಟುಹಾಕಿದ ಕೀರ್ತಿ ಜಾರ್ಜ್ ಫನಾಂಡೀಸ್‍ರವರಿಗೆ ಸಲ್ಲುತ್ತದೆ ಎಂದರು.

         ಹಡಗಲಿ ಗವಿಮಠದ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು, ಹಿರೇಮಲ್ಲನಕೆರೆ ಮಠದ ಚನ್ನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪ್ರಗತಿಪರ ಚಿಂತಪಕ ಅಮೀನ್‍ಮಟ್ಟು, ಶ್ರೀಮತಿ ರುದ್ರಾಂಭ ಎಂ.ಪಿ.ಪ್ರಕಾಶ್, ರೈತ ಮುಖಂಡ ವೀರಸಂಗಯ್ಯ ಎಂ.ಪಿ.ಪ್ರಕಾಶ್ ಪ್ರತಿಷ್ಠಾನದ ಅಧ್ಯಕ್ಷ ಸೊಪ್ಪಿನ ಬಾಳಪ್ಪ, ಉಪಸ್ಥಿತರಿದ್ದರು.

         ಆರಂಭದಲ್ಲಿ ಮಹೇಶ ಪ್ರಾರ್ಥಿಸಿ, ಉಪನ್ಯಾಸಕ ಶಾಂತಮೂರ್ತಿ.ಬಿ.ಕುಲಕರ್ಣಿ ಸ್ವಾಗತಿಸಿ, ರಂಗಭಾರತಿ ಕಾರ್ಯದರ್ಶಿ ದ್ವಾರಕೀಶರೆಡ್ಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಪಿ.ಎಂ.ಕೊಟ್ರಸ್ವಾಮಿ, ರಂಗಭಾರತಿ ಕಾರ್ಯಾಧ್ಯೆಕ್ಷೆ ಎಂ.ಪಿ.ಸುಮಾ ವಿಜಯ ನಿರ್ವಹಿಸಿದರು. ರಂಗಭಾರತಿ ಕಲಾವಿದರಿಂದ ಮಲ್ಲಕಂಭ ಪ್ರದರ್ಶನ, ಜಾನಪದ ನೃತ್ಯ ಹಾಗೂ ಮಂಜು ಕೊಂಬಳಿ ನಿರ್ದೇಶನದ ಶ್ರದ್ಧಾ ಕಿರು ನಾಟಕ ಹಾಗೂ ಸಂಗೀತಕಟ್ಟಿಮನಿ ಮತ್ತು ತಂಡದಿಂದ ಗೀತನಮನ ನಡೆಸಿಕೊಟ್ಟರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link